Select Your Language

Notifications

webdunia
webdunia
webdunia
webdunia

ತಮಿಳು ನಾಡು ಬಂದ್ ಇಲ್ಲ ಸುಪ್ರೀಂ ಕೋರ್ಟ್ ಆದೇಶ

ತಮಿಳು ನಾಡು ಬಂದ್ ಇಲ್ಲ ಸುಪ್ರೀಂ ಕೋರ್ಟ್ ಆದೇಶ
ನವದೆಹಲಿ , ಭಾನುವಾರ, 30 ಸೆಪ್ಟಂಬರ್ 2007 (14:38 IST)
ಸೋಮವಾರ ದಿ ಒಂದರಂದು, ರಾಮ ಸೇತು ಸಮುದ್ರಂ ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡಿನ ಆಡಳಿತ ಪಕ್ಷ ಕರೆದಿದ್ದ ರಾಜ್ಯಾದ್ಯಂತ ಬಂದ್‌ಗೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶ ಹೋರಡಿಸಿತು.

ನ್ಯಾಯಮೂರ್ತಿ ಬಿ. ಎನ್ ಅಗರ್‌ವಾಲ್ ಅವರ ನೇತೃತ್ವದ ವಿಚಾರಣಾ ಪೀಠದ ಎದುರು ಸುಮಾರು ಮೂರುಗಂಟೆಗಳ ವಾದವನ್ನು ಆಲಿಸಿದ ನಂತರ ನ್ಯಾಯಾಧೀಶರು, ಸೋಮವಾರ ಆಗಲಿ ಮತ್ತಾವುದೇ ದಿನವಾಗಲಿ ಬಂದ್ ಆಚರಿಸದಂತೆ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆಗೆ ಸೂಚನೆ ನೀಡಿ, ತಡೆಯಾಜ್ಞೆ ನೀಡಿತು.

ವಿರಳವಾಗಿ ಸರ್ವೋಚ್ಚ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ರವಿವಾರ ಕೈಗೆತ್ತಿಕೊಳ್ಳುತ್ತದೆ. ಪರಿಸ್ಥಿತಿ ಗಂಭೀರವಾಗಿದ್ದರೆ ಮಾತ್ರ ರಜಾ ದಿನದಂದು ನ್ಯಾಯಾಲಯದ ಕಲಾಪ ನಡೆಯುತ್ತದೆ. ಎಐಡಿಎಂಕೆ ಸಲ್ಲಿಸಿದ್ದ ವಿಶೇಷ ರಜಾ ಅವಧಿಯ ಮನವಿಯಲ್ಲಿ, ಬಂದ್‌ಗೆ ತಡೆಯಾಜ್ಞೆ ನೀಡುವುದು ಸೂಕ್ತ ಎಂದು ಕೇಳಿಕೊಂಡಿತ್ತು. ಶನಿವಾರದಂದು ಎಐಡಿಎಂಕೆ ಮದ್ರಾಸ್ ಹೈಕೋರ್ಟ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಎಐಡಿಎಂಕೆ ಕರೆದಿದ್ದ ಬಂದ್ ವಿಚಾರದಲ್ಲಿ ತಾನು ಮದ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿತ್ತು.

ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ರಜಾ ಅವಧಿಯ ವಿಶೇಷ ಮನವಿಯಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ರಾಮಸೇತು ವಿವಾದ ವಿಚಾರಣೆಯಲ್ಲಿ ಇರುವುದರಿಂದ ನ್ಯಾಯಾಲಯದ ಆದೇಶವನ್ನು ದಿಕ್ಕರಿಸಿದಂತೆ ಆಗುತ್ತದೆ. ಆದ್ದರಿಂದ ಆಡಳಿತಾರೂಡ ಪಕ್ಷಗಳಿಗೆ ಬಂದ್ ಕರೆಗೆ ಅವಕಾಶ ನೀಡಬಾರದು ಎಂದು ಎಐಡಿಎಂಕೆ ಕೇಳಿಕೊಂಡಿತ್ತು.

Share this Story:

Follow Webdunia kannada