Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿಯಿಂದ ಪ್ರಭಾವಿತಗೊಂಡ ವ್ಯಕ್ತಿಯಿಂದ ನಮೋ ಟೀ ಸ್ಟಾಲ್ ಆರಂಭ

ನರೇಂದ್ರ ಮೋದಿಯಿಂದ ಪ್ರಭಾವಿತಗೊಂಡ ವ್ಯಕ್ತಿಯಿಂದ ನಮೋ ಟೀ ಸ್ಟಾಲ್ ಆರಂಭ
ರಾಂಚಿ , ಬುಧವಾರ, 9 ಅಕ್ಟೋಬರ್ 2013 (15:48 IST)
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಒಂದಾನೊಂದು ಕಾಲದಲ್ಲಿ ಚಹಾ ಮಾರುತ್ತಿದ್ದರು. ಇದರಿಂದ ಪ್ರಭಾವಿತಗೊಂಡ ವ್ಯಕ್ತಿಯೊಬ್ಬ ತಾನು ಚಹಾ ಹೋಟೆಲ್ ಆರಂಭಿಸಿ ನಮೋ ಟೀ ಸ್ಟಾಲ್ ಎಂದು ಹೆಸರಿಟ್ಟಿದ್ದಾನೆ.

ರಾಂಚಿಯ ಸ್ಟೇಶನ್ ರಸ್ತೆಯಲ್ಲಿರುವ ನಮೋ ಟೀ ಸ್ಟಾಲ್‌ನಲ್ಲಿ ನರೇಂದ್ರ ಮೋದಿಯವರ ಭಾವಚಿತ್ರಗಳಿವೆ. ಜಾರ್ಖಂಡ್ ವಿಧಾನಸಭೆಯ ಮಾಜಿ ಸ್ಪೀಕರ್ ರಾಂಚಿಯ ಶಾಸಕ ಸಿಪಿ.ಸಿಂಗ್ ಹೋಟೆಲ್ ಉದ್ಘಾಟಿಸಿದ್ದಾರೆ.

ಮೋದಿ ಒಂದು ಕಾಲದಲ್ಲಿ ಚಹಾ ಮಾರುತ್ತಿದ್ದರು. ಇದೀಗ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.ಮೋದಿ ಗೌರವಾರ್ಥವಾಗಿ ಹೋಟೆಲ್‌ಗೆ ನಮೋ ಹೆಸರಿಡಲಾಗಿದೆ ಎಂದು ಹೋಟೆಲ್ ಮಾಲೀಕ ವಿನಯ್ ಶರ್ಮಾ ತಿಳಿಸಿದ್ದಾರೆ.

Share this Story:

Follow Webdunia kannada