Webdunia - Bharat's app for daily news and videos

Install App

ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳೇನು, ಕೆಳಗಿವೆ ಓದಿ

Webdunia
ಗುರುವಾರ, 27 ಫೆಬ್ರವರಿ 2014 (17:37 IST)
ನವದೆಹಲಿ: ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ಉದ್ದೇಶಿಸಿ ನವದೆಹಲಿಯಲ್ಲಿ ಮಾತನಾಡಿದರು.ಅವರ ಭಾಷಣದ ಮುಖ್ಯಾಂಶಗಳನ್ನು ಕೆಳಗೆ ನೀಡಲಾಗಿದೆ.
* ಪ್ರತಿಯೊಬ್ಬರೂ ಅವರು ಇರುವ ಸ್ಥಳದಲ್ಲೇ ಉದ್ಯೋಗ ಸಿಗಬೇಕು. ಅವರು ಉದ್ಯೋಗಕ್ಕಾಗಿ ತಮ್ಮ ಮನೆಗಳನ್ನು ಏಕೆ ಬಿಡಬೇಕು?
* ನಗರೀಕರಣವನ್ನು ಅವಕಾಶವೆಂದು ಭಾವಿಸಬೇಕು. ಇದನ್ನು ತೊಡಕು ಎನ್ನುವಂತೆ ಕಾಣಬಾರದು.
* ನಮ್ಮ ಗುರಿ- ಗ್ರಾಮದ ಹೃದಯ ಮತ್ತು ನಗರದ ಸೌಲಭ್ಯಗಳು.

PR
PR
*ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳ ಭವಿಷ್ಯ ವಿಪುಲವಾಗಿದೆ.
* ನಾವು ತಂತ್ರಜ್ಞಾನದ ಬಗ್ಗೆ. ಉತ್ಪಾದನೆ ಹೆಚ್ಚಳದ ಬಗ್ಗೆ ಯೋಚಿಸುತ್ತಿಲ್ಲ.
* ನ್ಯಾಯ ವಿಳಂಬ ನ್ಯಾಯ ನಿರಾಕರಣೆ ಎಂದು ನಾವು ತಿಳಿಯಬೇಕು. ನಾವು ವೇಗದ ನ್ಯಾಯಕ್ಕೆ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು.
*ಗುಜರಾತಿನಲ್ಲಿ ಅನೇಕ ಬಾಕಿ ಪ್ರಕರಣಗಳಿವೆ. ನಾವು ಅದೇ ಮೂಲಸೌಲಭ್ಯ ಬಳಸಿಕೊಂಡು ಸಂಜೆ ಕೋರ್ಟ್‌ಗಳನ್ನು ಸ್ಥಾಪಿಸಿದ್ದೇವೆ.
* ನಾವು ಲೋಕಅದಾಲತ್‌ಗಳಿಗೆ ಪಾವಿತ್ರ್ಯ ನೀಡಿದ್ದೇವೆ. ಈ ಕೋರ್ಟ್ ಲಕ್ಷಾಂತರ ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತದೆ.
* ಕೌಶಲ್ಯ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕೆ ನಾವು ಒತ್ತು ನೀಡಬೇಕು.

PR
PR
* ಕೌಶಲ್ಯ ಅಭಿವೃದ್ದಿಯ ಬಗ್ಗೆ ನಾವು ಯೋಚಿಸಿದರೆ, ಜನರು ಸ್ವಾವಲಂಬಿಗಳಾಗುತ್ತಾರೆ.
* ರಾಜ್ಯ ಸ್ವಾಮ್ಯದ ಘಟಕಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು. ಈ ವಿಷಯದಲ್ಲಿ ರಾಜಕೀಯ ಇರಬಾರದು.
* ನಮ್ಮ ರಾಜ್ಯಗಳು ನಮಗೆ ಬಲನೀಡುತ್ತವೆ. ಅವು ನಮ್ಮ ದುರ್ಬಲತೆಯಲ್ಲ.
* ಒಕ್ಕೂಟ ವ್ಯವಸ್ಥೆ ಭಾರತಕ್ಕೆ ಅಗತ್ಯವಾಗಿದೆ. ಇದು ಭಾರತಕ್ಕೆ ಶಕ್ತಿ ನೀಡುತ್ತದೆ.
* ನಗರಗಳು ಚಲನಶೀಲ ಆರ್ಥಿಕತೆಯ ದಿಕ್ಕಿನಲ್ಲಿ ಅಭಿವೃದ್ಧಿಯಾಗಬೇಕು.

* ಮುಂಬೈಯನ್ನು ದೆಹಲಿಯಿಂದ ಆಳಲಾಗುತ್ತದೆಯೇ? ನನೆಗ ಗಾಂಧಿನಗರದಿಂದ ಸೂರತ್ ನಿರ್ವಹಣೆ ಸಾಧ್ಯವೇ?
* ತಂತ್ರಜ್ಞಾನವು ಪಾರದರ್ಶಕತೆ ಸಾಧನೆಗೆ ನೆರವಾಗಬಹುದು.
* ಎರಡು ನಿಮಿಷಗಳ ಸಂದರ್ಶನದಲ್ಲಿ ನೀವು ಒಬ್ಬರ ಮೌಲ್ಯಮಾಪನ ಹೇಗೆ ಮಾಡಲಾಗುತ್ತದೆ. ಅವು ಇನ್ನಷ್ಟು ಭ್ರಷ್ಟಾಚಾರಕ್ಕೆ ಎಡೆಮಾಡುತ್ತವೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments