Select Your Language

Notifications

webdunia
webdunia
webdunia
webdunia

ಜೈಲು ಸೇರಿದ ರಾಜಕಾರಣಿಗಳೇ ಚುನಾವಣೆಗೆ ನಿಲ್ಲಲು ತಯಾರಾಗಿ : ಸುಪ್ರೀಂ ಸಿಹಿ ಸುದ್ದಿ.

ಜೈಲು ಸೇರಿದ ರಾಜಕಾರಣಿಗಳೇ ಚುನಾವಣೆಗೆ ನಿಲ್ಲಲು ತಯಾರಾಗಿ : ಸುಪ್ರೀಂ ಸಿಹಿ ಸುದ್ದಿ.
ನವದೆಹಲಿ , ಮಂಗಳವಾರ, 19 ನವೆಂಬರ್ 2013 (17:53 IST)
PTI
PTI
ಭ್ರಷ್ಟಾಚಾರ, ಅಕ್ರಮ, ಹಗರಣ ಮೊದಲಾದ ಆರೋಪಗಳಲ್ಲಿ ಜೈಲು ಸೇರಿದ ರಾಜಕೀಯ ಧುರೀಣರಿಗೆ ಸುಪ್ರೀಂ ಕೋರ್ಟ್‌ ಸಿಹಿ ಸುದ್ದಿಯೊಂದನ್ನು ನೀಡಿದೆ. ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ದಿಸಬೇಕು ಎಂಬ ತವಕವನ್ನು ಹೊಂದಿರುವ ಜೈಲು ಸೇರಿದ ರಾಜಕಾರಣಿಗಳು, ಇದೀಗ ಜೈಲಿನಲ್ಲಿ ಇದ್ದುಕೊಂಡೇ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಜನಪ್ರತಿನಿಧಿ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಎಂಬ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಗ್ರೀನ್ ಸಿಗ್ನಲ್ ತೋರಿಸಿರುವ ಸುಪ್ರೀಂ ಕೋರ್ಟ್‌ ಜನಪ್ರತಿನಿಧಿ ಕಾಯ್ದೆ ತಿದ್ದುಪಡಿಗೆ ತರಲು ಅಂಗೀಕಾರ ನೀಡಿದೆ.

2013ರ ಜುಲೈ 10ರಂದು ಸುಪ್ರೀಂ ಕೋರ್ಟ್ 2 ಅಥವಾ 2ಕ್ಕಿಂತ ಹೆಚ್ಚು ವರ್ಷ ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಒಳಗಾದ ಸಂಸದರು, ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ತಿರ್ಪು ನೀಡಿತ್ತು.

ಆದ್ರೆ ಈ ತೀರ್ಪನ್ನು ಪುನರ್‌ ಪರಿಶೀಲನೆ ಮಾಡಬೇಕು ಎಂಬ ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ’ಜೈಲಿನಲ್ಲಿರುವ ರಾಜಕಾರಣಿಗಳು ಆರೋಪ ಸಾಬೀತಾಗುವ ತನಕ ವಿಧಾನಸಭೆ ಅಥವ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದೆ

ಸುಪ್ರೀಂ ಕೋರ್ಟಿನ ಈ ಆದೇಶ ಜೈಲು ಸೇರಿದ ಅನೇಕ ನಾಯಕರಿಗೆ ಖುಷಿಯನ್ನು ನೀಡಿದ್ದು, ಜೈಲಿನಲ್ಲಿ ಇದ್ದುಕೊಂಡೆ ಚುನಾವಣೆಗೆ ಸ್ಪರ್ದಿಸಲು ತಯಾರಿ ನಡೆಸುತ್ತಿದ್ದಾರೆ.

Share this Story:

Follow Webdunia kannada