Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ 'ಶಕ್ತಿಹೀನ' ಎಂಬ ವಾಗ್ದಾಳಿ ವಿರುದ್ಧ ರಾಹುಲ್ ಎಚ್ಚರ

ನರೇಂದ್ರ ಮೋದಿ 'ಶಕ್ತಿಹೀನ' ಎಂಬ ವಾಗ್ದಾಳಿ ವಿರುದ್ಧ ರಾಹುಲ್ ಎಚ್ಚರ
, ಶುಕ್ರವಾರ, 14 ಮಾರ್ಚ್ 2014 (14:42 IST)
PR
PR
ಫರೂಕಾಬಾದ್: ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ನರೇಂದ್ರ ಮೋದಿ ಅವರನ್ನು ಶಕ್ತಿಹೀನ(ಷಂಡ) ಎಂದು ವರ್ಣಿಸಿ ಹೊಸ ವಿವಾದ ಹುಟ್ಟುಹಾಕಿದ ಬಳಿಕ, ದ್ವೇಷದಿಂದ ಮಾತನಾಡುವುದರ ವಿರುದ್ಧ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ. ರಾಜಕಾರಣಿಗಳು ದ್ವೇಷದಿಂದ ಮಾತನಾಡಿದರೆ ಅದು ನಿಮಗೆ ಹಾನಿವುಂಟು ಮಾಡುತ್ತದೆ ಎಂದು ಅಸ್ಸಾಂ ಗುವಾಹಟಿಯ ಶಾಲೆಯಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಾಹುಲ್ ತಿಳಿಸಿದರು. ಕಾಂಗ್ರೆಸ್ ಉಪಾಧ್ಯಕ್ಷರ ಪದಗಳು ಖುರ್ಷಿದ್ ಅವರಿಗೆ ನೀಡಿದ ಪರೋಕ್ಷ ಸಂದೇಶವಾಗಿದೆ. ಖುರ್ಷಿದ್ ಫರೂಕಾಬಾದ್‌ನಲ್ಲಿ ನಡೆದ ರ‌್ಯಾಲಿಯಲ್ಲಿ 2002ರ ಗುಜರಾತ್ ಗಲಭೆಗಳ ಬಗ್ಗೆ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದರು.

'ನಾನು ನಿಮಗೆ ಪ್ರಶ್ನೆಯೊಂದನ್ನು ಕೇಳಲು ಬಯಸುತ್ತೇನೆ.ನೀವು ಅಂತಹ ಪ್ರಬಲ ಮತ್ತು ಶಕ್ತಿಶಾಲಿ ವ್ಯಕ್ತಿಯಾಗಿದ್ದು,ಪ್ರಧಾನಿ ಹುದ್ದೆ ಬಯಸಿದ್ದೀರಿ. ಆದರೆ ಗೋಧ್ರಾದ ಜನರನ್ನು ರಕ್ಷಿಸುವುದಕ್ಕೆ ನಿಮ್ಮ ಕೈಲಿ ಆಗಲಿಲ್ಲ. ಕೆಲವು ಜನರು ಬಂದರು, ಕಗ್ಗೊಲೆ ಮಾಡಿ ಹೋದ್ರು, ಆದರೆ ಆ ಬಲಿಪಶುಗಳನ್ನು ನಿಮಗೆ ರಕ್ಷಿಸಲಾಗಲಿಲ್ಲವೇ, ನೀವು ಜನರನ್ನು ಹತ್ಯೆ ಮಾಡಿದ್ದೀರೆನ್ನುವುದು ನಮ್ಮ ಆರೋಪವಲ್ಲ. ಆದರೆ ನೀವು ಶಕ್ತಿಹೀನ(ಷಂಡ) ರಾಗಿದ್ದೇಕೆ ಎನ್ನುವುದು ನಮ್ಮ ಪ್ರಶ್ನೆ' ಎಂದು ಖುರ್ಷಿದ್ ಮೋದಿ ಹೆಸರನ್ನು ಉಲ್ಲೇಖಿಸದೇ ತಿಳಿಸಿದ್ದರು.

Share this Story:

Follow Webdunia kannada