Select Your Language

Notifications

webdunia
webdunia
webdunia
webdunia

ನಮ್ಮ ಸಶಕ್ತ ಲೋಕಪಾಲನ್ನು ಅಣ್ಣಾ ಒಪ್ಪಿಕೊಳ್ಳಲೇಬೇಕು: ಸೋನಿಯಾ

ನಮ್ಮ ಸಶಕ್ತ ಲೋಕಪಾಲನ್ನು ಅಣ್ಣಾ ಒಪ್ಪಿಕೊಳ್ಳಲೇಬೇಕು: ಸೋನಿಯಾ
ನವದೆಹಲಿ , ಬುಧವಾರ, 21 ಡಿಸೆಂಬರ್ 2011 (11:58 IST)
PTI
ಬಹುನಿರೀಕ್ಷಿತ ಲೋಕಪಾಲ ಮಸೂದೆಗೆ ಸಚಿವ ಸಂಪುಟ ಹಸಿರು ನಿಶಾನೆ ತೋರಿದ ಹಿನ್ನೆಲೆಯಲ್ಲಿ, ಆಣ್ಣಾ ಹಜಾರೆ ಮತ್ತು ಅವರ ತಂಡ ನಮ್ಮ ಸಶಕ್ತ ಲೋಕಪಾಲ ಮಸೂದೆಯನ್ನು ಒಪ್ಪಿಕೊಳ್ಳಲೇ ಬೇಕು ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಸಂಸದರ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಸರಕಾರಿ ಲೋಕಪಾಲ ಮಸೂದೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ತುಂಬಾ ಸಶಕ್ತವಾಗಿದೆ. ಅಣ್ಣ ತಂಡ ಕೂಡಾ ಸಹಮತಿ ಸೂಚಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ದೇಶದ ಜನತೆಯ ವಿಶ್ವಾಸದಿಂದ ಯುಪಿಎ ಸರಕಾರ ಅದಿಕಾರಕ್ಕೆ ಬಂದಿದೆ ಎನ್ನುವುದು ಬಿಜೆಪಿಗೆ ತಿಳಿದಿರಬೇಕು. ಕಾಂಗ್ರೆಸ್ ಮತ್ತು ಸರಕಾರದ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವದಲ್ಲಿ ಸರಕಾರ ಮತ್ತು ಜನತೆಯ ಮಧ್ಯೆ ಸ್ನೇಹ ಸೇತುವೆಯಿರುತ್ತದೆ. ಆದರೆ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕಾಗುತ್ತದೆ. ಲೋಕಪಾಲ ವಿಷಯದ ಬಗ್ಗೆ ಚರ್ಚಿಸಲು ಸರಕಾರ ಸಿದ್ಧವಾಗಿದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada