Select Your Language

Notifications

webdunia
webdunia
webdunia
webdunia

ತೃತೀಯ ರಂಗದ ರಚನೆಗೆ ಮುನ್ನುಡಿ ಬರೆದ ನಿತೀಶ್‌ಕುಮಾರ್,ಮುಲಾಯಂ

ತೃತೀಯ ರಂಗದ ರಚನೆಗೆ ಮುನ್ನುಡಿ ಬರೆದ ನಿತೀಶ್‌ಕುಮಾರ್,ಮುಲಾಯಂ
ನವದೆಹಲಿ , ಶುಕ್ರವಾರ, 14 ಮಾರ್ಚ್ 2014 (13:57 IST)
PR
PR
ಲೋಕಸಭಾ ಚುನಾವಣೆಗೆ 3 ತಿಂಗಳಷ್ಟೇ ಬಾಕಿ ಉಳಿದಿದ್ದು, ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ್ ಮತ್ತು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಇಂದಿಲ್ಲಿ ತೃತೀಯ ರಂಗದ ರಚನೆಗೆ ಮತ್ತೊಮ್ಮೆ ಮುನ್ನುಡಿ ಬರೆದರು. ಫೆಬ್ರವರಿ 5 ರಂದು ನಡೆಯಲಿರುವ ಸಭೆಯಲ್ಲಿ ದೇಶದೆಲ್ಲೆಡೆಗಳಿಂದ ಸುಮಾರು 14 ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು ತೃತೀಯ ರಂಗದ ರಚನೆ ಕುರಿತು ಚರ್ಚಿಸಲಿದ್ದೇವೆ ಎಂದು ಅವರು ಘೋಷಿಸಿದರು. ನಾವು ಮಾತುಕತೆ ನಡೆಸುತ್ತಿದ್ದೇವೆ, ಬಲಪಂಥ ಮುಂದಾಳತ್ವವನ್ನು ವಹಿಸಿದ್ದು, ನಾವು ಅವರನ್ನು ಬೆಂಬಲಿಸಲಿದ್ದೇವೆ; ಕಾಂಗ್ರೆಸ್ ಮತ್ತು ಬಿ.ಜೆ.ಪಿ ಗಳೆರಡು ಪಕ್ಷಗಳು ನಮ್ಮ ಶತ್ರುಗಳೇ ಎಂದು ಪಾಟ್ನಾದಲ್ಲಿ ಅವರು ಹೇಳಿಕೆ ನೀಡಿದರು.

webdunia
PR
PR
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರಕಾರಕ್ಕೆ ಬೆಂಬಲ ನೀಡುತ್ತಿರುವ ಮುಲಾಯಂ ಸಿಂಗ್ ಯಾದವ್ ಸಹ ಲಖನೌ ನಲ್ಲಿ ತೃತೀಯ ರಂಗ ರಚನೆಯಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದರು. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರ ಸೈಕಲ್ ಜಾಥಾ ವನ್ನು ಉದ್ಘಾಟಿಸಿ ಮಾತನಾಡಿದ ಅವರು "ನಾವು ಈಗಾಗಲೇ ಉತ್ತರಪ್ರದೇಶದಲ್ಲಿ ಗೆಲುವನ್ನು ಸಾಧಿಸಿದ್ದೇವೆ.

ಕೇಂದ್ರ ಸರಕಾರ ರಚನೆಯಲ್ಲಿ ಕೂಡ ಸಮಾಜವಾದಿ ಪಕ್ಷ ಬಹುಮುಖ್ಯ ಪಾತ್ರವನ್ನು ವಹಿಸಲಿದೆ" ಎಂದರು.ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ತೃತೀಯ ರಂಗ ರಚನೆಯಲ್ಲಿ ಬಹುಮುಖ್ಯಪಾತ್ರವನ್ನು ವಹಿಸಬಹುದೆಂದು ಹೇಳಲಾಗುತ್ತಿದೆ. ಮುಂದಿನ ಪ್ರಧಾನಿಯಾಗಲು ತಮ್ಮ ಆಸೆಯನ್ನು ಒತ್ತಿ ಹೇಳುವಂತಿದ್ದ ಅವರು ತಮ್ಮ ಮಾತುಗಳಲ್ಲಿ "ಬಿಜೆಪಿ ಕಾಂಗ್ರೇಸ್ ಗೆ ಪರ್ಯಾಯವಲ್ಲ. ಕಾಂಗ್ರೇಸ್ ಗೆ ಬಿಜೆಪಿ ಪರ್ಯಾಯವಲ್ಲ. ಕೇವಲ ತೃಣಮೂಲ ಮಾತ್ರ ದೇಶಕ್ಕೆ ಪರ್ಯಾಯವಾಗಲು ಸಾಧ್ಯ " ಎಂದು ಹೇಳಿದ್ದರು.

Share this Story:

Follow Webdunia kannada