Webdunia - Bharat's app for daily news and videos

Install App

ಜನಗಣತಿ: ಕರ್ನಾಟಕವೀಗ ಷಟ್ಕೋಟಿ ಕನ್ನಡಿಗರ ನಾಡು

Webdunia
ಗುರುವಾರ, 31 ಮಾರ್ಚ್ 2011 (16:10 IST)
WD
ಇದು ವಿಶ್ವದ ಜನಸಂಖ್ಯೆಯಲ್ಲಿ ಕೆಲವು ದೇಶಗಳ ಪಾಲು ಎಷ್ಟೆಂದು ತೋರಿಸುವ ನಕ್ಷೆ.

ದೇಶದ ಅಂಕಿಅಂಶ20012011ವೃದ್ಧಿ10 ವರ್ಷದಲ್ಲಿ ಶೇಕಡಾ ಹೆಚ್ಚಳ
ಒಟ್ಟು1,02,87,37,4361,21,01,93,42218,14,55,98617.64 %
ಪುರುಷರು53,22,23,09062,37,24,2489,15,01,15817.19
ಮಹಿಳೆಯರು49,65,14,34658,64,69,1748,99,54,82818.12
ಇದು ಭಾರತ ದೇಶದ ಒಟ್ಟು ಅಂಕಿ ಅಂಶ

ಕೇಂದ್ರವು ಗುರುವಾರ ಬಿಡುಗಡೆ ಮಾಡಿದ 2011 ಜನಗಣತಿ ವರದಿಯ ಅನುಸಾರ, ಕರ್ನಾಟಕದ ಜನಸಂಖ್ಯೆ ಈ ಒಂದು ದಶಕದಲ್ಲಿ (2001ರ ಜನಗಣತಿಯಿಂದೀಚೆಗೆ) 83 ಲಕ್ಷ ಹೆಚ್ಚಳ ಕಂಡು, 6.11 ಕೋಟಿಗೆ ತಲುಪಿದೆ. ಇದರೊಂದಿಗೆ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯಗಳಲ್ಲಿ ಕರ್ನಾಟಕವು 9ನೇ ಸ್ಥಾನ ಪಡೆದಿದೆ.

2001 ರ ಜನಗಣತಿಯಲ್ಲಿ ರಾಜ್ಯದ ಜನ ಸಂಖ್ಯೆಯು 5.28 ಲಕ್ಷ ಇತ್ತು. ಈ ಹತ್ತು ದಶಗಳಲ್ಲಿ ಜನಸಂಖ್ಯೆಯ ವೃದ್ಧಿಯ ದರವು ಕೂಡ ಶೇ.2ರಷ್ಟು ಕುಸಿತ ಕಂಡಿದೆಯಾದರೂ, ಲಿಂಗಾನುಪಾತದ ಪ್ರಮಾಣ ಏರಿಕೆಯಾಗಿದೆ. ಅಂದರೆ ಸಾವಿರ ಪುರುಷರಿಗೆ ಅನುಗುಣವಾಗಿ 968 ಮಹಿಳೆಯರ ಸಂಖ್ಯೆಯಿದೆ.

ಸಾಕ್ಷರತಾ ಪ್ರಮಾಣವು ಕೂಡ ಶೇ.66ರಿಂದ ಶೇ.75ಕ್ಕೆ ಏರಿಕೆಯಾಗಿದ್ದು ವಿಶೇಷ. ಅವರಲ್ಲಿಯೂ ಶೇ. 82ರಷ್ಟು ಪುರುಷರು ಸಾಕ್ಷರರಾಗಿದ್ದರೆ, ಶೇ.68ರಷ್ಟು ಮಹಿಳೆಯರು ಅಕ್ಷರಸ್ಥರಾಗಿದ್ದಾರೆ. ಇಲ್ಲೂ ಲಿಂಗ ತಾರತಮ್ಯ ಇನ್ನೂ ಎದ್ದು ಕಾಣುತ್ತಿದೆ.

2012 ರಲ್ಲಿ ಅಂತಿಮ ವರದಿ
ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಾದ ಸಿ.ಚಂದ್ರಮೌಳಿ ಅವರು ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಉಪಸ್ಥಿತಿಯಲ್ಲಿ ಜನಗಣತಿ 2011ರ ಪ್ರಾಥಮಿಕ ವರದಿ ಬಿಡುಗಡೆ ಮಾಡುತ್ತಾ, ಜನಗಣತಿಯ ಅಂತಿಮ ವರದಿಯು ಮುಂದಿನ ವರ್ಷ ಲಭ್ಯವಾಗಲಿದ್ದು, ಏನಾದರೂ ತಪ್ಪುಗಳಿದ್ದಲ್ಲಿ ಆಗಷ್ಟೇ ತಿಳಿಯಬಹುದು ಎಂದರು. 2001ರ ಜನಗಣತಿಯಲ್ಲಿ ಶೇ.2ರಷ್ಟು ದೋಷಗಳು ಇದ್ದವು.

2011 ರಲ್ಲಿ ನಡೆಸಿದ ಜನಗಣತಿಯು ಭಾರತದ 15ನೇ ಜನಗಣತಿಯಾಗಿದ್ದು, ಮೊದಲನೇ ಬಾರಿ ನಡೆದದ್ದು 1872ರಲ್ಲಿ. ಎಲ್ಲ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2200 ಕೋಟಿ ರೂಪಾಯಿ ವೆಚ್ಚದಲ್ಲಿ ಜನಗಣತಿ ನಡೆಸಲಾಗಿತ್ತು. 27 ಲಕ್ಷ ಜನಗಣತಿದಾರರು ಇದರಲ್ಲಿ ಭಾಗಿಯಾಗಿದ್ದು, 8000 ಮೆಟ್ರಿಕ್ ಟನ್ ಕಾಗದ ಮತ್ತು 10,500 ಮೆಟ್ರಿಕ್ ಟನ್ ಇತರ ಸಾಮಗ್ರಿಗಳನ್ನು ಬಳಸಲಾಗಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಮೀನು ಒತ್ತುವರಿ ಪ್ರಕರಣ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಬಿಗ್ ರಿಲೀಫ್‌

ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಡಿಎನ್‌ಎ ಟೆಸ್ಟ್‌ಗೆ ಮುಂದಾದ ಪಂಜಾಬ್ ಸರ್ಕಾರ

ಶುಭಾಂಶು ಶುಕ್ಲಾ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಇಸ್ರೋ

Viral Video, ಪಾಟ್ನಾ: ಹಾಡಹಗಲೇ ಆಸ್ಪತ್ರೆಯೊಳಗೆ ನುಗ್ಗಿ ಕೊಲೆ ಆರೋಪಿಯನ್ನು ಗುಂಡಿಕ್ಕಿ ಕೊಂದ ಐವರ ಗುಂಪು

ಬಿಜೆಪಿ ಶಾಸಕರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡ್ತಿದೆ: ಛಲವಾದಿ ನಾರಾಯಣಸ್ವಾಮಿ