Webdunia - Bharat's app for daily news and videos

Install App

ದೇಗುಲಕ್ಕೆ ಹಾನಿ; ಬಳ್ಳಾರಿ ಗಣಿ ಸ್ಥಗಿತಕ್ಕೆ ಸುಪ್ರೀಂ ಆದೇಶ

Webdunia
ಶನಿವಾರ, 12 ಮಾರ್ಚ್ 2011 (12:53 IST)
ಪುರಾತನ ದೇಗುಲಕ್ಕೆ ಹಾನಿಯಾಗುತ್ತಿದೆ ಎಂಬ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯು ನೀಡಿದ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ವೋಚ್ಚ ನ್ಯಾಯಾಲಯವು, ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿನ ಎಂಟು ಗಣಿಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆದೇಶ ನೀಡಿದೆ.

ಗಣಿಗಾರಿಕೆ ನಡೆಸುತ್ತಿರುವುದರಿಂದ ಪಕ್ಕದಲ್ಲಿನ ಪುರಾತನ ಜಂಬುನಾಥೇಶ್ವರ ದೇಗುಲಕ್ಕೆ ಹಾನಿಯಾಗುತ್ತಿದೆ ಎಂದು ಬಳ್ಳಾರಿ ನಿವಾಸಿ ಎ. ಗುರುಪ್ರಸಾದ್ ರಾವ್ ಆರೋಪಿಸಿದ್ದರು. ಅವರ ವಾದವನ್ನು ಕರ್ನಾಟಕ ಹೈಕೋರ್ಟ್ ತಳ್ಳಿ ಹಾಕಿತ್ತು. ಆದರೆ ಸುಪ್ರೀಂ ಕೋರ್ಟ್ ಅರ್ಜಿದಾರರ ವಾದವನ್ನು ಎತ್ತಿ ಹಿಡಿದಿದೆ.

ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ. ಗಂಗೂಲಿ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದೆ. ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯ ವರದಿಯನ್ನು ಪಡೆದ ನಂತರ ಸುಪ್ರೀಂ ಕೋರ್ಟ್ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ. ದೇಗುಲದ ಸುತ್ತ ಇರುವ ಎಲ್ಲಾ ಎಂಟು ಗಣಿಗಳಲ್ಲಿ ತಕ್ಷಣದಿಂದಲೇ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆದೇಶ ನೀಡಿದೆ.

ಪ್ರಾಚೀನ ಜಂಬುನಾಥೇಶ್ವರ ದೇವಸ್ಥಾನವನ್ನು ಗಣಿಗಾರಿಕೆಯಿಂದ ಆಗುವ ಹಾನಿಯಿಂದ ರಕ್ಷಿಸಬೇಕು ಎಂಬ ಅರ್ಜಿದಾರರ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್, 2010ರಲ್ಲಿ ಕರ್ನಾಟಕ ರಾಜ್ಯ ಸರಕಾರ, ಕೇಂದ್ರ ಸರಕಾರ ಮತ್ತು ಆರ್ಪೀ ಐರನ್ ಓರ್ ಮೈನ್ಸ್ ಕಂಪನಿಗೆ ( Aarpee Iron Ore Mines) ನೋಟಿಸ್ ಜಾರಿಗೊಳಿಸಿತ್ತು.

ಹೊಸಪೇಟೆ-ಬಳ್ಳಾರಿ ರಸ್ತೆಯಲ್ಲಿ ಸಿಗುವ ಜಂಬುನಾಥ ಬೆಟ್ಟದ ಸುಮಾರು 500 ವರ್ಷ ಹಳೆಯದಾದ ಜಂಬುನಾಥ ಸ್ವಾಮಿ ದೇಗುಲದ ಸುತ್ತ ಸ್ಫೋಟಕಗಳನ್ನು ಸಿಡಿಸಿ ಗಣಿಗಾರಿಕೆ ನಡೆಸುವುದರಿಂದ ದೇವಸ್ಥಾನದ ಗೋಡೆ ಮತ್ತು ಇಡೀ ಕಟ್ಟಡ ಹಾನಿಯಾಗುತ್ತಿದೆ.

ಕ್ರಿ.ಶ.1540ರ ಆಸುಪಾಸಿನಲ್ಲಿ ಕಟ್ಟಿರಬಹುದಾದ ದೇಗುಲ ಮತ್ತು ಪ್ರಾಚೀನ ಸ್ಮಾರಕ ಎಂದು ರಾಜ್ಯ ಸರಕಾರ ಘೋಷಿಸಿತ್ತು. ಅದರ ಪ್ರಕಾರ ಯಾವುದೇ ಸ್ಮಾರಕದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಬಾರದು. ಇದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಗುರುಪ್ರಸಾದ್ ಆರೋಪಿಸಿದ್ದರು.

ಗಣಿಗಾರಿಕಾ ಕಂಪನಿಯು ದೇಗುಲದ 200 ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುತ್ತಿದೆ. ಇದರಿಂದ ದೇಗುಲದ ಪ್ರಾಚೀನತೆ ನಶಿಸುತ್ತಿದೆ. ಆವರಣದಲ್ಲಿನ ಪವಿತ್ರ ಕೆರೆ ಸಂಪೂರ್ಣವಾಗಿ ಮಲಿನವಾಗಿದೆ. ಗಣಿಗಾರಿಕೆ ನಿಲ್ಲಿಸದೇ ಇದ್ದರೆ, ಇಡೀ ದೇವಸ್ಥಾನ ನಾಶವಾಗುತ್ತದೆ. ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ ಎನ್ನುವುದು ಅರ್ಜಿದಾರರ ವಾದವಾಗಿತ್ತು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಗಳ ಪಟ್ಟಿ ಇಲ್ಲಿದೆ ನೋಡಿ

ನಾಲ್ವಡಿ ಒಡೆಯರ್ ಗಿಂತ ನೀವು ಗ್ರೇಟ್ ಅಂತೆ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರ ನೋಡಿ

ಸಿದ್ದರಾಮಯ್ಯ ಒಡೆಯರ್ ಗಿಂತ ಗ್ರೇಟ್ ಎಂದಿದ್ದ ಯತೀಂದ್ರ: ಯದುವೀರ್ ಒಡೆಯರ್ ಉತ್ತರ ನೋಡಿ

ರಸಗೊಬ್ಬರ ರೈತರಿಗೆ ಸಿಗಲು ಸರ್ಕಾರ ವ್ಯವಸ್ಥೆಯೇ ಮಾಡಿಲ್ಲ: ಬಿವೈ ವಿಜಯೇಂದ್ರ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Show comments