Select Your Language

Notifications

webdunia
webdunia
webdunia
webdunia

ನ್ಯಾಯಾಲಯದ ತೀರ್ಪು ನರೇಂದ್ರ ಮೋದಿಯ ನೈತಿಕತೆಗೆ ಸಂದ ಜಯ: ಬಿಜೆಪಿ

ನ್ಯಾಯಾಲಯದ ತೀರ್ಪು ನರೇಂದ್ರ ಮೋದಿಯ ನೈತಿಕತೆಗೆ ಸಂದ ಜಯ: ಬಿಜೆಪಿ
ನವದೆಹಲಿ , ಶುಕ್ರವಾರ, 27 ಡಿಸೆಂಬರ್ 2013 (14:11 IST)
PTI
ಜಾಕಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಎಸ್‌ಐಟಿ ನ್ಯಾಯಾಲಯ ನರೇಂದ್ರ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿರುವುದು ಮೋದಿಯವರ ನೈತಿಕತೆಗೆ ಸಂದ ಜಯವಾಗಿದೆ ಎಂದು ಬಿಜೆಪಿ ಶ್ಲಾಘಿಸಿದೆ.

ರಾಜ್ಯಸಭೆಯ ವಿಪಕ್ಷ ನಾಯಕರಾದ ಅರುಣ್ ಜೇಟ್ಲಿ ಮಾತನಾಡಿ, ಗುಜರಾತ್ ದಂಗೆಯಲ್ಲಿ ಮೋದಿಯ ಪಾತ್ರವಿರುವ ವರದಿಗಳು ರಾಜಕೀಯ ಪ್ರೇರಿತವಾಗಿವೆ. ಮೋದಿಯವರನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದಿರುವುದರಿಂದ ಕಾಂಗ್ರೆಸ್ ಮತ್ತು ಎನ್‌ಜಿಒ ಸಂಸ್ಥೆಗಳು ಇಂತಹ ಕೀಳುಮಟ್ಟಕ್ಕೆ ಇಳಿಯುತ್ತಿವೆ ಎಂದು ಕಿಡಿಕಾರಿದ್ದಾರೆ.

ಗುಜರಾತ್ ದಂಗೆಯ ಬಗ್ಗೆ ನರೇಂದ್ರ ಮೋದಿ ವಿರುದ್ಧದ ಆರೋಪಗಳು ಕೇವಲ ರಾಜಕೀಯವಾಗಿವೆ. ಆದರೆ, ಸತ್ಯವನ್ನು ಯಾವತ್ತೂ ಮುಚ್ಚಿಡಲು ಸಾಧ್ಯವಿಲ್ಲ ಎನ್ನುವುದು ನ್ಯಾಯಾಲಯದ ತೀರ್ಪಿನಿಂದ ಬಹಿರಂಗವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಗುಜರಾತ್ ರಾಜ್ಯದಲ್ಲಿ ಮೋದಿಯವರನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಿಲ್ಲ ಎನ್ನುವುದು ಕಾಂಗ್ರೆಸ್ ಮತ್ತು ಎನ್‌ಜಿಒಗಳಿಗೆ ಗೊತ್ತಿದೆ. ಆದ್ದರಿಂದ, ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಸಿಬಿಐ ಮತ್ತು ನ್ಯಾಯಾಂಗವನ್ನು ಬಳಸಿಕೊಳ್ಳುವ ಪ್ರಯತ್ನಗಳು ನಡೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿಯವರು ಪ್ರತಿಯೊಂದು ಪ್ರಕರಣದಲ್ಲಿ ಬಲಿಷ್ಠವಾಗಿ ಹೊರಹೊಮ್ಮುತ್ತಿದ್ದಾರೆ. ಕಳೆದ 2002 ರಿಂದ 2012 ರವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ನರೇಂದ್ರ ಮೋದಿ ತಮ್ಮ ತಾಕತ್ತು ತೋರಿಸಿದ್ದಾರೆ ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಅರುಣ್ ಜೇಟ್ಲಿ ತಿಳಿಸಿದ್ದಾರೆ.

Share this Story:

Follow Webdunia kannada