Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಕೋಮುವಾದಿಯಲ್ಲ ಎಂದು ಯಾವತ್ತೂ ಹೇಳಿಲ್ಲ: ಹಜಾರೆ

ನರೇಂದ್ರ ಮೋದಿ ಕೋಮುವಾದಿಯಲ್ಲ ಎಂದು ಯಾವತ್ತೂ ಹೇಳಿಲ್ಲ: ಹಜಾರೆ
ನವದೆಹಲಿ , ಶನಿವಾರ, 20 ಜುಲೈ 2013 (09:13 IST)
PTI
PTI
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೋಮುವಾದಿಯಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.

ಮೋದಿ ಕೋಮುವಾದಿ ಎಂದು ನಾನು ಹೇಳಿಲ್ಲ. ಯಾಕೆಂದರೆ ನನ್ನ ಬಳಿ ಕೋಮುವಾದಿ ಎನ್ನುವುದಕ್ಕೆ ಯಾವುದೇ ರೀತಿಯ ಸಾಕ್ಷ್ಯಾಧಾರಗಲಿಲ್ಲ. ಆದರೆ, ಮೋದಿಯನ್ನು ಯಾವತ್ತು ಹೊಗಳಿಲ್ಲ ಎಂದು ತಿಳಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಭಾರತೀಯ ಜನತಾ ಪಕ್ಷದ ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ. ಇದು ಅವರನ್ನು ಮತ್ತಷ್ಟು ಕೋಮುವಾದಿಯಾಗಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ದೇಶಕ್ಕೆ ಸಶಕ್ತ ಲೋಕಪಾಲ ಮಸೂದೆ ಅಗತ್ಯವಿದೆಯೇ ಹೊರತು ಸಮಾಜವನ್ನು ವಿಭಜಿಸುವಂತಹ ಕೋಮುವಾದಿತನದ ಅಗತ್ಯವಿಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

Share this Story:

Follow Webdunia kannada