Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಒಬ್ಬ ಹಾರ್ಡ್ ವರ್ಕರ್, ನನ್ನ ಉತ್ತಮ ಸ್ನೇಹಿತ: ಕರುಣಾನಿಧಿ

ನರೇಂದ್ರ ಮೋದಿ ಒಬ್ಬ ಹಾರ್ಡ್ ವರ್ಕರ್, ನನ್ನ ಉತ್ತಮ ಸ್ನೇಹಿತ: ಕರುಣಾನಿಧಿ
ಚೆನೈ , ಶುಕ್ರವಾರ, 14 ಮಾರ್ಚ್ 2014 (14:47 IST)
PTI
ಸಾರ್ವತ್ರಿಕ ಚುನಾವಣೆ ಸಮಿಪಿಸುತ್ತಿದ್ದಂತೆ ತಮಿಳುನಾಡಿನಲ್ಲಿ ನರೇಂದ್ರ ಮೋದಿಗೆ ಸ್ನೇಹಿತರು ಹೆಚ್ಚಾಗುತ್ತಿದ್ದಾರೆ.

ತಮಿಳು ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಡಿಎಂಕೆ ನಾಯಕ 89 ವರ್ಷದ ಕರುಣಾನಿಧಿ "ಮೋದಿಯ ನಿರಂತರ ಪ್ರಚಾರ ಅವರು ಹಾರ್ಡ್ ವರ್ಕರ್ ಎಂಬುದನ್ನು ತೋರಿಸುತ್ತದೆ. ಅಲ್ಲದೇ ಮೋದಿ ನನ್ನ ಉತ್ತಮ ಸ್ನೇಹಿತ" ಎಂದು ಹೇಳಿದ್ದಾರೆ.

ಕರುಣಾನಿಧಿ ಪ್ರತಿಸ್ಪರ್ಧಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೂಡ ಕೆಲದಿನಗಳ ಹಿಂದೆ ಮೋದಿ ನನ್ನ ಉತ್ತಮ ಸ್ನೇಹಿತ ಎಂದು ಹೇಳಿದ್ದರು.

ಕಳೆದ ಡಿಸೆಂಬರ್ ನಲ್ಲಿ ಕರುಣಾನಿಧಿ ಮೋದಿಗೆ ಪ್ರಶಂಸೆ ಮಾಡಿದ್ದನ್ನು ಮತ್ತು ಬಿಜೆಪಿ ಜತೆ ಮೈತ್ರಿ ಸಂಭವನೀಯತೆಯನ್ನು ನಿರಾಕರಿಸಿದ್ದರು. ಮೂಲಗಳ ಪ್ರಕಾರ ಕರುಣಾನಿಧಿಯ ಕಿರಿಯ ಮಗ ಮತ್ತು ಅವರ ರಾಜಕೀಯ ಉತ್ತರಾಧಿಕಾರಿ ಎಂ.ಕೆ. ಸ್ಟಾಲಿನ್ ಮೈತ್ರಿಯನ್ನು ವಿರೋಧಿಸುತ್ತಿದ್ದಾರೆ.

Share this Story:

Follow Webdunia kannada