Select Your Language

Notifications

webdunia
webdunia
webdunia
webdunia

ಜಲಂಧರ್: ಮತ್ತೆ 7ವಿದ್ಯಾರ್ಥಿಗಳಿಗೆ ಎಚ್1ಎನ್1

ಜಲಂಧರ್: ಮತ್ತೆ 7ವಿದ್ಯಾರ್ಥಿಗಳಿಗೆ ಎಚ್1ಎನ್1
ಜಲಂಧರ್ , ಮಂಗಳವಾರ, 16 ಜೂನ್ 2009 (15:49 IST)
ಅಮೆರಿಕದ ನಾಸಾಗೆ ಪ್ರವಾಸ ತೆರಳಿ ತವರಿಗೆ ಮರಳಿದ ಮತ್ತೆ ಏಳು ಮಕ್ಕಳಲ್ಲಿ ಎಚ್1ಎನ್1 ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಜಲಂಧರ್‌ನಲ್ಲಿ ಒಟ್ಟು ಎಂಟು ಮಂದಿಗೆ ಸೋಂಕು ತಗುಲಿದಂತಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತಿಬ್ಬರು ಮಕ್ಕಳ ರಕ್ತದ ಮಾದರಿಯನ್ನು ಸೋಮವಾರ ದೆಹಲಿಗೆ ಕಳುಹಿಸಿದ್ದಾರೆ.

"ಕಳುಹಿಸಲಾಗಿರುವ ಎಂಟು ಮಾದರಿಗಳಲ್ಲಿ ಏಳು ಮಂದಿಗೆ ಸೋಂಕು ತಗುಲಿದೆ" ಎಂಬುದಾಗಿ ಜಿಲ್ಲಾಧಿಕಾರಿ ಅಜಿತ್ ಸಿಂಗ್ ಪನ್ನು ಸಿವಿಲ್ ಸರ್ಜನ್ ಎಸ್.ಎಸ್. ವಾಲಿಯಾ ಸೋಮವಾರ ಹೇಳಿದ್ದಾರೆ.

ಮೂವರು ಶಿಕ್ಷಕರು ಸೇರಿದಂತೆ ಒಟ್ಟು 34 ಮಂದಿಯ ತಂಡ ನಾಸಾ ಪ್ರವಾಸ ತೆರಳಿತ್ತು. ಇವರು ಶನಿವಾರ ಪ್ರವಾಸದಿಂದ ಹಿಂದಿರುಗಿದ್ದು ಈ ವೇಳೆ ವಿದ್ಯಾರ್ಥಿಯೊಬ್ಬನಲ್ಲಿ ಹಂದಿಜ್ವರದ ಸೋಂಕು ಕಾಣಿಸಿಕೊಂಡಿದ್ದು ಆತನನ್ನು ಪ್ರತ್ಯೇಖವಾಗಿರಿಸಲಾಗಿತ್ತು. ಬಳಿಕ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ನಿಗಾ ವಹಿಸಿದ್ದು, ಇನ್ನಷ್ಟು ಮಕ್ಕಳಲ್ಲಿ ಈ ಖಾಯಿಲೆಯ ಲಕ್ಷಣಗಳು ಕಂಡುಬಂದಿದ್ದವು.

Share this Story:

Follow Webdunia kannada