Webdunia - Bharat's app for daily news and videos

Install App

ಜನಗಣತಿ 2011 ವರದಿ: ನಾವು ಭಾರತೀಯರು 121 ಕೋಟಿ

Webdunia
ಗುರುವಾರ, 31 ಮಾರ್ಚ್ 2011 (12:06 IST)
ಬಹುನಿರೀಕ್ಷಿತ ಜನಗಣತಿಯ ಅಂಕಿ ಅಂಶವು ಗುರುವಾರ ಹೊರಬಿದ್ದಿದ್ದು, ಇದರ ಪ್ರಕಾರ ಭಾರತದ ಒಟ್ಟು ಜನಸಂಖ್ಯೆ 121 ಕೋಟಿ. ಪುರುಷರ ಸಂಖ್ಯೆ 62.37 ಕೋಟಿ ಹಾಗೂ ಮಹಿಳೆಯರ ಸಂಖ್ಯೆ 58.65 ಕೋಟಿ. ಆದರೆ ಒಟ್ಟಾರೆ ಅಕ್ಷರಸ್ಥರ ಸಂಖ್ಯೆ ಇನ್ನೂ ಶೇ.38.82 ಮಾತ್ರ!

ಜನಗಣತಿ ಅಂಕಿ ಅಂಶಗಳ ಪ್ರಕಾರ ಪ್ರಮುಖ ಅಂಶಗಳು ಹೀಗಿವೆ

ಲಿಂಗಾನುಪಾತದ ವ್ಯತ್ಯಾಸ ಕಡಿಮೆಯಾಗಿದೆ
ಒಳ್ಳೆಯ ಸುದ್ದಿ ಎಂದರೆ, 2001ಕ್ಕೆ ಹೋಲಿಸಿದರೆ ಪುರುಷ ಮತ್ತು ಮಹಿಳಾ ಸಂಖ್ಯೆಯ ಅನುಪಾತದಲ್ಲಿನ ವ್ಯತ್ಯಾಸ ಕಡಿಮೆಯಾಗಿದೆ. 2001ರಲ್ಲಿ 1000 ಪುರುಷರಿಗೆ 933 ಮಹಿಳೆಯರಿದ್ದರೆ (ವ್ಯತ್ಯಾಸ ಸಾವಿರಕ್ಕೆ 67), 2011ರಲ್ಲಿ ಈ ಅನುಪಾತವು 1000: 940ಕ್ಕೆ ಬಂದಿದೆ. ಅಂದರೆ ವ್ಯತ್ಯಾಸವು ಸಾವಿರಕ್ಕೆ 60.

ಮಕ್ಕಳಲ್ಲಿ ಲಿಂಗಾನುಪಾತ ವ್ಯತ್ಯಾಸ ಹೆಚ್ಚು
ಆತಂಕದ ವಿಷಯವೆಂದರೆ ಮಕ್ಕಳ ಲಿಂಗಾನುಪಾತದಲ್ಲಿ ಹೆಚ್ಚಳ. ಮಕ್ಕಳ ಲಿಂಗಾನುಪಾತವು 1000 ಬಾಲಕರಿಗೆ 927 ಬಾಲಕಿಯರಂತೆ ಇದ್ದದ್ದು 914ಕ್ಕೆ ತಲುಪಿದೆ. ಅಂದರೆ ವ್ಯತ್ಯಾಸವು ಸಾವಿರಕ್ಕೆ 73 ಇದ್ದದ್ದು 86ಕ್ಕೆ ಏರಿಕೆಯಾಗಿದೆ. ಮಿಜೋರಾಂ ಮತ್ತು ನಾಗಾಲ್ಯಾಂಡ್‌ನಲ್ಲಿ ಮಕ್ಕಳ ಲಿಂಗಾನುಪಾತ ಗರಿಷ್ಠವಾಗಿದ್ದರೆ, ಪಂಜಾಬ್ ಮತ್ತು ಹರ್ಯಾಣದಲ್ಲಿ ಕನಿಷ್ಠವಿದೆ. ಇದು ಸ್ವಾತಂತ್ರ್ಯಾನಂತರದ ಅವಧಿಯಲ್ಲೇ ಅತ್ಯಂತ ಕನಿಷ್ಠ.

ನಾವೇಕೆ ಬಡವರು...
ಭಾರತದ ಜನಸಂಖ್ಯೆಯು ಯುಎಸ್ಎ, ಇಂಡೋನೇಷ್ಯಾ, ಬ್ರೆಜಿಲ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳನ್ನು ಸೇರಿಸಿದರೆ ಎಷ್ಟಿರುತ್ತದೋ ಅಷ್ಟು.

