Select Your Language

Notifications

webdunia
webdunia
webdunia
webdunia

ಪತ್ನಿಯನ್ನು ಪರಪುರುಷರ ಜತೆ ಮಲಗುವಂತೆ ಬಲವಂತ ಮಾಡಿದ ಪತಿ

ಪತ್ನಿಯನ್ನು ಪರಪುರುಷರ ಜತೆ ಮಲಗುವಂತೆ ಬಲವಂತ ಮಾಡಿದ ಪತಿ
, ಶನಿವಾರ, 7 ಸೆಪ್ಟಂಬರ್ 2013 (20:58 IST)
PR
PR
ಭೂಪಾಲ್: ಭೂಪಾಲ್‌ನ ಸರ್ಕಾರಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ ಬಡ್ತಿ ಪಡೆಯುವ ಆಸೆಯಿಂದ ತನ್ನ ಪತ್ನಿಯನ್ನು ಹಿರಿಯ ಅಧಿಕಾರಿಗಳ ಜತೆ ಹಾಸಿಗೆ ಹಂಚಿಕೊಳ್ಳುವಂತೆ ಬಲವಂತ ಮಾಡಿದ ಆಘಾತಕಾರಿ ವಿದ್ಯಮಾನ ವರದಿಯಾಗಿದೆ. ತಾವಿಬ್ಬರು 2000ದಲ್ಲಿ ವಿವಾಹವಾಗಿದ್ದು, ತನ್ನ ಪತಿ ಅವನ ಕಚೇರಿಯ 6 ಮಂದಿ ಸಹೋದ್ಯೋಗಿಗಳ ಜತೆ ಲೈಂಗಿಕ ಕ್ರಿಯೆ ನಡೆಸುವಂತೆ ನನಗೆ ಬಲವಂತ ಮಾಡಿದರು ಎಂದು ಮಹಿಳೆ ಆರೋಪಿಸಿದ್ದಾಳೆ. ಪೊಲೀಸರು ಕೂಡಲೇ ಪತಿ ಮತ್ತು 6 ಮಂದಿಯ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದು, ಬಂಧಿಸಿದ್ದಾರೆ.

ಅಪೆಕ್ಸ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ಪತಿ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. ನನ್ನ ಪತ್ನಿಯ ಆರೋಪಗಳು ಕಾನೂನುಬದ್ಧವಾಗಿ ಅನರ್ಹವಾಗಿದ್ದು, ಅವಳು ಸ್ಕ್ರಿಜೋಫಿನಿಯಾ ಕಾಯಿಲೆಯಿಂದ ಬಳಲುತ್ತಿದ್ದಾಳೆ ಎಂದು ಪತಿ ದೂರಿದ್ದಾರೆ. ಪತಿಯ ವಿರುದ್ಧ ಇನ್ನೂ ಕೆಲವು ಆರೋಪಗಳನ್ನು ಪತ್ನಿ ಮಾಡಿದ್ದಾಳೆ. ನನ್ನ ಪತಿ ನನ್ನ ಜತೆ ಬಲವಂತವಾಗಿ ಅಸಹಜವಾದ ಸೆಕ್ಸ್ ಕಾಯಮ್ಮಾಗಿ ನಡೆಸುತ್ತಿದ್ದ.

ಅವನ ಇಬ್ಬರು ಸ್ನೇಹಿತರನ್ನು ಕರೆದು ನನ್ನ ಜತೆ ಮಲಗುವಂತೆ ಅವನು ಸೂಚಿಸಿದ್ದ ಎಂದು ಹೇಳಿದ್ದಾಳೆ. ಪತಿಯ ಎಲ್ಲ ಸ್ನೇಹಿತರು ನನ್ನ ಜತೆ ಅಸಹಜ ಸೆಕ್ಸ್ ನಡೆಸಿದ್ದಾರೆ. ಅವರು ನನ್ನನ್ನು ಚೆನ್ನಾಗಿ ಥಳಿಸಿ ಅಸಹ್ಯ ಕೃತ್ಯಗಳನ್ನು ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಬರೆದಿದ್ದಾಳೆ. ಅವನ ಮಾತು ಕೇಳದಿದ್ದಾಗ, ನನ್ನ ಪಾನೀಯದಲ್ಲಿ ಮತ್ತುಬರಿಸುವ ವಸ್ತುಗಳನ್ನು ಹಾಕಿ ಖಿನ್ನತೆಗೆ ದೂಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ.

Share this Story:

Follow Webdunia kannada