Select Your Language

Notifications

webdunia
webdunia
webdunia
webdunia

ದುಃಸ್ವಪ್ನ ಕೊನೆಗೊಂಡಿತು: ದೆಹಲಿ ಸರ್ಕಾರ ಪತನಕ್ಕೆ ಜೇಟ್ಲಿ ಪ್ರತಿಕ್ರಿಯೆ

ದುಃಸ್ವಪ್ನ ಕೊನೆಗೊಂಡಿತು: ದೆಹಲಿ ಸರ್ಕಾರ ಪತನಕ್ಕೆ ಜೇಟ್ಲಿ ಪ್ರತಿಕ್ರಿಯೆ
, ಶನಿವಾರ, 15 ಫೆಬ್ರವರಿ 2014 (18:11 IST)
PR
PR
ಆಮ್ ಆದ್ಮಿ ಮುಖ್ಯಮಂತ್ರಿ ಕೇಜ್ರಿವಾಲ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ತಮ್ಮ ವೆಬ್‌ಸೈಟ್ ಲೇಖನವೊಂದರಲ್ಲಿ ದೆಹಲಿಯ ಹಿಂದೆಂದೂ ಕಂಡಿರದ ಅತಿಕೆಟ್ಟ ಸರ್ಕಾರ ರಾಜೀನಾಮೆ ನೀಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಎಎಪಿ ಸರ್ಕಾರ ಯಾವುದೇ ಕಾರ್ಯಸೂಚಿ ಮತ್ತು ಸಿದ್ಧಾಂತವಿಲ್ಲದ ಸರ್ಕಾರ ಎಂದು ಟೀಕಿಸಿ ಅಂತಿಮವಾಗಿ ದುಃಸ್ವಪ್ನ ಕೊನೆಗೊಂಡಿತು ಎಂದು ಪ್ರತಿಕ್ರಿಯಿಸಿದ್ದಾರೆ.ಕಳೆದ 49 ದಿನಗಳು ಅಸಂಪ್ರದಾಯಿಕ ಸರ್ಕಾರಕ್ಕೆ ಸಾಕ್ಷಿಯಾಯಿತು. ಫುಡಾರಿತನಕ್ಕೆ ಮತ್ತು ಪ್ರಚಾರಕ್ಕೆ ಬದ್ಧವಾದ ಸರ್ಕಾರ ಎಂದು ಅವರು ಟೀಕಿಸಿದರು. ಉಪಾಯದ ರಾಜಕೀಯ ಮತ್ತು ಶೂನ್ಯಆಡಳಿತ ಇದು ಎಎಪಿ ಸರ್ಕಾರದ ಧ್ಯೇಯವಾಗಿತ್ತು.

ಇದು ಜನಾದೇಶವಿಲ್ಲದ ಸರ್ಕಾರ. ಅದರ ಬಹುತೇಕ ಶಾಸಕರು ಅನುನುಭವಿಗಳು, ಪಕ್ವತೆಯ ಕೊರತೆಯಿತ್ತು. ಪ್ರತಿಭಟನಾತ್ಮಕ ಮನೋಭಾವವಿದ್ದರೂ, ಆಡಳಿತದ ಯಾವುದೇ ರೂಪಕ್ಕೆ ಪರಕೀಯರಾಗಿದ್ದರು ಎಂದು ಜೇಟ್ಲಿ ಬರೆದಿದ್ದಾರೆ. ದೆಹಲಿಗೆ ಕುಡಿಯುವ ನೀರಿನ ಸಂಪರ್ಕ ವಿಸ್ತರಣೆಗೆ ಎಎಪಿ ಸರ್ಕಾರ ನಿರ್ಧರಿಸಿದೆಯೇ?

