Select Your Language

Notifications

webdunia
webdunia
webdunia
webdunia

ಜನವರಿ 28ರಿಂದ ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆ

ಜನವರಿ 28ರಿಂದ ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆ
ನವದೆಹಲಿ , ಶನಿವಾರ, 24 ಡಿಸೆಂಬರ್ 2011 (18:53 IST)
PTI
ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಹಾಗೂ ಮಣಿಪುರ್ ರಾಜ್ಯಗಳ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡಿದ್ದು, ಜನೆವರಿ 28 ರಿಂದ ಮಾರ್ಚ್ 3 ರವರೆಗೆ ಚುನಾವಣೆಗಳು ನಡೆಯಲಿವೆ ಎಂದು ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಎಸ್‌. ವೈ.ಖುರೇಶಿ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ (403 ವಿಧಾನಸಭಾ ಕ್ಷೇತ್ರಗಳು) 7 ಹಂತಗಳ ಚುನಾವಣೆ ನಡೆಯಲಿದ್ದು, ಫೆಬ್ರವರಿ 4 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. 4, 8, 11, 15, 19, 23 ಮತ್ತು 28 ರಂದು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಗೋವಾ(40 ) ರಾಜ್ಯದಲ್ಲಿ ಮಾರ್ಚ್ 3ಕ್ಕೆ, ಉತ್ತರಾಖಂಡದಲ್ಲಿ ಜನೆವರಿ 30ಕ್ಕೆ ಹಾಗೂ ಪಂಜಾಬ್‌ನಲ್ಲಿ (117 ವಿಧಾನಸಭಾ ಕ್ಷೇತ್ರಗಳು) ಜನೆವರಿ 30 ಮತ್ತು ಮಣಿಪುರದಲ್ಲಿ(60 ವಿಧಾನಸಭಾ ಕ್ಷೇತ್ರಗಳು) ಜನೆವರಿ 28 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

ಮಾರ್ಚ್ 4 ರಂದು ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬರಲಿದೆ ಎಂದು ಖುರೇಷಿ ತಿಳಿಸಿದ್ದಾರೆ.

ಇವತ್ತಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಎಸ್‌.ವೈ.ಖುರೇಷಿ ಹೇಳಿದ್ದಾರೆ.

Share this Story:

Follow Webdunia kannada