Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ರಚನೆ : ಕೇಜ್ರಿವಾಲ್ ಸುಳಿವು

ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ರಚನೆ : ಕೇಜ್ರಿವಾಲ್ ಸುಳಿವು
ನವದೆಹಲಿ , ಶನಿವಾರ, 21 ಡಿಸೆಂಬರ್ 2013 (11:03 IST)
PR
PR
ಸರ್ಕಾರಕ್ಕಾಗಿ ದೆಹಲಿಗರ ಕಾಯುವಿಕೆ ಶೀಘ್ರದಲ್ಲೇ ಮುಗಿಯಲಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಹೇಳುವ ಮೂಲಕ ಸರ್ಕಾರ ರಚನೆಯ ಸುಳಿವು ನೀಡಿದ್ದಾರೆ. ಹೊಸ ಸರ್ಕಾರಕ್ಕೆ ವಿದ್ಯುತ್ ಕಂಪನಿಗಳ ಲೆಕ್ಕತಪಾಸಣೆ ಮತ್ತು ಜನಲೋಕಪಾಲ ಮಸೂದೆ ರಾಜ್ಯದಲ್ಲಿ ಜಾರಿಗೆ ತರುವುದು ಮುಖ್ಯ ಆದ್ಯತೆಗಳಾಗಿವೆ ಎಂದು ಹೇಳಿದ್ದಾರೆ. ಎಎಪಿ ನಡೆಸುತ್ತಿರುವ ಜನಾಭಿಪ್ರಾಯ ಸಂಗ್ರಹ ಮುಗಿಯುವ ತನಕ ಸರ್ಕಾರ ರಚನೆಯ ಪ್ರಕಟಣೆಗೆ ಕಾಯಬೇಕು ಎಂದು ಹೇಳಿದ ಕೇಜ್ರಿವಾಲ್, ಕೆಜೆಪಿ ಅಧಿಕಾರದ ಗದ್ದುಗೆಗೆ ಏರಿದರೆ, ಸಾಂಪ್ರದಾಯಿಕ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗಿಂತ ಒಳ್ಳೆಯ ಕೆಲಸ ಮಾಡುತ್ತದೆಂದು ಪ್ರತಿಪಾದಿಸಿದರು.

ಎಂಟು ಕಾಂಗ್ರೆಸ್ ಶಾಸಕರ ಬಾಹ್ಯ ಬೆಂಬಲಕ್ಕೆ ಒಪ್ಪಿಕೊಳ್ಳುವ ಔಪಚಾರಿಕ ನಿರ್ಧಾರವನ್ನು ಎಎಪಿ ತೆಗೆದುಕೊಳ್ಳಬೇಕಿದೆ. ಇದರಿಂದ ದೆಹಲಿ ವಿಧಾನಸಭೆಯಲ್ಲಿ ಅರ್ಧಭಾಗದಷ್ಟು ಸದಸ್ಯಬಲ ಸಿಗಲಿದೆ.ಮುಖ್ಯವಾಹಿನಿ ಪಕ್ಷಗಳು ಎಎಪಿಯನ್ನು ಕೆಳದರ್ಜೆಯಲ್ಲಿ ಇರಿಸಿದ್ದು, ನಾನು ಅವರಿಗೆ ಹೇಳಲು ಬಯಸ್ತೇನೆ, ಆಮ್ ಆದ್ಮಿಯ ಶಕ್ತಿಗೆ ಸವಾಲು ಹಾಕಬೇಡಿ, ನಮಗೆ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂಬ ಭಾವನೆ ಬಿತ್ತಲಾಗಿದೆ. ಆಡಳಿತವೆಂದರೆ ಚಂದ್ರನಲ್ಲಿಗೆ ಹೋಗಿ ಬರುವುದಲ್ಲ ಎಂದು ಹೇಳಿದರು.

Share this Story:

Follow Webdunia kannada