Webdunia - Bharat's app for daily news and videos

Install App

ತನಗೂ ಪ್ರಧಾನಿಯಾಗುವ ಆಸೆ ಇದೆ: ಲಾಲೂ

Webdunia
ಶನಿವಾರ, 22 ನವೆಂಬರ್ 2008 (10:12 IST)
ತನ್ನ ಪ್ರಧಾನಿ ಇಚ್ಚೆಯ ತುಡಿತವನ್ನು ಹೊರಗೆಡಹಿರುವ ರೈಲ್ವೈ ಸಚಿವ ಲಾಲೂಪ್ರಸಾದ್ ಯಾದವ್, ತಕ್ಷಣವೇ ಇದನ್ನು ಜನತೆ ನಿರ್ಧರಿಸಬೇಕು ಎಂದು ತನ್ನ ಹೇಳಿಕೆಯನ್ನು 'ಸರಿಪಡಿಸಿಕೊಂಡಿದ್ದಾರೆ'.

" ಎಲ್ಲರಲ್ಲೂ ಪ್ರಧಾನಿಯಾಗುವ ಇಚ್ಚೆ ಇರುತ್ತದೆ. ಅಂತೇಯ ನನ್ನಲ್ಲೂ ಈ ಬಯಕೆ ಇದೆ. ಆದರೆ ಯಾರು ಪ್ರಧಾನಿಯಾಗಬೇಕು ಎಂಬುದನ್ನು ಜನತೆ ನಿರ್ಧರಿಸುತ್ತಾರೆ" ಎಂದು ನುಡಿದರು. ಅವರು ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂದೂಸ್ಥಾನ್ ಟೈಮ್ಸ್‌‍ನ ನಾಯಕತ್ವ ಸಮ್ಮೇಳನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮಾತನಾಡುತ್ತಿದ್ದರು.

' ಅಧಿಕಾರ ಬದಲಾವಣೆ: ರಾಜ್ಯಗಳು ಕೇಂದ್ರವನ್ನು ಮುನ್ನಡೆಸುವವೆ?' ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಅವರು ಮುಂದಿನ ವರ್ಷದ ಪ್ರಧಾನ ಚುನಾವಣೆಯ ಬಳಿಕ ಅಧಿಕಾರ ಹಂಚಿಕೆಯ ಕುರಿತು ಮಾತನಾಡುತ್ತಿದ್ದರು.

ಎರಡುವರೆ ವರ್ಷ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಮತ್ತು ಬಳಿಕದ ಎರಡುವರೆ ವರ್ಷ ಲಾಲೂಪ್ರಸಾದ್ ಯಾದವ್ ಎಂದು ಜನತೆ ಮಾಡನಾಡುತ್ತಿದ್ದಾರೆ. ಇದು ನಡೆಯುತ್ತದೆಯೇ ಎಂಬುದಾಗಿ ಸಿಎನ್ಎನ್-ಐಬಿಎನ್ ಪ್ರಧಾನ ಸಂಪಾದಕ ರಾಜ್‌ದೀಪ್ ಸರ್ದೇಸಾಯ್ ಅವರು ಪ್ರಶ್ನಿಸಿದ್ದರು.

" ಯಾರು ಪ್ರಧಾನಿಯಾಗುತ್ತಾರೆ" ಎಂಬ ಪ್ರಶ್ನೆಗೆ ಬಿಜೆಪಿಯನ್ನು ಹೊರತು ಪಡಿಸಿ ಯಾರು ಬೇಕಿದ್ದರೂ ಪ್ರಧಾನಿಯಾಗಬಹುದು ಎಂಬುದಾಗಿ ರೈಲ್ವೇ ಸಚಿವರು ಹೇಳಿದ್ದಾರೆ.

ಅಮಾಯಕ ರಾಹುಲ್ ಗಾಂಧಿ
ಪಕ್ಷದ ಪುನರುತ್ಥಾನಕ್ಕಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರ ಪ್ರಯತ್ನಗಳನ್ನು ಕೀಳಂದಾಜಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಲಾಲೂ, ರಾಹುಲ್ 'ಅಮಾಯಕ ಯುವಕ' ಎಂದು ವರ್ಣಿಸಿದರಲ್ಲದೆ, ರಾಹುಲ್ ತನ್ನ ಗುರಿ ತಲುಪಲಿದ್ದಾರೆ ಎಂದು ನುಡಿದರು.

ಮಹಾತ್ಮಾಗಾಂದಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ವೇಳೆಗೆ ಏನು ಮಾಡಿದರೋ ಅದನ್ನೀಗ ರಾಹುಲ್ ಮಾಡುತ್ತಿದ್ದಾರೆ. ಅವರು ಜನತೆಯ ನಾಡಿಮಿಡಿತವನ್ನು ಅರಿಯುವ ಸಲುವಾಗಿ ಗ್ರಾಮಗಳಿಗೆ ಭೇಟಿನೀಡುತ್ತಿದ್ದಾರೆ. ಅವರ ಕುಟುಂಬ ರಾಷ್ಟ್ರಕ್ಕಾಗಿ ಸಾಕಷ್ಟು ಕೊಡುಗೆ ನೀಡಿದೆ. ಅವರ ಪ್ರಯತ್ನದ ಫಲವನ್ನು ಪಕ್ಷವು ಬಳಸಿಕೊಂಡರೆ ಉತ್ತಮ" ಎಂದು ಲಾಲೂ ನುಡಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments