Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಜನಪ್ರಿಯತೆ ಪ್ರಶ್ನಾತೀತ: ರಾಜನಾಥ್ ಸಿಂಗ್

ನರೇಂದ್ರ ಮೋದಿ ಜನಪ್ರಿಯತೆ ಪ್ರಶ್ನಾತೀತ: ರಾಜನಾಥ್ ಸಿಂಗ್
ನವದೆಹಲಿ , ಶುಕ್ರವಾರ, 31 ಮೇ 2013 (15:49 IST)
PR
PR
ಬಿಜೆಪಿ ಶೀಘ್ರ ಪ್ರಧಾನಮಂತ್ರಿ ಅಭ್ಯರ್ಥಿ ಕುರಿತಾದ ನಿರ್ಧಾರ ಕೈಗೊಳ್ಳಲಿದೆ ಎಂದು ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್‌ ತಿಳಿಸಿದ್ದಾರೆ. ಪ್ರಧಾನಮಂತ್ರಿ ಅಭ್ಯರ್ಥಿಯ ಕುರಿತು ಪಕ್ಷ ಸೂಕ್ತ ಕಾಲದಲ್ಲಿ ನಿರ್ಧಾರ ಕೈಗೊಳ್ಳಲಿದೆ ಹಾಗೂ ಆ ಕಾಲ ಸದ್ಯವೇ ಬರುವ ಸಾಧ್ಯತೆಯಿದೆ ಎಂದು ಸಂದರ್ಶನವೊಂದರಲ್ಲಿ ರಾಜನಾಥ ಸಿಂಗ್‌ ಹೇಳಿದರು.

ಮುಂಬರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಆರಿಸುತ್ತೀರಾ ಎಂದು ಕೇಳಿದಾಗ ಉತ್ತರಿಸಲು ನಿರಾಕರಿಸಿದ ಸಿಂಗ್‌, ಮೋದಿಯ ಜನಪ್ರಿಯತೆಯನ್ನು ಅಲ್ಲಗಳೆಯಲಾಗದು. ಮೋದಿಯ ಜನಪ್ರಿಯತೆ ಪ್ರಶ್ನಾತೀತ ಎಂದರು.

ಮೋದಿಯ ಉಮೇದುವಾರಿಕೆಗೆ ಮಿತ್ರಪಕ್ಷ ಜೆಡಿ(ಯು) ಆಕ್ಷೇಪ ಎತ್ತಿರುವ ವಿಚಾರವನ್ನು ಕೇಳಿದಾಗ ನಾವು ಮಾತುಕತೆಯ ಮೂಲಕ ಇಂತಹ ವಿವಾದಗಳನ್ನು ಬಗೆಹರಿಸಿಕೊಳ್ಳುತ್ತೇವೆ ಎಂದರು.

ಮುಂಬರುವ ಸಾರ್ವತ್ರಿಕ ಚುನಾವಣೆಗಾಗಿ ಎನ್‌ಡಿಎ ಹೊಸ ಮಿತ್ರರನ್ನು ಸಂಪಾದಿಸಿಕೊಳ್ಳಲಿದೆ ಎಂದಿರುವ ರಾಜನಾಥ ಸಿಂಗ್‌ ಪಕ್ಷ 180ಕ್ಕೂ ಅಧಿಕ ಸೀಟುಗಳನ್ನು ಗೆದ್ದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada