Select Your Language

Notifications

webdunia
webdunia
webdunia
webdunia

ತಿರುಪತಿ ತಿಮ್ಮಪ್ಪನ ಚಿತ್ರವಿರುವ ವಜ್ರಖಚಿತ ವಾಚ್ ಮಾರುಕಟ್ಟೆಗೆ

ತಿರುಪತಿ ತಿಮ್ಮಪ್ಪನ ಚಿತ್ರವಿರುವ ವಜ್ರಖಚಿತ ವಾಚ್ ಮಾರುಕಟ್ಟೆಗೆ
ಹೈದರಾಬಾದ್‌ , ಶುಕ್ರವಾರ, 22 ಫೆಬ್ರವರಿ 2013 (11:25 IST)
PTI
ತಿರುಪತಿ ತಿಮ್ಮಪ್ಪನ ಭಕ್ತರು ತಿಮ್ಮಪ್ಪನ ಚಿತ್ರ ಇರುವ ಉಂಗುರ ಅಥವಾ ಸರ ಧರಿಸುವುದು ನೋಡಿದ್ದೇವೆ. ಆದರೆ ಇದೀಗ ತಿಮ್ಮಪ್ಪನ ಚಿತ್ರ ಇರುವ ಭಾರೀ ದುಬಾರಿ ವಾಚ್‌ ಮಾರುಕಟ್ಟೆಗೆ ಬರುತ್ತಿದೆ. ಆದರೆ ಇವು ಬೇಕೆಂದೆಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ. ಕೇವಲ 333 ವಾಚ್‌ಗಳು ಮಾತ್ರವೇ ಲಭ್ಯವಿದೆ.

ಸ್ವಿಜರ್ಲೆಂಡ್‌ ಮೂಲದ ಸೆಂಚುರಿ ಟೈಮ್‌ ಜೆಮ್ಸ್‌ ಮತ್ತು ರೋಡಿಯೋ ಡ್ರೈವ್‌ ಕಂಪನಿ ಈ ವಾಚುಗಳನ್ನು ನಿರ್ಮಿಸಿ ಮಾರಾಟ ಮಾಡಲು ಮುಂದಾಗಿದೆ. ಈ ವಾಚ್‌ನಲ್ಲಿನ ಮುಳ್ಳುಗಳನ್ನು ವಜ್ರದಿಂದ ತಯಾರಿಸಲಾಗಿದ್ದು, ವಾಚ್‌ನೊಳಗೆ ಪಚ್ಚೆ, ಹವಳ ಮುಂತಾದ ಬೆಲೆಬಾಳುವ ವಸ್ತುಗಳನ್ನು ಅಳವಡಿಸಲಾಗಿದೆ. ಪ್ರತಿ ವಾಚ್‌ ಕೂಡಾ 27 ಲಕ್ಷ ರೂ. ಮೂಲ ಬೆಲೆ ಹೊಂದಿದೆ.

ಹೈದರಾಬಾದ್‌ನಲ್ಲಿ ಗುರುವಾರ ಈ ವಾಚ್‌ಗಳನ್ನು ಬಿಡುಗಡೆ ಮಾಡಲಾಯಿತು. ಶೀಘ್ರವೇ ಈ ವಾಚ್‌ಗಳನ್ನು ಬೆಂಗಳೂರು ಸೇರಿ ದೇಶದ ಹಲವು ನಗರಗಳಲ್ಲಿ ಪ್ರದರ್ಶಿಸಲಾಗುವುದು ಬಳಿಕ ಇವುಗಳನ್ನು ಲಂಡನ್‌ನಲ್ಲಿ ಹರಾಜು ಹಾಕಲಾಗುವುದು.

ಈ ವಾಚ್‌ಗಳ ಮಾರಾಟದಿಂದ ಬಂದ ಆದಾಯದ ಶೇ.33ರಷ್ಟು ಹಣವನ್ನು ತಿರುಪತಿ ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ) ನಡೆಸುತ್ತಿರುವ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕೆ ನೀಡಲಾಗುವುದು.

ವಿರೋಧ, ಪ್ರತಿಭಟನೆ:

ಆದರೆ ತಿಮ್ಮಪ್ಪನ ಚಿತ್ರವನ್ನು ವಾಚ್‌ನಲ್ಲಿ ಬಳಸಲು ಅನುಮತಿ ನೀಡಿರುವ ಟಿಟಿಡಿ ಕ್ರಮಕ್ಕೆ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಗುರುವಾರ ಈ ಕುರಿತು ಹಿಂದೂ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದವು.

ಆದರೆ ದೇವಸ್ಥಾನ ಮಂಡಳಿ ಮಾತ್ರ, 'ದೇವರ ಹೆಸರನ್ನು ಯಾರೂ ದುರ್ಬಳಕೆ ಮಾಡಿಕೊಂಡಿಲ್ಲ. ವಾಣಿಜ್ಯಿಕ ಉದ್ದೇಶ ಇದರಲ್ಲಿಲ್ಲ. ಇದು ಭಕ್ತಿಪ್ರಧಾನವಾದ ಒಂದು ಕ್ರಮ' ಎಂದು ಸ್ಪಷ್ಟಪಡಿಸಿದೆ.

Share this Story:

Follow Webdunia kannada