Select Your Language

Notifications

webdunia
webdunia
webdunia
webdunia

ಪತ್ನಿಗೆ ಮುಖಮೈಥುನ ನಡೆಸುವಂತೆ ಒತ್ತಾಯಿಸಿ ಅತ್ಯಾಚಾರಗೈದ ಪತಿ ವಿರುದ್ಧ ರೇಪ್ ಪ್ರಕರಣ ದಾಖಲು

ಪತ್ನಿಗೆ ಮುಖಮೈಥುನ ನಡೆಸುವಂತೆ ಒತ್ತಾಯಿಸಿ ಅತ್ಯಾಚಾರಗೈದ ಪತಿ ವಿರುದ್ಧ ರೇಪ್ ಪ್ರಕರಣ ದಾಖಲು
ನವದೆಹಲಿ , ಶನಿವಾರ, 5 ಏಪ್ರಿಲ್ 2014 (12:57 IST)
ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತಿಯೊಂದಿಗೆ ಬ್ಯಾಂಕಾಂಕ್ ಮತ್ತು ಥೈಲೆಂಡ್‌ಗೆ ಹನಿಮೂನ್‌ಗಾಗಿ ತೆರಳಿದ್ದಾಗ, ಕ್ರೂರವಾಗಿ ಅತ್ಯಾಚಾರವೆಸಗಿದ್ದಲ್ಲದೇ ಮುಖ ಮೈಥುನ ನಡೆಸುವಂತೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ನವ ವಧು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

23 ವರ್ಷ ವಯಸ್ಸಿನ ಮಹಿಳೆ ನಿನ್ನೆ ರಾತ್ರಿ ತನ್ನ ಕುಟುಂಬದೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಪತಿ ಪುನೀತ್ ಭಾರಧ್ವಾಜ್ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾಳೆ.

ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಲೈಂಗಿಕ ಕಿರುಕುಳ ನೀಡಿರುವುದು ಸಾಬೀತಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಬಹುರಾಷ್ಟ್ರೀಯ ಖಾಸಗಿ ಕಂಪೆನಿಯಲ್ಲಿ ಪ್ರೊಜೆಕ್ಟ್ ಮ್ಯಾನೇಜರ್‌ ಹುದ್ದೆಯಲ್ಲಿರುವ ಮಹಿಳೆಯ ಪತಿ ಭಾರಧ್ವಾಜ್ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸ್ ತಂಡಗಳು ಜಾಲ ಬೀಸಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹನಿಮೂನ್ ಸಂದರ್ಭದಲ್ಲಿ ಪತಿ ತೋರಿದ ವರ್ತನೆಯಿಂದಾಗಿ ದೈಹಿಕ ಮತ್ತು ಮಾನಸಿಕ ತೊಂದರೆಯಾಗಿದೆ. ಆರಂಭದಲ್ಲಿ ಮಾಲ್ದೀವ್ಸ್‌ಗೆ ಹನಿಮೂನ್‌ಗಾಗಿ ತೆರಳಲು ಯೋಜಿಸಲಾಗಿತ್ತು. ಆದರೆ, ಪತಿ ಬ್ಯಾಂಕಾಂಕ್‌ಗೆ ಕರೆದುಕೊಂಡು ಹೋಗಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.

ಅತ್ಯಾಚಾರಕ್ಕೊಳಗಾದ ಮಹಿಳೆ ಖಾಸಗಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ಗು, ನವೆಂಬರ್ 29 ರಂದು ಆರೋಪಿ ಭಾರಧ್ವಾಜ್ ಅವರೊಂದಿಗೆ ವಿವಾಹವಾಗಿತ್ತು. ವಿವಾಹದ ನಂತರ ದಂಪತಿಗಳು ಡಿಸೆಂಬರ್ 1 ರಂದು ಹನಿಮೂನ್‌ಗೆ ತೆರಳಿ ಡಿಸೆಂಬರ್ 8 ರಂದು ನವದೆಹಲಿಗೆ ವಾಪಸಾಗಿದ್ದರು.

ಹನಿಮೂನ್‌ನಿಂದ ಬಂದ ನಂತರ ಮಹಿಳೆ ತನ್ನ ತಂದೆ ತಾಯಿಗೆ ಪತಿಯ ವರ್ತನೆ ಬಗ್ಗೆ ಮಾಹಿತಿ ನೀಡಿದ್ದಲ್ಲದೇ ಮುಖಮೈಥುನ ಸೇರಿದಂತೆ ಕೆಲವು ಬಾರಿ ಮೂತ್ರ ಕುಡಿಯುವಂತೆ ಕೂಡಾ ಒತ್ತಾಯಿಸಿದ್ದ ಎಂದು ಆರೋಪಿಸಿದ್ದಾಳೆ.

Share this Story:

Follow Webdunia kannada