Webdunia - Bharat's app for daily news and videos

Install App

ಪತಿ ಜತೆ ಅಫೇರ್: ಪ್ರಶ್ನಿಸಿದ ಪತ್ನಿಯನ್ನು ಕೊಂದ ಮಹಿಳೆ

Webdunia
ಸೋಮವಾರ, 31 ಮಾರ್ಚ್ 2014 (17:47 IST)
ನವದೆಹಲಿ: ತನ್ನ ಅನೈತಿಕ ಸಂಬಂಧ ಪ್ರಶ್ನಿಸಿದ ಮಹಿಳೆಯನ್ನು ಮತ್ತೊಬ್ಬ ಮಹಿಳೆ ಕೊಲೆ ಮಾಡಿದ್ದಲ್ಲದೇ ತನ್ನ ಮಗನನ್ನು ಕೂಡ ಕೊಂದ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ. ಗ್ರಂಥಾಲಯಾಧಿಕಾರಿ ಪತ್ನಿ ಸುದೇಶ್ ಎಂಬ ಮಹಿಳೆಗೆ ಪೊಲೀಸರು ಕೈಕೋಳ ತೊಡಿಸಿದ್ದಾರೆ. 36 ವರ್ಷ ವಯಸ್ಸಿನ ಸುದೇಶ್ ಎಂಬ ಮಹಿಳೆ ಮೋತಿ ನಗರ್‌ನ ತನ್ನ ಮನೆಯಲ್ಲಿ ಬಿಲ್ಡರ್ ಮನೋಜ್ ತನೇಜಾ ಪತ್ನಿಯನ್ನು ಬಿಸಿಯಾದ ಮಾತಿನ ಚಕಮಕಿ ಬಳಿಕ ಅಕ್ಟೋಬರ್ 17ರಂದು ಭೀಕರವಾಗಿ ಕೊಂದಳು.

ನಂತರ ತನ್ನ ಮೂರು ವರ್ಷದ ಪುತ್ರ ಆರವ್‌ನನ್ನು ಕೊಂದಿದ್ದಲ್ಲದೇ 17 ವರ್ಷ ವಯಸ್ಸಿನ ಪುತ್ರಿ ಕೋಮಲ್ ಮೇಲೆ ದಾಳಿ ಮಾಡಿದಳು. ಬಳಿಕ ಸ್ವತಃ ಮೈಮೇಲೆ ಗಾಯಮಾಡಿಕೊಂಡಳು.

PR
PR
ಕೋಮಲ್ ಸಹಾಯಕ್ಕಾಗಿ ಗಟ್ಟಿಯಾಗಿ ಕಿರುಚಿಕೊಂಡಿದ್ದು ಕೇಳಿ ನೆರೆಮನೆಯವರು ಓಡಿಬಂದು ಪೊಲೀಸರಿಗೆ ಮಾಹಿತಿ ನೀಡಿದರು.ಈ ಹತ್ಯೆಗಳ ಹಿಂದೆ ಅನೈತಿಕ ಸಂಬಂಧದ ಸುಳಿವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ತಮ್ಮ ಪತಿ ಮನೋಜ್ ಜತೆ ಸುದೇಶ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ತಿಳಿದು ರೀನಾ ಸುದೇಶ್‌ಳನ್ನು ಹಿಗ್ಗಾಮುಗ್ಗಾ ಝಾಡಿಸಿದ್ದರು. ಈ ವಿಚಾರ ಮಾತನಾಡಲು ಮನೆಗೆ ಬರುವಂತೆ ಸುದೇಶ್ ಕರೆದು ಬಿಸಿ ಮಾತಿನ ಚಕಮಕಿಯಲ್ಲಿ ರೀನಾಳನ್ನು ಕೊಂದಿದ್ದಳು.ಅನಿಲ್ ಶರ್ಮಾ ಪತ್ನಿಯಾಗಿದ್ದ ಸುದೇಶ್ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡುತ್ತಿದ್ದಳು.

ರೀನಾಳನ್ನು ಹತ್ಯೆ ಮಾಡಿದ ಸುದೇಶ್ ತನ್ನ ಪುತ್ರನನ್ನು ಹತ್ಯೆ ಮಾಡಿ ಪುತ್ರಿಯ ಹತ್ಯೆಗೆ ಪ್ರಯತ್ನಿಸಿದ್ದು ಮಾತ್ರ ನಿಗೂಢವಾಗಿದೆ. ಅವಳು ಹೇಳುವ ಪ್ರಕಾರ ತಾನು ಜೈಲಿಗೆ ಹೋದರೆ ಅವರನ್ನು ನೋಡಿಕೊಳ್ಳುವವರು ಯಾರೂ ಇಲ್ಲವೆಂದು ಪುತ್ರನನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ. ಆದರೆ ಪತಿಯ ವಿರುದ್ಧ ದ್ವೇಷದಿಂದ ಪುತ್ರನ ಹತ್ಯೆಯನ್ನು ನಡೆಸಿರಬಹುದೇ ಎಂಬ ಸಂಶಯವೂ ಕಾಡಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments