Select Your Language

Notifications

webdunia
webdunia
webdunia
webdunia

ನಮೋ ಟೀ ಸ್ಟಾಲ್ ವರ್ಸಸ್ ಲಾಲು ಟೀ ಸ್ಟಾಲ್ !

ನಮೋ ಟೀ ಸ್ಟಾಲ್ ವರ್ಸಸ್ ಲಾಲು ಟೀ ಸ್ಟಾಲ್ !
ಪಾಟ್ನಾ , ಶುಕ್ರವಾರ, 21 ಫೆಬ್ರವರಿ 2014 (17:45 IST)
PTI
ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಾರಂಭಿಸಿರುವ ನಮೋ ಟೀ ಅಂಗಡಿ ಗೆ ಸ್ಪರ್ಧೆ ನೀಡಲು ಹೊರಟಿರುವ ಆರ್ಜೆಡಿ ಸದಸ್ಯರು ಬಿಹಾರದಲ್ಲಿ ಲಾಲು ಚಹಾ ಅಂಗಡಿ ಯನ್ನು ಪ್ರಾರಂಭಿಸುತ್ತಿದ್ದಾರೆ. ನಮೋದಲ್ಲಿ ವಿತರಿಸಲಾಗುವ ಟೀ ಗೆ 1 ರೂ ಇದ್ದರೆ, ಲಾಲು ಟೀ ಅಂಗಡಿ ಯಲ್ಲಿ ನಾವು ಉಚಿತ ಚಹಾವನ್ನು ಕುಡಿಯಬಹುದು.

ಸುಮಾರು 10 ದಿನಗಳ ಹಿಂದೆ ರಾಷ್ಟ್ರೀಯ ಜನತಾ ದಳ ವರಿಷ್ಠ ಲಾಲೂ ಪ್ರಸಾದ್ ಅವರು "ನಾನು ನಿಜವಾದ ಚಹಾ ಮಾರಾಟಗಾರ ಮತ್ತು ಮೋದಿ ಈ ವ್ಯವಹಾರದಲ್ಲಿ ನನಗೆ ಜುನಿಯರ " ಎಂದು ಹೇಳಿದ್ದರು.

ಲಾಲು ಅವರ ಪಕ್ಷದ ಕಾರ್ಯಕರ್ತರು ಮುಜಾಫರ್ರ್ಪುರಲ್ಲಿ " ಮೊದಲ ಲಾಲು ಚಹಾ ಅಂಗಡಿಯನ್ನು ಸ್ಥಾಪಿಸುತ್ತಿದ್ದು, ಶೀಘ್ರದಲ್ಲೇ ರಾಜ್ಯದ ವಿವಿಧ ಭಾಗಗಳಲ್ಲೂ ತೆರೆಯಲಾಗುವುದು" ಎಂದು ತಿಳಿಸಿದ್ದಾರೆ.

" ಲಾಲು ತನ್ನ ಬಾಲ್ಯದಲ್ಲಿ ಜೀವನಾಧಾರಕ್ಕಾಗಿ ಚಹಾ ಮಾರಾಟ ಮಾಡುತ್ತಿದ್ದರು " ಎಂದು ಶಮ್ಮಿ ಹೇಳಿದ್ದಾರೆ.

"ನಾವು ಮುಜಾಫರ್ಪುರ ಜಿಲ್ಲೆಯ ಪ್ರತಿಯೊಂದು ಬ್ಲಾಕ್ನಲ್ಲಿ 17 ಟೀ ಅಂಗಡಿಗಳನ್ನು ತೆರೆಯಲು ನಿರ್ಧರಿಸಿದ್ದೇವೆ. ಲಾಲು ಚಹಾ ಅಂಗಡಿಯಲ್ಲಿ ಚಹಾ ಉಚಿತವಾಗಿ ಇರುತ್ತದೆ " ಎಂದು ಆರ್ಜೆಡಿ ನಾಯಕ ಹೇಳಿದ್ದಾರೆ .

" ಲಾಲು ಟೀ ಅಂಗಡಿಗಳು ಜನರೊಂದಿಗೆ ಸಂಪರ್ಕಿಸಲು ಅವಕಾಶ ಒದಗಿಸುತ್ತವೆ" ಎಂದು ಮತ್ತೊಬ್ಬ ಆರ್ಜೆಡಿ ನಾಯಕ ಹರೇಂದ್ರಕುಮಾರ್ ಎಂದು ಹೇಳಿದ್ದಾರೆ.

ಆದರೆ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಮಂಗಲ್ ಪಾಂಡೆ ಲಾಲು ಚಹಾ ಅಂಗಡಿ ಮೋದಿ ಪ್ರಚಾರದ ಅನುಕರಣೆ ಎಂದು ಟೀಕಿಸಿದ್ದಾರೆ.

ಲಾಲು ಪ್ರಸಾದ್ ಅವರು ಇತ್ತೀಚೆಗೆ ತಮ್ಮ ಬಾಲ್ಯಾವಸ್ಥೆಯಲ್ಲಿ ಪಾಟ್ನಾ ವೆಟರ್ನರಿ ಕಾಲೇಜ್ ಕ್ಯಾಂಪಸ್ ಮಳಿಗೆಯಲ್ಲಿ ತಾನು ಚಹಾ ಮಾರಾಟಗಾರರಾಗಿದ್ದನ್ನು ಬಹಿರಂಗ ಪಡಿಸಿದ್ದರು.

Share this Story:

Follow Webdunia kannada