Select Your Language

Notifications

webdunia
webdunia
webdunia
webdunia

ದೇಶದ ಹೆಸರನ್ನೇ ಬದಲಿಸುವ ಪ್ರಣಾಳಿಕೆ ಹೊಂದಿದ ಎಂಡಿಎಂಕೆ ಪಕ್ಷ

ದೇಶದ ಹೆಸರನ್ನೇ ಬದಲಿಸುವ ಪ್ರಣಾಳಿಕೆ ಹೊಂದಿದ ಎಂಡಿಎಂಕೆ ಪಕ್ಷ
ಚೆನ್ನೈ , ಶನಿವಾರ, 22 ಮಾರ್ಚ್ 2014 (18:33 IST)
ಲೋಕಸಭಾ ಚುನಾವಣೆಯ ನಂತರ ಸರ್ಕಾರ ರಚನೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕರೆ ನಾವು ಭಾರತದ ಹೆಸರನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಎಂದು ಬದಲಾಯಿಸುವುದಾಗಿ ಎಂಡಿಎಂಕೆ ಶನಿವಾರ ಬಿಡುಗಡೆ ಮಾಡಿದ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ.
PTI

ಫಾಯರ್‌ಬ್ರಾಂಡ್ ತಮಿಳು ನಾಯಕ ವೈಕೊ ನೇತೃತ್ವದ ಪಕ್ಷ, ತಮಿಳ್ ಈಲಮ್ ಲಿಬರೇಶನ್ ಟೈಗರ್ಸ್ (ಎಲ್ಟಿಟಿಇ )ಮೇಲಿನ ನಿರ್ಭಂದವನ್ನು ತೆಗೆದು ಹಾಕುತ್ತೇವೆ ಎಂದು ಸಹ ಹೇಳಿದೆ.

ಎಂಡಿಎಂಕೆ ಪ್ರಕಾರ, ಭಾರತದ ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಒಂದು ಫೆಡರಲ್ ಆಡಳಿತದ ರಚನೆಯ ಭರವಸೆ ನೀಡಿತ್ತು.

"ಆರಂಭದಲ್ಲಿ "ವಿವಿಧತೆಯಲ್ಲಿ ಏಕತೆ" ಎಂದವರು ಕ್ರಮೇಣ ಕೇಂದ್ರ ಸರ್ಕಾರದ ಅಧಿಕಾರದ ಮೇಲೆ ಗಮನ ನೀಡಲು ಆರಂಭಿಸಿದರು".

"ದೇಶದ ಏಕತೆ ಬಲಪಡಿಸುವ ಸಲುವಾಗಿ, ಭಾರತೀಯ ಸಂವಿಧಾನವನ್ನು ಮರುಪರಿಶೀಲಿಸಿ ರಾಷ್ಟ್ರಕ್ಕೆ ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಎಂದು ಮರುನಾಮಕರಣ ಮಾಡಬೇಕಿದೆ. ಪಕ್ಷ ಇದಕ್ಕಾಗಿ ಶ್ರಮಿಸುತ್ತದೆ" ಎಂದು ಪಾರ್ಟಿ ಇಂಗಿತ ವ್ಯಕ್ತಪಡಿಸಿದೆ.

Share this Story:

Follow Webdunia kannada