Select Your Language

Notifications

webdunia
webdunia
webdunia
webdunia

ದಿಗ್ವಿಜಯ್ ಸಿಂಗ್ ಉತ್ತಮ ಪ್ರಧಾನಿ ಅಭ್ಯರ್ಥಿ: ಸುಷ್ಮಾ ಸ್ವರಾಜ್ ತಿರುಗೇಟು

ದಿಗ್ವಿಜಯ್ ಸಿಂಗ್ ಉತ್ತಮ ಪ್ರಧಾನಿ ಅಭ್ಯರ್ಥಿ: ಸುಷ್ಮಾ ಸ್ವರಾಜ್ ತಿರುಗೇಟು
ನವದೆಹಲಿ , ಬುಧವಾರ, 26 ಮಾರ್ಚ್ 2014 (16:37 IST)
PR
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗಿಂತ ದಿಗ್ವಿಜಯ್ ಸಿಂಗ್ ಉತ್ತಮ ಪ್ರಧಾನಿ ಅಭ್ಯರ್ಥಿ ಎಂದು ಲೋಕಸಭೆಯ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರಿಗಿಂತ ಸುಷ್ಮಾ ಉತ್ತಮ ಪ್ರಧಾನಿ ಅಭ್ಯರ್ಥಿ ಎಂದು ದಿಗ್ವಿಜಯ್ ನೀಡಿದ ಹೇಳಿಕೆಗೆ ಸುಷ್ಮಾ ಪ್ರತ್ರಿಕ್ರಿಯೆ ನೀಡಿದ್ದಾರೆ.

ಮಧ್ಯಪ್ರದೇಶದಲ್ಲಿ ಸತತ ಮೂರು ಬಾರಿ ಸೋಲನುಭವಿಸಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಧೈರ್ಯವಿಲ್ಲದ ವ್ಯಕ್ತಿಯ ಸಲಹೆಗಳು ಬಿಜೆಪಿಗೆ ಅಗತ್ಯವಿಲ್ಲ. ಅವರ ಹೇಳಿಕೆಗಳು ಹಾಸ್ಯಾಸ್ಪದ ಎಂದು ಬಿಜೆಪಿ ಕಿಡಿಕಾರಿತ್ತು.

ಬಿಜೆಪಿಯ ಹೈಕಮಾಂಡ್ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿದೆ. ಆದರೆ, ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದನ್ನು ದಿಗ್ವಿಜಯ್ ಸಿಂಗ್ ಬಹಿರಂಗಪಡಿಸಲಿ ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಸವಾಲ್ ಹಾಕಿದ್ದಾರೆ.

Share this Story:

Follow Webdunia kannada