Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಬಹುತೇಕ ಖಚಿತ

ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಬಹುತೇಕ ಖಚಿತ
, ಸೋಮವಾರ, 16 ಡಿಸೆಂಬರ್ 2013 (18:18 IST)
PR
PR
ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಬಹುತೇಕ ಖಚಿತವಾಗಿದೆ. ಈವರೆಗೆ ಯಾವುದೇ ಪಕ್ಷ ಸರ್ಕಾರ ರಚನೆಗೆ ಮುಂದಾಗದ ಕಾರಣ ಇಂದಿನಿಂದ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಲಾಗಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ರಾಷ್ಟ್ರಪತಿಗೆ ಈ ಕುರಿತು ಪತ್ರ ಬರೆದಿದ್ದು, ಸರ್ಕಾರ ರಚನೆ ಬಿಕ್ಕಟ್ಟು ನಿವಾರಣೆ ಮಾಡುವಂತೆ ಕೋರಿದ್ದರು. ಇವತ್ತು ಕೇಂದ್ರ ಗೃಹಸಚಿವಾಲಯಕ್ಕೆ ಕೂಡ ಸರ್ಕಾರ ರಚನೆಯಾಗುವವರೆಗೆ ರಾಷ್ಟ್ರಪತಿ ಆಡಳಿತ ಕೋರಿ ಜುಂಗ್ ಮನವಿ ಮಾಡಿದ್ದರು. ಕೇಜ್ರಿವಾಲ್ ಅವರ 18 ಷರತ್ತುಗಳ ಪೈಕಿ 16 ಷರತ್ತುಗಳಿಗೆ ಕಾಂಗ್ರೆಸ್ ಬೆಂಬಲ ಸೂಚಿಸುವ ಅಗತ್ಯವಿಲ್ಲ ಎಂದು ಶಕೀಲ್ ಅಹ್ಮದ್ ಹೇಳಿದ್ದಾರೆ.

ಎರಡು ಅಂಶಗಳನ್ನು ಮಾತ್ರ ನಾವು ಒಪ್ಪುತ್ತೇವೆ. ಉಳಿದವು ಆಡಳಿತಾತ್ಮಕ ನಿರ್ಧಾರಗಳಾಗಿವೆ ಎಂದು ಶಕೀಲ್ ಹೇಳಿದ್ದಾರೆ. 16 ಷರತ್ತುಗಳಿಗೆ ಬೆಂಬಲ ಸೂಚಿಸುವ ಅಗತ್ಯವಿಲ್ಲ ಎಂದೂ ಅವರು ಹೇಳಿದರು.ಈ ಸಮಯದಲ್ಲಿ ಯಾವುದಾದ್ರೂ ಪಕ್ಷ ಸರ್ಕಾರ ರಚನೆಗೆ ಮುಂದಾದರೆ ಅದಕ್ಕೆ ಅವಕಾಶ ನೀಡಲಾಗುತ್ತದೆ. ಅವರು ಸದನದಲ್ಲಿ ವಿಶ್ವಾಸ ಮತ ಸಾಬೀತುಮಾಡಬೇಕಾಗುತ್ತದೆ. ಈ ಮಧ್ಯೆ, ಶಿಫಾರಸ್ಸಿನ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

Share this Story:

Follow Webdunia kannada