Select Your Language

Notifications

webdunia
webdunia
webdunia
webdunia

ದೇಶದಲ್ಲಿ ಬೀಸ್ತಿದೆ ಬದಲಾವಣೆ ಚಂಡಮಾರುತ, ಫೈಲಿನ್ ಲೆಕ್ಕಕ್ಕಿಲ್ಲ

ದೇಶದಲ್ಲಿ ಬೀಸ್ತಿದೆ ಬದಲಾವಣೆ ಚಂಡಮಾರುತ, ಫೈಲಿನ್ ಲೆಕ್ಕಕ್ಕಿಲ್ಲ
, ಶುಕ್ರವಾರ, 18 ಅಕ್ಟೋಬರ್ 2013 (17:14 IST)
PR
PR
ಚೆನ್ನೈ: ದೇಶದಲ್ಲಿ ಬದಲಾವಣೆಯ ಚಂಡಮಾರುತ ಬೀಸುತ್ತಿದೆ ಎಂದು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಒಡಿಶಾ ತೀರಕ್ಕೆ ಅಪ್ಪಳಿಸಿದ ಫೈಲಿನ್ ಚಂಡಮಾರುತ ಅಷ್ಟೊಂದು ಹಾನಿ ಮಾಡಲು ಸಾಧ್ಯವಾಗಿಲ್ಲ. ಏಕೆಂದರೆ ದೇಶದಲ್ಲಿ ಬೀಸುತ್ತಿರುವ ಬದಲಾವಣೆಯ ಚಂಡಮಾರುತದ ಹಾದಿಯಲ್ಲಿ ಯಾವುದೂ ನಿಲ್ಲಲು ಸಾಧ್ಯವಿಲ್ಲ ಎಂದು ಮೋದಿ ಮಾರ್ಮಿಕವಾಗಿ ತಿಳಿಸಿದರು. ಕಪ್ಪು ಹಣದ ವಿಷಯವನ್ನು ಕೆದಕಿದ ಅವರು, ಸಾಧುವಿಗೆ ಬಿದ್ದ 1000 ಟನ್ ಚಿನ್ನ ಹುದುಗಿಸಿಟ್ಟ ಕನಸನ್ನು ಆಧರಿಸಿ ಉತ್ಖನನ ನಡೆಸುತ್ತಿರುವುದಕ್ಕೆ ವ್ಯಂಗ್ಯವಾಡಿದರು.

ಇಡೀ ಜಗತ್ತು ನಮ್ಮನ್ನು ಹಾಸ್ಯ ಮಾಡುತ್ತಿದೆ. ಯಾರೋ ಒಬ್ಬರು ಸಾಧುವಿಗೆ ಕನಸು ಬಿತ್ತೆಂದು ಸರ್ಕಾರ ನೆಲೆ ಅಗೆಯಲು ಹೊರಟಿದ್ದು, ಹಾಸ್ಯಾಸ್ಪದ. ಸ್ವಿಸ್ ಬ್ಯಾಂಕ್‌ಗಳಲ್ಲಿ ಹುದುಗಿಸಿಟ್ಟ ಹಣ 1000 ಟನ್ ಚಿನ್ನಕ್ಕಿಂತ ಹೆಚ್ಚು ಮೌಲ್ಯದಿಂದ ಕೂಡಿದೆ. ಅದನ್ನು ಮೊದಲಿಗೆ ವಾಪಸು ಪಡೆಯಿರಿ ಎಂದು ಹೇಳಿದರು. ದೆಹಲಿಯಲ್ಲಿ ಅಧಿಕಾರದ ಬದಲಾವಣೆಗೆ ಕರೆ ನೀಡಿದ ಮೋದಿ, ತಮಿಳುನಾಡು ಜನರು ದೆಹಲಿಯ ಅಧಿಕಾರಸ್ಥರನ್ನು ಬದಲಾಯಿಸಲು ನಿರ್ಧರಿಸಿದ್ದಾರೆ. ದೆಹಲಿಯ ಮುಂದಿನ ಬಿಜೆಪಿ ಸರ್ಕಾರ, ತಮಿಳುನಾಡು ಜನರ ಆಕಾಂಕ್ಷೆಗಳನ್ನು ಪೂರೈಸುತ್ತದೆ ಎಂದು ಹೇಳಿದರು.

Share this Story:

Follow Webdunia kannada