Select Your Language

Notifications

webdunia
webdunia
webdunia
webdunia

ಜನಲೋಕಪಾಲ್ ಜಾರಿಯಾಗದಿದ್ದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ: ಕೇಜ್ರಿವಾಲ್.

ಜನಲೋಕಪಾಲ್ ಜಾರಿಯಾಗದಿದ್ದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ: ಕೇಜ್ರಿವಾಲ್.
ನವದೆಹಲಿ , ಸೋಮವಾರ, 10 ಫೆಬ್ರವರಿ 2014 (14:08 IST)
PTI
ಜನಲೋಕಪಾಲ ಮಸೂದೆ ಜಾರಿಯಾಗದಿದ್ದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಇದೊಂದು ಅಸಂವಿಧಾನಿಕ ಮಸೂದೆ ಆಗಿದ್ದು, ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದ್ದು, ಆಪ್ ಸರ್ಕಾರ ಕುಸಿತದ ಭೀತಿ ಎದುರಿಸುತ್ತಿದೆ.

ದೆಹಲಿ ಸಾಹಿತ್ಯ ಉತ್ಸವ 2014 ರಲ್ಲಿ ಪಾಲ್ಗೊಂಡಿದ್ದ ಕೇಜ್ರಿವಾಲ್ " ನನಗೆ ಜನಲೋಕಪಾಲ, ಸ್ವರಾಜ್ ಮಸೂದೆಗಳು ಬಹಳ ಮಹತ್ವವಾದವುಗಳು, ಇವು ವಿಫಲವಾದರೆ ಅಧಿಕಾರದಲ್ಲಿರಲು ನನಗೆ ಯಾವುದೇ ಕಾರಣಗಳಿರುವುದಿಲ್ಲ, ಹಾಗಾಗಿ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸಂದರ್ಶನವೊಂದರಲ್ಲಿ ಅವರು ಪ್ರತಿಕ್ರಿಯಿಸಿದರು." ಭ್ರಷ್ಟಾಚಾರ ವಿರೋಧಿ ಮಸೂದೆಗಳು ಜಾರಿಯಾಗದಿದ್ದರೇ ಜನರೇ ಕಾಂಗ್ರೆಸ್ ಮತ್ತು ಬಿಜೆಪಿಗೆ ಪಾಠ ಕಲಿಸುತ್ತಾರೆ, ನಾವು ಮರುಚುನಾವಣೆಯಲ್ಲಿ 50ಕ್ಕಿಂತ ಹೆಚ್ಚು ವಿಧಾನಸಭಾ ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಲಿದ್ದೇವೆ" ಎಂದು ಅವರು ಹೇಳಿದ್ದಾರೆ.

ಸ್ವರಾಜ್ ಮಸೂದೆ ದೇಶದಲ್ಲಿ ಅಸ್ತಿತ್ವದಲ್ಲಿರುವ ಪ್ರಜಾಸತ್ತಾತ್ಮಕ ಚೌಕಟ್ಟನ್ನು ಪ್ರಶ್ನಿಸುತ್ತದೆ ಮತ್ತು ವಾಸ್ತವವಾದ 'ಸ್ವಯಮಾಡಳಿತ' ವನ್ನು ಸಾಧಿಸಲು ಮಾರ್ಗಗಳನ್ನು ಸೂಚಿಸುತ್ತದೆ. ಅಲ್ಲದೇ ಅಧಿಕಾರದ ವಿಕೇಂದ್ರಿಕರಣವನ್ನು ಪೋಷಿಸುತ್ತದೆ.

Share this Story:

Follow Webdunia kannada