Select Your Language

Notifications

webdunia
webdunia
webdunia
webdunia

ತಮಿಳುನಾಡು: 102 ವರ್ಷದ ಅಜ್ಜಿ ನಗರಸಭೆಗೆ ಆಯ್ಕೆ

ತಮಿಳುನಾಡು: 102 ವರ್ಷದ ಅಜ್ಜಿ ನಗರಸಭೆಗೆ ಆಯ್ಕೆ
ಮಧುರೈ , ಸೋಮವಾರ, 24 ಅಕ್ಟೋಬರ್ 2011 (11:56 IST)
WD
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಯುವಕರೇ ಹಿಂದೇಟು ಹಾಕುತ್ತಿರುವಾಗ, ಕುಟುಂಬದ ಮಕ್ಕಳು ಮೊಮ್ಮಕ್ಕಳೊಂದಿಗೆ ಹಾಯಾಗಿ ಇರಬೇಕಾಗಿದ್ದ 102 ವರ್ಷದ ಅಜ್ಜಿ, ಚುನಾವಣೆಗೆ ನಿಂತು ಜಯಭೇರಿ ಬಾರಿಸಿದ್ದಾರೆ.

ಮಧುರೈನ ಪುದುಕುಲಂ ಗ್ರಾಮದ 102 ವರ್ಷದ ಅಜ್ಜಿಯಾದ ತಡಾಹತಿ, ಕಳೆದ ಹಲವು ದಶಕಗಳಿಂದ ಗ್ರಾಮಸ್ಥರಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದಳು. ಅವಳ ಸಕಾರಾತ್ಮಕ ಸೇವಾಮನೋಭಾವ ಕಂಡು ಗ್ರಾಮಸ್ಥರು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ ಎಂದು ಗ್ರಾಮಂ ಪಂಚಾಯಿತಿ ಅಧ್ಯಕ್ಷ ಪಿ.ಮುದುರಾಮಲಿಂಗಂ ಹೇಳಿದ್ದಾರೆ.

ಗ್ರಾಮದ ಯಾವುದೇ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿರುವುದು ಕಂಡು ಬಂದ ಕೂಡಲೇ ಅಜ್ಜಿ ತಡಾಹತಿ, ಅವರ ಮನೆಗೆ ತೆರಳಿ ಉಚಿತವಾಗಿ ಸೇವೆಯನ್ನು ನೀಡುತ್ತಾರೆ ಎಂದು ಮದುರಾಮಲಿಂಗಂ ತಿಳಿಸಿದ್ದಾರೆ.

Share this Story:

Follow Webdunia kannada