Select Your Language

Notifications

webdunia
webdunia
webdunia
webdunia

ಢಾಕಾ ಬಸ‌್‌ಸೇವೆ ಅನಿರ್ದಿಷ್ಟಾವಧಿ ಸ್ಥಗಿತ

ಢಾಕಾ ಬಸ‌್‌ಸೇವೆ ಅನಿರ್ದಿಷ್ಟಾವಧಿ ಸ್ಥಗಿತ
ಅಗರ್ತಲ , ಶುಕ್ರವಾರ, 27 ಫೆಬ್ರವರಿ 2009 (13:43 IST)
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಸೈನಿಕ ದಂಗೆಯ ಹಿನ್ನೆಲೆಯಲ್ಲಿ ಢಾಕಾ ಹಾಗೂ ಭಾರತದ ಎರಡು ನಗರಗಳ ನಡುವಿನ ಬಸ್ ಸೇವೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. ಢಾಕಾ- ಕೊಲ್ಕತಾ ಮತ್ತು ಅಗರ್ತಲ-ಢಾಕಾ ನಡುವಿನ ಬಸ್ ಸೇವೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ಬಾಂಗ್ಲಾದೇಶ್ ರಸ್ತೆ ಸಾರಿಗೆ ನಿಗಮ(ಬಿಆರ್‌ಟಿಸಿ)ದ ಮೂಲಗಳು ತಿಳಿಸಿವೆ.

ಬಾಂಗ್ಲಾದಲ್ಲಿ ಭುಗಿಲೆದ್ದಿರುವ ಸೈನಿಕ ದಂಗೆಯು ತ್ರಿಪುರಾದ ಜನತೆಯನ್ನು ಕಳವಳಕ್ಕೀಡು ಮಾಡಿದೆ, ಅದೇನಿದ್ದರೂ, ಬಿಎಸ್ಎಫ್ ನಿಕಟವಾಗಿ ಪರಿಸ್ಥಿತಿಯನ್ನು ವೀಕ್ಷಿಸುತ್ತಿದೆ ಎಂದು ತ್ರಿಪುರಾ ಮುಖ್ಯಮಂತ್ರಿ ಮಣಿಕ್ ಸರ್ಕಾರ್ ವರದಿಗಾರರಿಗೆ ತಿಳಿಸಿದ್ದಾರೆ.

ಇದಲ್ಲದೆ ಬಾಂಗ್ಲಾದೊಂದಿಗಿನ ವ್ಯಾಪಾರ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ.

ಏತನ್ಮಧ್ಯೆ, ಭಾರತ-ಬಾಂಗ್ಲಾ ನಡುವಣ ನೂರಾರು ಔಟ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಗಡಿಪ್ರದೇಶದ ಜನತೆಯ ಭದ್ರತೆಯಗಾಗಿ ಗರಿಷ್ಠ ಎಚ್ಚರ ವಹಿಸಲಾಗಿದೆ ಎಂದು ಬಿಎಸ್ಎಫ್ ವಕ್ತಾರ ಎ.ಕೆ. ಸಿಂಗ್ ತಿಳಿಸಿದ್ದಾರೆ.

Share this Story:

Follow Webdunia kannada