ಉತ್ತರ ಪ್ರದೇಶ ಅತ್ಯಂತ ಹೆಚ್ಚು ಜನಸಾಂದ್ರತೆಯುಳ್ಳ ರಾಜ್ಯವಾಗಿದ್ದು, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಜನಸಂಖ್ಯೆಗಳನ್ನು ಸೇರಿಸಿದರೆ (31 ಕೋಟಿ), ಅದು ಯುಎಸ್ಎ ಜನಸಂಖ್ಯೆಗಿಂತಲೂ ಹೆಚ್ಚಾಗುತ್ತದೆ. ಅಮೆರಿಕನ್ನರು ನಮಗಿಂತ ಶ್ರೀಮಂತರು ಯಾಕೆ ಎಂಬುದು ಗೊತ್ತಾಯಿತಲ್ಲವೇ?

ಜನಸಂಖ್ಯಾ ವೃದ್ಧಿಯ ತೀವ್ರತೆ ಕುಸಿತ
ಹಿಂದಿನ ಜನಗಣತಿಯಲ್ಲಿ ಹೊರಬಿದ್ದ ಅಂಕಿ ಅಂಶಗಳಿಗೆ ಹೋಲಿಸಿದರೆ, 2001ರಲ್ಲಿ ಶೇ. 21.15ರಷ್ಟಿದ್ದ ಜನಸಂಖ್ಯಾ ವೃದ್ಧಿ ದರವು 2011ರ ಜನಗಣತಿ ಪ್ರಕಾರ ಶೇ.17.64ಕ್ಕೆ ಕುಸಿದಿದೆ.

ನಾವು ನೂರಿಪ್ಪತ್ತೊಂದು ಕೋಟಿ...
ಭಾರತದ ಜನಸಂಖ್ಯೆ 121.02 ಕೋಟಿ. ಪುರುಷರು 62.37 ಕೋಟಿ ಹಾಗೂ ಮಹಿಳೆಯರು 58.65 ಕೋಟಿ. ಒಟ್ಟಾರೆಯಾಗಿ, ಪುರುಷರ ಜನಸಂಖ್ಯೆಯಲ್ಲಿ ಶೇ.17 ಹಾಗೂ ಮಹಿಳೆಯರ ಜನಸಂಖ್ಯೆಯಲ್ಲಿ ಶೇ.18ರಷ್ಟು ವೃದ್ಧಿಯಾಗಿದೆ.

ನಾಗಾಲ್ಯಾಂಡ್‌ನಲ್ಲಿ ಜನಸಂಖ್ಯೆಯಲ್ಲಿ ಕುಸಿತ ಕಂಡಿದೆ.

ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚಳವಾದ ಜನಸಂಖ್ಯೆ 18 ಕೋಟಿ. ಅಂದರೆ ಇದು ಬ್ರೆಜಿಲ್‌ನ ಜನಸಂಖ್ಯೆಗೆ ಸಮ.

ಜನಸಾಂದ್ರತೆ ದೆಹಲಿಯಲ್ಲಿ ಹೆಚ್ಚು, ಅರುಣಾಚಲದಲ್ಲಿ ಕಡಿಮೆ
ಜನಸಾಂದ್ರತೆಯು ಕೂಡ ಹೆಚ್ಚಾಗಿದೆ. ಅತೀ ಹೆಚ್ಚು ಜನಸಾಂದ್ರತೆಯಿರುವುದು ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ (ಚದರ ಕಿಲೋಮೀಟರಿಗೆ 37,346 ಮಂದಿ), ಅತಿ ಕನಿಷ್ಠ ಜನಸಾಂದ್ರತೆ ಇರುವುದು ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆ ಜಿಲ್ಲೆಯಲ್ಲಿ - ಚದರ ಕಿಲೋಮೀಟರಿಗೆ 1 ಮಾತ್ರ!

ಪುರುಷರಿಗಿಂತ ಮಹಿಳಾ ಸಾಕ್ಷರತೆಯ ಪ್ರಮಾಣವೂ ಹೆಚ್ಚು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಮೀನು ಒತ್ತುವರಿ ಪ್ರಕರಣ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಬಿಗ್ ರಿಲೀಫ್‌

ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಡಿಎನ್‌ಎ ಟೆಸ್ಟ್‌ಗೆ ಮುಂದಾದ ಪಂಜಾಬ್ ಸರ್ಕಾರ

ಶುಭಾಂಶು ಶುಕ್ಲಾ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಇಸ್ರೋ

Viral Video, ಪಾಟ್ನಾ: ಹಾಡಹಗಲೇ ಆಸ್ಪತ್ರೆಯೊಳಗೆ ನುಗ್ಗಿ ಕೊಲೆ ಆರೋಪಿಯನ್ನು ಗುಂಡಿಕ್ಕಿ ಕೊಂದ ಐವರ ಗುಂಪು

ಬಿಜೆಪಿ ಶಾಸಕರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡ್ತಿದೆ: ಛಲವಾದಿ ನಾರಾಯಣಸ್ವಾಮಿ

Show comments