Webdunia - Bharat's app for daily news and videos

Install App

ತರುಣಿ, ಹೆತ್ತವರ ಅಕ್ರಮ ಬಂಧನ: ರಾಹುಲ್ ಗಾಂಧಿಗೆ ನೋಟಿಸ್

Webdunia
ಬುಧವಾರ, 2 ಮಾರ್ಚ್ 2011 (12:41 IST)
ತರುಣಿ ಮತ್ತಾಕೆಯ ಹೆತ್ತವರನ್ನು 2007ರಿಂದಲೂ ಅಕ್ರಮ ಬಂಧನದಲ್ಲಿಟ್ಟಿರುವ ದೂರಿನ ಆಧಾರದಲ್ಲಿ ಅಲಹಾಬಾದ್ ಹೈಕೋರ್ಟಿನ ಲಖ್ನೋ ಪೀಠವು ಭವಿಷ್ಯದ ಪ್ರಧಾನಿ ಎಂದೇ ಬಿಂಬಿತವಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದೆ.

24 ರ ಹರೆಯದ ಸುಕನ್ಯಾ ದೇವಿ, ಆಕೆಯ ತಂದೆ ಬಲರಾಂ ಸಿಂಗ್ ಮತ್ತು ತಾಯಿ ಸುಮಿತ್ರಾ ದೇವಿ ಅವರ ಪರವಾಗಿ ಮಧ್ಯ ಪ್ರದೇಶದ ಸಮಾಜವಾದಿ ಪಕ್ಷದ ಮಾಜಿ ಶಾಸಕ ಕಿಶೋರ್ ಸಮ್ರಿತೆ ಎಂಬವರು ಈ ಕುರಿತು ಹೇಬಿಯಸ್ ಕಾರ್ಪಸ್ ದೂರು ಸಲ್ಲಿಸಿದ್ದು, ಉತ್ತರಿಸುವಂತೆ ನ್ಯಾಯಮೂರ್ತಿ ಶ್ರೀ ನಾರಾಯಣ ಶುಕ್ಲಾ ಅವರು ಆದೇಶ ನೀಡಿದ್ದಾರೆ.

2007 ರ ಜನವರಿ 4ರಿಂದೀಚೆಗೆ ಅರ್ಜಿದಾರರಾದ ಸುಕನ್ಯಾ ದೇವಿ ಮತ್ತು ಹೆತ್ತವರು ರಾಹುಲ್ ಗಾಂಧಿಯ ಅಕ್ರಮ ಬಂಧನದಲ್ಲಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ. ತಕ್ಷಣವೇ ಈ ತರುಣಿ ಮತ್ತಾಕೆಯ ಹೆತ್ತವರನ್ನು ನ್ಯಾಯಾಲಯದೆದುರು ಹಾಜರುಪಡಿಸಿ, ಅವರನ್ನು ಬಂಧಮುಕ್ತಗೊಳಿಸುವಂತೆ ಕಾಂಗ್ರೆಸ್ ನಾಯಕನಿಗೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಕೆಲವೊಂದು ಸುದ್ದಿ ವೆಬ್‌ಸೈಟುಗಳಿಂದ ಈ ಕುರಿತು ತಿಳಿದು ತಾನು ಮಧ್ಯಪ್ರದೇಶದ ಬಾಲಘಾಟ್‌ನಿಂದ ಅಮೇಥಿಗೆ ಬಂದು ನೋಡಿದೆ. ಅಲ್ಲಿ ಈ ಕುಟುಂಬದ ಮನೆಗೆ ಬೀಗ ಜಡಿಯಲಾಗಿತ್ತು. ಸ್ಥಳೀಯ ಗ್ರಾಮಸ್ಥರು ಕೂಡ ಅವರೆಲ್ಲಿದ್ದಾರೆ ಎಂಬ ಕುರಿತು ಬಾಯಿ ಬಿಡುತ್ತಿಲ್ಲವಾದುದರಿಂದ, ತಾನು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವುದಾಗಿ ಶಾಸಕ ಕಿಶೋರ್ ಸಮ್ರಿತೆ ಹೇಳಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈ-ಮ್ಯಾಂಚೆಸ್ಟರ್ ಮಾರ್ಗದಲ್ಲಿ ವಿಮಾನಯಾನ ಹೆಚ್ಚಿಸಿದ ಇಂಡಿಗೋ ಏರ್‌ಲೈನ್ಸ್‌

ಭಟ್ಕಳ: ಅಲೆಗಳ ಅಬ್ಬರಕ್ಕೆ ಮಗುಚಿದ ನಾಡದೋಣಿ, ನಾಲ್ವರು ಸಾವು

ನಾಸಾ-ಇಸ್ರೋ ನಿಸಾರ್ ಉಪಗ್ರಹ: ನಭಕ್ಕೆ ಚಿಮ್ಮಿದ ನಿಸಾರ್ ಮಾಡಲಿದೆ ಈ ಅಧ್ಯಯನ

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಅಣ್ಣಾಮಲೈಗೆ ಮುಂದಿನ ಎಲೆಕ್ಷನ್‌ನಲ್ಲೂ ಟಿಕೆಟ್‌ ಡೌಟ್‌, ಕಾರಣ ಇಲ್ಲಿದೆ

ಧರ್ಮಸ್ಥಳ ಉತ್ಖನನ ವೇಳೆ ಕಂಡಿದ್ದೇನು: ಬಿಗ್ ಟ್ವಿಸ್ಟ್

Show comments