Select Your Language

Notifications

webdunia
webdunia
webdunia
webdunia

ನ್ಯಾಯರಕ್ಷಣೆ ಮಾಡುವ ವಕೀಲನಿಂದಲೇ ಬಾಲಕಿಯ ಮೇಲೆ ರೇಪ್

ನ್ಯಾಯರಕ್ಷಣೆ ಮಾಡುವ ವಕೀಲನಿಂದಲೇ ಬಾಲಕಿಯ ಮೇಲೆ ರೇಪ್
, ಗುರುವಾರ, 26 ಡಿಸೆಂಬರ್ 2013 (12:45 IST)
PR
PR
ಉಜ್ಜೈನಿ: ಜಾತಿ ಪ್ರಮಾಣಪತ್ರ ಪಡೆಯುವುದಕ್ಕೆ ಸಹಾಯ ಕೋರಿ ವಕೀಲರೊಬ್ಬರ ಬಳಿ ತೆರಳಿದ್ದ ಅಪ್ರಾಪ್ತ ವಯಸ್ಕ ಶಾಲಾ ಬಾಲಕಿಯ ಮೇಲೆ ವಕೀಲ ಎರಡು ವಾರಗಳ ಕಾಲ ವಕೀಲ ರೇಪ್ ಮಾಡಿದ ಪೈಶಾಚಿಕ ಕೃತ್ಯ ವರದಿಯಾಗಿದೆ. ಮಧ್ಯಪ್ರದೇಶದ ಉಜ್ಜೈನಿಯಲ್ಲಿ ತನ್ನ ಮನೆಗೆ ಕೇವಲ 50 ಅಡಿ ದೂರದಲ್ಲಿದ್ದ ವಕೀಲ ಬಾಲಕೃಷ್ಣ ಜೋಷಿ ಎಂಬವರ ಮನೆಗೆ 9ನೇ ತರಗತಿ ವಿದ್ಯಾರ್ಥಿನಿ ಹೋಗಿದ್ದಳು. 40ರ ಆಸುಪಾಸಿನಲ್ಲಿರುವ ವಕೀಲ ಅವಳನ್ನು ಕೂಡಲೇ ಸೆರೆಯಲ್ಲಿಟ್ಟು ಸುಮಾರು 14 ದಿನಗಳ ಕಾಲ ಅವಳ ಮೇಲೆ ಮತ್ತೆ ಮತ್ತೆ ರೇಪ್ ಮಾಡಿದ.

ಬುಧವಾರ ಬೆಳಿಗ್ಗೆ ಮನೆಯಿಂದ ಸಹಾಯ ಮಾಡುವಂತೆ ಬಾಲಕಿ ಕಿರುಚಿಕೊಂಡ ಸದ್ದು ಕೇಳಿ ಪೊಲೀಸರಿಗೆ ಕರೆ ಮಾಡಿದಾಗ ಪೊಲೀಸರು ಅಲ್ಲಿಗೆ ಧಾವಿಸಿ ಬಾಲಕಿಯನ್ನು ರಕ್ಷಿಸಿದರು.ಆರೋಪಿಯ ಪತಿ ಮತ್ತು ಪುತ್ರ ಕೂಡ ಅವನ ಕೃತ್ಯಕ್ಕೆ ನೆರವಾಗಿದ್ದರೆಂದು ಬಾಲಕಿ ಆರೋಪಿಸಿದ್ದಾಳೆ. ಬಾಲಕಿಯ ತಂದೆ, ತಾಯಿ ತಮ್ಮ ಮಗಳು ಕಾಣೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ತಮ್ಮ ಮನೆಯ ಸಮೀಪದಲ್ಲಿ ಬಾಲಕಿಯನ್ನು ಬಂಧಿಯಾಗಿರಿಸಲಾಗಿತ್ತೆಂಬ ವಿಷಯ ತಿಳಿದು ತೀವ್ರ ಆಘಾತಕ್ಕೊಳಗಾಗಿದ್ದರು.

Share this Story:

Follow Webdunia kannada