Select Your Language

Notifications

webdunia
webdunia
webdunia
webdunia

ಗುರ್ಗಾಂವ್: ಕಾಲ್ ಸೆಂಟರ್ ಉದ್ಯೋಗಿಯ ಮೇಲೆ ಗ್ಯಾಂಗ್‌ರೇಪ್

ಗುರ್ಗಾಂವ್: ಕಾಲ್ ಸೆಂಟರ್ ಉದ್ಯೋಗಿಯ ಮೇಲೆ ಗ್ಯಾಂಗ್‌ರೇಪ್
ಗುರ್ಗಾಂವ್ , ಬುಧವಾರ, 30 ಅಕ್ಟೋಬರ್ 2013 (16:15 IST)
PR
19 ವರ್ಷ ವಯಸ್ಸಿನ ಕಾಲ್‌ಸೆಂಟರ್ ಉದ್ಯೋಗಿಯೊಬ್ಬಳನ್ನು ಮೂವರು ಆರೋಪಿಗಳು ಅಪಹರಿಸಿ ಗ್ಯಾಂಗ್‌ರೇಪ್ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತನ್ನ ಗೆಳತಿಯ ಹುಟ್ಟು ಹಬ್ಬದ ಪಾರ್ಟಿಯನ್ನು ಮುಗಿಸಿಕೊಂಡು ಇಂದು ನಸುಕಿನ ಜಾವ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಗಾಗಿದ್ದಾಳೆ.

ಮುಖ್ಯ ಆರೋಪಿ ದಿನೇಶ್ ಯುವತಿಗೆ ಮೆಟ್ರೋ ಸ್ಟೇಶನ್‌‌ವರೆಗೆ ಲಿಫ್ಟ್‌ ಕೊಡುವುದಾಗಿ ಹೇಳಿ ತನ್ನ ಗೆಳೆಯರ ಸಹಾಯದಿಂದ ಅಪಹರಿಸಿ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಜಂಟಿ ಆಯಕ್ತ ಮಹೇಶ್ವರ್ ದಯಾಲ್ ತಿಳಿಸಿದ್ದಾರೆ.

ಆರೋಪಿ ದಿನೇಶ್ ಗುರ್ಗಾಂವ್- ದೆಹಲಿ ಎಕ್ಸ್‌ಪ್ರೆಸ್ ವೇ ಬಳಿಯಿರುವ ಜಾರ್ಸಾ ಗ್ರಾಮದ ನಿವಾಸಿಯಾಗಿದ್ದು ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದಾನೆ. ಆತನ ಗೆಳೆಯರನ್ನು ನವೀನ್ ಮತ್ತು ಸತ್ಯದೇವ್ ಎಂದು ಗುರತಿಸಲಾಗಿದ್ದು, ಬಂಧನಕ್ಕಾಗಿ ಜಾಲ ಬೀಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share this Story:

Follow Webdunia kannada