webdunia
PR
PR
ದೆಹಲಿಯಲ್ಲಿ ಆರೋಗ್ಯಸೇವೆ ಸೌಲಭ್ಯಗಳ ಹೆಚ್ಚಳಕ್ಕೆ ಯೋಜನೆ ರೂಪಿಸಿತೇ? ಹೊಸ ಶಾಲೆ ಮತ್ತು ಕಾಲೇಜುಗಳ ಸ್ಥಾಪನೆಗೆ ಯೋಚಿಸಿತೇ?ದೆಹಲಿ ಮೆಟ್ರೋವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಬಗ್ಗೆ ಯೋಚಿಸಿತೇ? ಇವೆಲ್ಲಾ ಜೀವನಮಟ್ಟವನ್ನು ಹೆಚ್ಚಿಸುವ ಕ್ಷೇತ್ರಗಳು. ಆದರೆ ಸರ್ಕಾರಕ್ಕೆ ಆ ಬಗ್ಗೆ ಯಾವುದೇ ಯೋಚನೆ ಇರಲಿಲ್ಲ. ಬರೀ ಪ್ರತಿಭಟನೆಗಳ ವಿಷಯಗಳಿಗೆ ಗಮನಹರಿಸಿತು. ಗೃಹಸಚಿವರು, ಲೆ. ಗವರ್ನರ್, ಪೊಲೀಸ್ ಆಯುಕ್ತರು, ಆಫ್ರಿಕನ್ ಮಹಿಳೆಯರು ಹೀಗೆ ಎಲ್ಲರ ವಿರುದ್ಧ ಪ್ರತಿಭಟನೆ ನಡೆಸಿದರು.

ಕಾಲ್ಪನಿಕ ಶತ್ರುಗಳನ್ನು, ಕಟ್ಟುಕಥೆಯನ್ನು ರೂಪಿಸಿ ಪ್ರಚಾರ ಮಾಡುವುದು ಅದರ ಕಾರ್ಯವೈಖರಿಯಾಗಿತ್ತು. ಅವರ ಮುಖಂಡರು ಮಾತ್ರ ಪ್ರಾಮಾಣಿಕರು, ಉಳಿದವರೆಲ್ಲ ರಾಜೀ ಮಾಡಿಕೊಂಡವರು ಎಂಬ ನಂಬಿಕೆ ಹೊಂದಿತ್ತು. ಇದರಿಂದ ಸರ್ಕಾರ ಜನಪ್ರಿಯತೆ ಕಳೆದುಕೊಂಡಿತು.ಸಚಿವಾಲಯದಲ್ಲಿ ಕುಳಿತ ತಮ್ಮ ಮುಖಂಡರು ಚೈನಾ ಶಾಪ್‌ನಲ್ಲಿ ಕುಳಿತುಕೊಂಡ ಗೂಳಿ ಎಂಬ ಅರಿವಾಯಿತು. ಅವರು ಬೀದಿಗಳಿಗೆ ಮಾತ್ರ ಲಾಯಕ್ಕಾಗಿದ್ದರು. ಆದ್ದರಿಂದ ನಿರ್ಗಮನ ದ್ವಾರವನ್ನು ರೂಪಿಸಿತು.

webdunia
PR
PR
ಜನಲೋಕಪಾಲ ಮಸೂದೆಯನ್ನು ಕೊನೆ ದಿನದವರೆಗೆ ರಹಸ್ಯವಾಗಿ ಇರಿಸಿತು.ತಮ್ಮ ಮಸೂದೆ ಕೇಂದ್ರದ ಮಸೂದೆಗೆ ಹೋಲಿಸಿದರೆ ಕ್ರಾಂತಿಕಾರಿ ಎಂಬ ಸುಳ್ಳು ಪ್ರಚಾರವನ್ನು ಮಾಡಿತು. ರಾಜೀನಾಮೆ ಉದ್ದೇಶಕ್ಕಾಗಿ ಮಸೂದೆಯ ಅನುಮೋದನೆಗೆ ಅಗತ್ಯವಾಗಿದ್ದ ಸಾಂಪ್ರದಾಯಿಕ ವಿಧಾನವನ್ನು ಧಿಕ್ಕರಿಸಿ ಎಎಪಿ ಸರ್ಕಾರ ನಿರ್ಗಮಿಸಿತು.

ಪರ್ಯಾಯ ರಾಜಕೀಯ ಶಕ್ತಿಯ ಹೊಮ್ಮುವಿಕೆಗೆ ಕಾಯುತ್ತಿದ್ದ ಅನೇಕ ಜನರಿಗೆ ಇದು ನಿರಾಶೆ ಉಂಟುಮಾಡಿತು. ಪರ್ಯಾಯ ರಾಜಕೀಯವು ಪ್ರಚಾರಪ್ರಿಯತೆ, ಬೂಟಾಟಿಕೆ ಮತ್ತು ಫುಡಾರಿತನ. ಆದರೆ ಆಡಳಿತವಲ್ಲ. ದೇವರಿಗೆ ಧನ್ಯವಾದ, ಕೊನೆಗೂ ದುಃಸ್ವಪ್ನ ಕೊನೆಗೊಂಡಿತು.

Share this Story:

Follow Webdunia kannada