Select Your Language

Notifications

webdunia
webdunia
webdunia
webdunia

ದೆಹಲಿ ಬಿಕ್ಕಟ್ಟು: 10 ದಿನಗಳ ಕಾಲಾವಕಾಶ ಕೋರಿದ ಕೇಜ್ರಿವಾಲ್

ದೆಹಲಿ ಬಿಕ್ಕಟ್ಟು: 10 ದಿನಗಳ ಕಾಲಾವಕಾಶ ಕೋರಿದ ಕೇಜ್ರಿವಾಲ್
, ಶನಿವಾರ, 14 ಡಿಸೆಂಬರ್ 2013 (12:38 IST)
PR
PR
ನವದೆಹಲಿ: ದೆಹಲಿಯಲ್ಲಿ ನೂತನ ಸರ್ಕಾರ ರಚನೆ ಬಿಕ್ಕಟ್ಟು ಈಗಲೂ ಮುಂದುವರಿದಿದ್ದು ಕೇಜ್ರಿವಾಲ್ 10 ದಿನಗಳ ಸಮಯಾವಕಾಶ ಕೋರಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಕೇಜ್ರಿವಾಲ್ ಭೇಟಿಯಾಗಿದ್ದಾಗ ಕೇಜ್ರಿವಾಲ್ ಈ ವಿಷಯವನ್ನು ಸ್ಪಷ್ಟಪಡಿಸಿದರು. ನಾವು ದೆಹಲಿಯಲ್ಲಿ ಸರ್ಕಾರ ರಚಿಸುತ್ತೇವೆ. ನಮ್ಮ ಷರತ್ತುಗಳಿಗೆ ಒಪ್ಪುವುದಾದರೆ ಮಾತ್ರ ಬೆಂಬಲ ನೀಡಬಹುದು ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಹೇಳಿದ್ದಾರೆ. ಬಿಜೆಪಿಗೆ ನಾಲ್ಕು ಸೀಟುಗಳನ್ನು ಖರೀದಿಸೋದು ದೊಡ್ಡ ಮಾತಲ್ಲ.

ಕಾಂಗ್ರೆಸ್ ಪಕ್ಷಕ್ಕೆ ದೆಹಲಿ ಜನರ ಬಗ್ಗೆ ಕಾಳಜಿಯಿಲ್ಲ. ನಮ್ಮ ಷರತ್ತುಗಳಿಗೆ ಒಪ್ಪುವುದಾದರೆ ಬೆಂಬಲ ಸೂಚಿಸಬಹುದು. ನಾವು ಯಾರಿಂದಲೂ ಬೆಂಬಲ ಕೇಳಿಲ್ಲ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಅಲ್ಲದೇ ಕೇಜ್ರಿವಾಲ್ 18 ಪ್ರಮುಖ ವಿಷಯಗಳ ಬಗ್ಗೆ ಉಭಯ ಪಕ್ಷಗಳ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ಬೇಷರತ್ ಬೆಂಬಲ ನೀಡುವುದರ ಉದ್ದೇಶವನ್ನು ಕೂಡ ಎರಡೂ ಪಕ್ಷಗಳು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.

Share this Story:

Follow Webdunia kannada