Select Your Language

Notifications

webdunia
webdunia
webdunia
webdunia

ಟಿವಿಯಲ್ಲಿ ನೇರ ಪ್ರಸಾರ ಸ್ಥಗಿತಗೊಳಿಸಿದ್ದು ಯಾರು? ಪ್ರತಿಪಕ್ಷಗಳ ಪ್ರಶ್ನೆ

ಟಿವಿಯಲ್ಲಿ ನೇರ ಪ್ರಸಾರ ಸ್ಥಗಿತಗೊಳಿಸಿದ್ದು ಯಾರು? ಪ್ರತಿಪಕ್ಷಗಳ ಪ್ರಶ್ನೆ
, ಬುಧವಾರ, 19 ಫೆಬ್ರವರಿ 2014 (10:41 IST)
PR
PR
ನವದೆಹಲಿ: ಲೋಕಸಭೆಯಲ್ಲಿ ತೆಲಂಗಾಣ ಮಸೂದೆ ಅಂಗೀಕಾರವಾಗಿದ್ದರೂ ರಾಜ್ಯಸಭೆಯಲ್ಲಿ ಇಂದು ತೆಲಂಗಾಣ ಮಸೂದೆ ಅಂಗೀಕಾರ ಪಡೆಯಬೇಕಿದೆ. ರಾಜ್ಯಸಭೆಯಲ್ಲಿ ಮಸೂದೆಗೆ 10 ತಿದ್ದುಪಡಿ ಮಾಡುವುದಕ್ಕೆ ಬಿಜೆಪಿ ಬಯಸಿದೆ. ಸೀಮಾಂಧ್ರ ಪ್ರದೇಶಕ್ಕೆ 10,000 ಕೋಟಿ ಹಣಕಾಸಿನ ಪ್ಯಾಕೇಜ್ ನೀಡಬೇಕೆಂಬುದು ಅದರ ತಿದ್ದುಪಡಿಗಳಲ್ಲಿ ಒಂದಾಗಿದೆ. ಏತನ್ಮಧ್ಯೆ, ತೆಲಂಗಾಣ ಮಸೂದೆ ಸಂಸತ್ತಿನಲ್ಲಿ ಮಂಡನೆ ಮಾಡುವ ಸಂದರ್ಭದಲ್ಲಿ ಟಿವಿಯಲ್ಲಿ ನೇರ ಪ್ರಸಾರ ಬ್ಲ್ಯಾಕ್ ಔಟ್ ಮಾಡಿದ ಕ್ರಮವನ್ನು ವಿವಿಧ ಪಕ್ಷಗಳು ಟೀಕಿಸಿವೆ. ನೇರ ಪ್ರಸಾರ ಬ್ಲಾಕ್‌ಔಟ್ ಮಾಡಿದ್ದು ಯಾರು ಎಂದು ಅವು ಪ್ರಶ್ನಿಸಿವೆ. ಸುಶೀಲ್ ಕುಮಾರ್ ಶಿಂಧೆ ಮಸೂದೆಯನ್ನು ಮಂಡನೆ ಮಾಡುತ್ತಿದ್ದಂತೆ ದಿಢೀರನೇ ಟಿವಿ ಪ್ರಸಾರ ಸ್ಥಗಿತಗೊಂಡಿತ್ತು.

ಈ ನಡುವೆ ರಾಜ್ಯಸಭೆಯಲ್ಲಿ ಕಲಾಪವನ್ನು ನೇರ ಪ್ರಸಾರ ಮಾಡದಿದ್ದರೆ ಮಸೂದೆ ಕುರಿತು ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂದು ಬಿಜೆಪಿ ನಿರ್ಧರಿಸಿದೆ. ರಾಜ್ಯಸಭೆಯಲ್ಲಿ ನೋ ಟಿವಿ, ನೋ ಡಿಬೇಟ್ ಎಂದು ಬಿಜೆಪಿ ಹೇಳಿದೆ.

Share this Story:

Follow Webdunia kannada