Select Your Language

Notifications

webdunia
webdunia
webdunia
webdunia

ಜೆಟ್ಲಿ ನಡವಳಿಕೆಯಿಂದ ಬಿಜೆಪಿ ಕೀಳು ಸಂಸ್ಕೃತಿ ತೋರಿಸುತ್ತೆ - ಮೋಯ್ಲಿ

ಜೆಟ್ಲಿ ನಡವಳಿಕೆಯಿಂದ ಬಿಜೆಪಿ ಕೀಳು ಸಂಸ್ಕೃತಿ ತೋರಿಸುತ್ತೆ - ಮೋಯ್ಲಿ
ಚಿಕ್ಕಬಳ್ಳಾಪುರ , ಶನಿವಾರ, 31 ಆಗಸ್ಟ್ 2013 (12:31 IST)
PR
PR
ಬಿಜೆಪಿಯ ಅರುಣ್‌ ಜೆಟ್ಲಿ ವಿರುದ್ಧ ಕೇಂದ್ರ ಸಚಿವ ವೀರಪ್ಪ ಮೋಯ್ಲಿ ಹರಿ ಹಾಯ್ದಿದ್ದಾರೆ. ಪ್ರಧಾನಿಯವರನ್ನು ನಿಂದಿಸಿದ್ದಕ್ಕೆ ಬಿಜೆಪಿ ನಾಯಕನ ಮೇಲೆ ಕೆಂಡಾಮಂಡಲವಾದ ವೀರಪ್ಪ ಮೋಯ್ಲಿ "ಇದು ಬಿಜೆಪಿ ಕೀಳು ಮಟ್ಟದ ಸಂಸ್ಕೃತಿಯನ್ನು ತೋರಿಸುತ್ತದೆ" ಎಂದು ಹೇಳಿದ್ರು.

ನೆನ್ನೆ ದೇಶದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿ ಭಾಷಣ ಮಾಡಿದ ಬಳಿಕ ಅರುಣ್ ಜೇಟ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಬಳಿಕ ಎಂಪಿಗಳು ಸದನದ ಬಾವಿಗೆ ಬಂದು 'ಪ್ರಧಾನಿ ಚೋರ್ ಹೈ, ಚೋರ್ ಹೈ'ಎಂದು ಕೂಗಿದ್ದರು. ಇದಕ್ಕೆ ಕೆರಳಿದ ಸಿಂಗ್‌ ನನಗೂ ಸಹ ಮಂತ್ರಿಮಂಡಲದಲ್ಲಿ ಗೌರವವಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವೀರಪ್ಪ ಮೋಯ್ಲಿ " ಪ್ರಧಾನಿಯವರನ್ನು ನಿಂದಿಸಿರುವ ಅರುಣ್‌ ಜೆಟ್ಲಿಯವರಿಂದ ಬಿಜೆಪಿಯ ಕೀಳುಮಟ್ಟದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಹಂತ ಹಂತವಾಗಿ ಆರ್ಥಿಕ ಸುಧಾರಣೆಯಾಗಲಿದೆ. ಇದಕ್ಕಾಗಿ ಈಗಾಗಲೇ ಕಾರ್ಯನೀತಿಗಳನ್ನು ರೂಪಿಸಲಾಗಿದೆ ಎಂದು ಮೋಯ್ಲಿ ಹೇಳಿದ್ರು

Share this Story:

Follow Webdunia kannada