Select Your Language

Notifications

webdunia
webdunia
webdunia
webdunia

ನಂಬಲಸಾಧ್ಯವಿಲ್ಲ ಅಲ್ವಾ... 5 ಸಾವಿರ ಮಹಿಳೆಯರನ್ನು ವಿವಾಹವಾದ ಭೂಪನ ಬಂಧನ

ನಂಬಲಸಾಧ್ಯವಿಲ್ಲ ಅಲ್ವಾ... 5 ಸಾವಿರ ಮಹಿಳೆಯರನ್ನು ವಿವಾಹವಾದ ಭೂಪನ ಬಂಧನ
ರಾಜನಂದಗಾಂವ್ (ಚತ್ತೀಸ್‌ಗಢ್) , ಶುಕ್ರವಾರ, 20 ಸೆಪ್ಟಂಬರ್ 2013 (13:09 IST)
PTI
ನಂಬಲು ಸಾಧ್ಯವಿಲ್ಲ. ನಂಬಲೇಬೇಕಾದ ಅನಿವಾರ್ಯತೆ ನಮಗೆ ಎದುರಾಗಿದೆ. 47 ವರ್ಷ ವಯಸ್ಸಿನ ವಿಜಯ್ ಗಜಭಯ್ಯ ಎನ್ನುವ ವ್ಯಕ್ತಿಯೊಬ್ಬ 5000 ಕ್ಕೂ ಹೆಚ್ಚು ಮದುವೆ ಮಾಡಿಕೊಂಡಿರುವ ವಿಚಿತ್ರ ಸುದ್ದಿ ಬಹಿರಂಗವಾಗಿದೆ.

ಬುಡಕಟ್ಟು ಮತ್ತು ಇತರ ಹಿಂದುಳಿದ ಸಮುದಾಯದ ವ್ಯಕ್ತಿಗಳು ಇತರ ಜಾತಿಯವರೊಂದಿಗೆ ವಿವಾಹವಾದಲ್ಲಿ ನಗದು ಪ್ರೋತ್ಸಾಹಧನ ನೀಡುವುದಾಗಿ ಸರಕಾರ ಭರವಸೆ ನೀಡಿರುವುದೇ ಇತನಿಗೆ 5000 ಯುವತಿಯರನ್ನು ಮದುವೆಯಾಗಲು ಪ್ರೇರಣೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಬಹುಪತ್ನಿತ್ವ ಹೊಂದಿರುವ ಆರೋಪಿ ವಿಜಯ್ ವಿರುದ್ಧ ಭಾರತೀಯ ಸಂವಿದಾನದ ಅನ್ವಯ 420, 567 ಮತ್ತು 468 ಕಾಯ್ದೆಗಳನ್ನು ಪ್ರಕರಣದಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರಕಾರದ ಎಸ್‌ಸಿ, ಎಸ್‌ಟಿ ಕ್ಷೇಮಾಭಿವೃದ್ಧಿ ನಿಗಮ, ಬುಡಕಟ್ಟು ಮತ್ತು ಇತರ ಹಿಂದುಳಿದ ಸಮುದಾಯದವರು ಆಗಸ್ಟ್ 2009ರೊಳಗೆ ಇತರ ಸಮುದಾಯದೊಂದಿಗೆ ಅಂತರ್ಜಾತಿ ವಿವಾಹ ಮಾಡಿಕೊಂಡಲ್ಲಿ ದಂಪತಿಗಳಿಗೆ 50 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿತ್ತು ಇದರ ಸದುಪಯೋಗಪಡಿಸಿಕೊಂಡ ಬುಡಕಟ್ಟು ಸಮುದಾಯದ ವಿಜಯ್ ಗಜಭಯ್ಯಾ 5 ಸಾವಿರ ವಿವಾಹಗಳನ್ನು ಮಾಡಿಕೊಂಡು ಕೋಟ್ಯಾಧೀಶನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಆರೋಪಿಸಿವೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಬಹುಪತ್ನಿವಲ್ಲಭ ವಿಜಯ್, ನ್ಯಾಯಾಧೀಶರ ಮುಂದೆ ನನ್ನ ಪತ್ನಿ ಎಂದು ಒಪ್ಪಿಕೊಳ್ಳುವಂತಹ ಮಹಿಳೆಯ ಜೊತೆ ಫಿಫ್ಟಿ-ಫಿಫ್ಟಿ ಒಪ್ಪಂದ ಮಾಡಿಕೊಳ್ಳುತ್ತಿದ್ದೆ. ವಿವಾಹವಾದ ನಂತರ ಆಕೆಗೆ 25000 ರೂಪಾಯಿಗಳನ್ನು ನೀಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ.

Share this Story:

Follow Webdunia kannada