Webdunia - Bharat's app for daily news and videos

Install App

ತೆಲಂಗಾಣ ಮಸೂದೆಗೆ ಆಗ್ರಹಿಸಿ ಪ್ರತಿಭಟನೆ, ಹಿಂಸಾಚಾರ

Webdunia
ಗುರುವಾರ, 10 ಮಾರ್ಚ್ 2011 (16:32 IST)
ಇತ್ತೀಚಿನ ಕೈರೋ ಪ್ರತಿಭಟನೆಯನ್ನೇ ಮಾದರಿಯಾಗಿ ಪರಿಗಣಿಸಿರುವ ತೆಲಂಗಾಣ ಪರ ಹೋರಾಟಗಾರರು, ಪ್ರಸಕ್ತ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲೇ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಕುರಿತು ಮಸೂದೆ ಮಂಡಿಸಬೇಕು ಎಂದು ಒತ್ತಾಯಿಸಿ ನಡೆಸಿದ ಪ್ರತಿಭಟನೆ ಉಗ್ರ ಸ್ವರೂಪ ತಾಳಿರುವ ವರದಿಗಳು ಬಂದಿವೆ.

' ಹೈದರಾಬಾದ್‌ಗೆ ಮಿಲಿಯನ್ ಮಾರ್ಚ್' ಎಂಬ ಹೆಸರಿನಲ್ಲಿ ಗುರುವಾರ ನಡೆದ ಭಾರೀ ಪ್ರತಿಭಟನಾ ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ ತೆಲಂಗಾಣ ಪರ ಹೋರಾಟಗಾರರು ಭಾಗವಹಿಸಿದರು. ಈ ಸಂದರ್ಭದಲ್ಲಿ ಭಾರೀ ಹಿಂಸಾಚಾರಗಳು ನಡೆದವು. ಹಲವು ಕಡೆ ಬಸ್ಸುಗಳಿಗೆ ಬೆಂಕಿ ಹಚ್ಚಲಾಯಿತು ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಲಾಯಿತು.

ಬೆಳಗ್ಗೆಯಿಂದಲೇ ಸಂಚಾರ ನಿರ್ಬಂಧಗಳನ್ನು ಜಾರಿಗೆ ತರಲಾಗಿತ್ತು. ಇದರಿಂದಾಗಿ ಕಚೇರಿಗೆ ಮತ್ತು ಇತರ ಕಡೆ ತೆರಳುವ ಸಾರ್ವಜನಿಕರು ಭಾರೀ ತೊಂದರೆಗೀಡಾದರು. ಯೋಜನೆಯಂತೆ ಪ್ರತಿಭಟನೆ ಇಡೀ ದಿನ ನಡೆಯಬೇಕಿತ್ತು. ಆದರೆ ಶಾಲಾ ಪರೀಕ್ಷೆಗಳ ಹಿನ್ನೆಲೆಯಲ್ಲಿ ನಂತರ ಇದನ್ನು ಅಪರಾಹ್ನ ಒಂದರಿಂದ ನಾಲ್ಕು ಗಂಟೆಗೆ ಸೀಮಿತಗೊಳಿಸಲಾಯಿತು.

ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪೊಲೀಸರತ್ತ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿರುವುದು, ಪೊಲೀಸರು ಹಿಂಸಾಚಾರ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಆಶ್ರುವಾಯು ಸಿಡಿಸಿ ಚದುರಿಸಿರುವುದು, ಕಾಂಗ್ರೆಸ್ ಸಂಸದ ಕೇಶವ ರಾವ್, ನಿಜಾಮಾಬಾದ್ ಸಂಸದ ಮಧು ಗೌಡ್ ಯಕ್ಷಿ ಅವರ ವಾಹನಗಳ ಮೇಲೆ ದಾಳಿ ಮುಂತಾದ ಅಹಿತಕರ ಪ್ರಸಂಗಗಳು ನಡೆದಿವೆ.

ಆಂಧ್ರಪ್ರದೇಶದಿಂದ ತೆಲಂಗಾಣ ಪ್ರಾಂತ್ಯವನ್ನು ಪ್ರತ್ಯೇಕಗೊಳಿಸಿ ರಾಜ್ಯ ರಚಿಸುವ ಸಂಬಂಧ ಈಗ ನಡೆಯುತ್ತಿರುವ ಅಧಿವೇಶನದಲ್ಲೇ ಮಸೂದೆಯನ್ನು ಮಂಡಿಸಬೇಕು. ಆ ಮೂಲಕ ತಮ್ಮ ಬೇಡಿಕೆಯನ್ನು ಕೇಂದ್ರ ಈಡೇರಿಸಬೇಕು ಎಂದು ಒತ್ತಾಯಿಸಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆಗೆ ಹೈದರಾಬಾದ್ ಮತ್ತು ಸೈಬರಾಬಾದ್ ಪೊಲೀಸರು ಅವಕಾಶ ನಿರಾಕರಿಸಿದ್ದರು. ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಬಹುದು ಎಂಬ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಕೂಡ ಹೇರಿದ್ದರು.

ಆದರೆ ಇವೆಲ್ಲವನ್ನೂ ಧಿಕ್ಕರಿಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಪ್ರತಿಭಟನಾಕಾರರು ಬಂಧನಕ್ಕೊಳಗಾದರು ಎಂದು ವರದಿಗಳು ಹೇಳಿವೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಕೊಲ್ಲಲ್ಪಟ್ಟ ಉಗ್ರರು ಪಾಕ್‌ನವರು ಎಂಬುದಕ್ಕೆ ಪ್ರಮುಖ ಸಾಕ್ಷಿ ಕೊಟ್ಟ ಅಮಿತ್ ಶಾ

ಧರ್ಮಸ್ಥಳ: ಶ್ವಾನ ಪಡೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಒಂದನೇ ಪಾಯಿಂಟ್ಸ್‌ನ ಹುಡುಕಾಟದಲ್ಲಿ ಮಹತ್ವದ ಬದಲಾವಣೆ

Show comments