Webdunia - Bharat's app for daily news and videos

Install App

ಗುರಗಾಂವ್‌ನಲ್ಲಿ ಗ್ಯಾಂಗ್‌ರೇಪ್ ಮಾಡಿ ಬೆತ್ತಲೆಯಾಗಿ ಬಿಸಾಡಿದರು!

Webdunia
ಶುಕ್ರವಾರ, 27 ಸೆಪ್ಟಂಬರ್ 2013 (13:50 IST)
PR
PR
ಗುರಗಾಂವ್: ದೆಹಲಿಯ ಗ್ಯಾಂಗ್ ರೇಪ್, ಹತ್ಯೆ ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ನೀಡುವ ಮೂಲಕ ಅತ್ಯಾಚಾರಿಗಳಿಗೆ ಕಠಿಣ ಸಂದೇಶವನ್ನು ರವಾನಿಸಿದ್ದರೂ, ದೆಹಲಿಯ ಬಳಿ ಮತ್ತೊಂದು ಅತ್ಯಾಚಾರ ಪ್ರಕರಣ ನಡೆದಿದೆ. 25 ವರ್ಷ ವಯಸ್ಸಿನ ಮಹಿಳೆಯೊಬ್ಬಳ ಮೇಲೆ ಗ್ಯಾಂಗ್ ರೇಪ್ ಮಾಡಿ ಗುರಗಾಂವ್ ಉಪನಗರದ ಹೃದಯಭಾಗದ ರಸ್ತೆಯಲ್ಲಿ ಎಸೆದುಹೋಗಿರುವ ಘಟನೆ ವರದಿಯಾಗಿದೆ.

ಮಹಿಳೆ ರಸ್ತೆಯಲ್ಲಿ ಬಿದ್ದಿರುವ ಬಗ್ಗೆ ಪೊಲೀಸರಿಗೆ ರಾತ್ರಿ 10 ಗಂಟೆಗೆ ಕರೆ ಬಂದಿತು. ಸುಶಾಂತ್ ಲೋಕ್ ಪ್ರದೇಶದಲ್ಲಿ ಅವಳು ಬೆತ್ತಲೆಯಾಗಿ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಬಿದ್ದಿದ್ದಳು ಅವಳ ಮೈಮೇಲೆ ಗಾಯಗಳಾಗಿದ್ದು, ತುಟಿ ಬಾತುಕೊಂಡಿತ್ತು ಮತ್ತು ಮುಖದಲ್ಲಿ ಏಟುಗಳ ಗುರುತಿತ್ತು.
ಈ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದ್ದು ಹೇಗೆ-
ರೋಚಕ ಸುದ್ದಿ ಮುಂದಿನ ಪುಟದಲ್ಲಿ

PR
PR
ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ ರಾತ್ರಿ 8ಗಂಟೆಗೆ ಕೆಲಸದಿಂದ ಹಿಂತಿರುಗುತ್ತಿದ್ದಾಗ ಕಾರೊಂದನ್ನು ಅವಳ ಬಳಿ ನಿಲ್ಲಿಸಲಾಯಿತು ಮತ್ತು ಕಾರಿನೊಳಗಿದ್ದ ನಾಲ್ಕು ಅಥವಾ ಐದು ಮಂದಿ ಅವಳನ್ನು ಕಾರಿನೊಳಕ್ಕೆ ಎಳೆದುಕೊಂಡರು.ನಂತರ ಮಹಿಳೆಗೆ ಬಲವಂತವಾಗಿ ಮದ್ಯಪಾನ ಮಾಡಿಸಿದರು. ನಂತರ ಒಂಟಿ ಸ್ಥಳಕ್ಕೆ ಕರೆದುಕೊಂಡು ಹೋಗಿ ಒಬ್ಬರ ನಂತರ ಒಬ್ಬರು ಅತ್ಯಾಚಾರ ನಡೆಸಿದರು. ಕೆಲಸ ಮುಗಿಸಿದ ಕೂಡಲೇ ಅವಳನ್ನು ರಸ್ತೆಯಲ್ಲಿ ಬಿಸಾಡಿ ಹೋದರು.ತೀರಾ ನಡುಗುತ್ತಿದ್ದ ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆಸಲು ನಿರಾಕರಿಸಿದಳು.

ಗಾಯಗಳ ಆಧಾರದ ಮೇಲೆ ಗ್ಯಾಂಗ್ ರೇಪ್ ಕೇಸನ್ನು ದಾಖಲಿಸಲಾಯಿತು. ದೆಹಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ಮತ್ತು ಹತ್ಯೆ ಬಳಿಕ ಪೊಲೀಸು ಕಠಿಣ ಕಾವಲು ಮತ್ತು ಕಠಿಣ ನಿಯಮಗಳನ್ನು ಅಳವಡಿಸಿರುವ ನಡುವೆಯೂ ಈ ಪ್ರಕರಣವು ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಹೊಸ ಆತಂಕವನ್ನು ಸೃಷ್ಟಿಸಿದೆ. ಸುಮಾರು 15 ದಿನಗಳ ಹಿಂದೆ ದೆಹಲಿ ಗ್ಯಾಂಗ್ ರೇಪ್, ಹತ್ಯೆ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಧೀಶರು ನಾಲ್ವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