Select Your Language

Notifications

webdunia
webdunia
webdunia
webdunia

ಡೆಹರಾಡೂನ್‌ ಎಕ್ಸ್‌ಪ್ರೆಸ್‌‌ನಲ್ಲಿ ಬೆಂಕಿ, 9 ಜನರ ಸಾವು

ಡೆಹರಾಡೂನ್‌ ಎಕ್ಸ್‌ಪ್ರೆಸ್‌‌ನಲ್ಲಿ ಬೆಂಕಿ, 9 ಜನರ ಸಾವು
ಘೋಡವಲ್‌ , ಬುಧವಾರ, 8 ಜನವರಿ 2014 (11:07 IST)
PR
ಮುಂಬೈನಿಂದ ಡೆಹರಾಡೂನ್‌ಗೆ ಹೊಗುತ್ತಿರುವ ಡೆಹರಾಡೂನ್‌ಗೆ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಹತ್ತಿಕೊಂಡಿದೆ. ಮಹಾರಾಷ್ಟ್ರದ ಘೋಡವಲ್‌ ನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, 9 ಜನರು ಸಾವನ್ನಪ್ಪಿದ್ದಾರೆ ಮತ್ತು ಕೆಲವು ಜನರು ಗಾಯಾಳುಗಳಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ .

ಮೂಲಗಳ ಪ್ರಕಾರ S2, S3, S4 ರೈಲು ಡಬ್ಬಿಗಳಲ್ಲಿ ಬೆಳಿಗ್ಗೆ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಆದರೆ ಬೆಂಕಿ ಯಾವ ಕಾರಣಕ್ಕೆ ಕಾಣಿಸಿಕೊಂಡಿದೆ ಎಂದು ಇನ್ನು ತಿಳಿದಿಲ್ಲ .

ನಸುಕಿನ ಜಾವದಲ್ಲಿ ಸಾಕಷ್ಟು ಜನರು ನಿದ್ರೆಯಲ್ಲಿದ್ದರು ಎನ್ನಲಾಗಿದೆ. ಇದರಿಂದ ಹೆಚ್ಚಿನ ಜನರಿಗೆ ಗಾಯಗಳಾಗಿವೆ.. ರೈಲಿನಲ್ಲಿರುವ ಎಲ್ಲಾ ಜನರನ್ನು ಹೊರಗಡೆ ಕಳುಹಿಸಿದ ಬಳಿಕ ಅಗ್ನಿ ಶಾಮಕ ದಳದವರು ಮತ್ತು ರಕ್ಷಣಾ ಪಡೆಯವರು ಬೆಂಕಿ ಆರಿಸಲು ಹರಸಾಹಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada