Select Your Language

Notifications

webdunia
webdunia
webdunia
webdunia

ಗುಜರಾತ್, ಮಹಾರಾಷ್ಟ್ರ ರಾಜ್ಯಗಳ ಹೋಲಿಕೆ: ಮೋದಿ ವಿರುದ್ಧ ಕಿಡಿಕಾರಿದ ಶಿವಸೇನೆ

ಗುಜರಾತ್, ಮಹಾರಾಷ್ಟ್ರ ರಾಜ್ಯಗಳ ಹೋಲಿಕೆ: ಮೋದಿ ವಿರುದ್ಧ ಕಿಡಿಕಾರಿದ ಶಿವಸೇನೆ
ಮುಂಬೈ , ಮಂಗಳವಾರ, 24 ಡಿಸೆಂಬರ್ 2013 (13:55 IST)
PTI
ಮಹಾರಾಷ್ಟ್ರಗಿಂತ ಗುಜರಾತ್‌ ರಾಜ್ಯ ಅಭಿವೃದ್ಧಿಯಲ್ಲಿ ಮುಂದಿದೆ ಎನ್ನುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿಕೆಯನ್ನು ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷವಾದ ಶಿವಸೇನೆ ಟೀಕಿಸಿದೆ.

ನರೇಂದ್ರ ಮೋದಿಯವರ ಮುಂಬೈ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ, ಉಭಯ ರಾಜ್ಯಗಳ ನಡುವಣ ಹೋಲಿಕೆ ಮಾಡಿರುವುದು ಸರಿಯಲ್ಲಿ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆ. ಸಂಪಾದಕೀಯದಲ್ಲಿ ಕಿಡಿಕಾರಿದ್ದಾರೆ.

ಮುಂಬೈನಲ್ಲಿ ನಡೆದ ಮೋದಿಯವರ ಸಭೆಯನ್ನು ಯಶಸ್ವಿಗೊಳಿಸಲು ಗುಜರಾತಿ ಮೂಲದ ಉದ್ಯಮಿಗಳು ಹಿಂದುತ್ವವಾದಿಗಳು ನಗರಾದ್ಯಂತ ಭಾರಿ ಜಾಹೀರಾತುಗಳನ್ನು ಲಗತ್ತಿಸಿ ಮಹಾಗರ್ಜನಾ ಯಶಸ್ವಿಗೆ ಪ್ರಯತ್ನಿಸಿದ್ದರು.

ಮಹಾಗರ್ಜನಾ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ, ಗುಜರಾತಿಗಳಿಗೆ ಮುಂಬೈ ಎರಡನೇ ಮನೆಯಿದ್ದಂತೆ. ಗುಜರಾತಿಗಳು ವಹಿವಾಟಿನಲ್ಲಿ ಬಂದ ಲಾಭವನ್ನು ಸೌರಾಷ್ಟ್ರ, ಕಛ್ಛ ಮತ್ತು ಸೂರತ್ ರಾಜ್ಯಗಳ ಅಭಿವೃದ್ಧಿಯಲ್ಲಿ ತೊಡಗಿಸುತ್ತಾರೆ ಎಂದು ಗುಣಗಾನ ಮಾಡಿದ್ದರು.

ಅಭಿವೃದ್ಧಿಯಲ್ಲಿ ಗುಜರಾತ್ ಚಿನ್ನದ ಪದಕ ಪಡೆದಿದೆ. ಆದರೆ, ಮಂಬೈ ಚಿನ್ನದ ಪದಕ ಪಡೆಯಲು ತುಂಬಾ ದೂರದ ದಾರಿ ಸವೆಸಬೇಕಾಗಿದೆ. ಮಹಾರಾಷ್ಟ್ರದಲ್ಲಿ ಸಾಕಷ್ಟು ಮೂಲಸೌಕರ್ಯಗಳ ಕೊರತೆಯಿದ್ದರೂ ಗುಜರಾತಿಗಳು ಎರಡನೇ ತವರು ಮನೆಯಾಗಿಸಿಕೊಂಡಿದ್ದಾರೆ ಎಂದು ಮೋದಿ ಹೊಗಳಿಕೆ ಮಿತ್ರಪಕ್ಷಗಳಲ್ಲಿ ವೈಮನಸ್ಸು ಮೂಡಿಸಿದೆ.

ಒಂದು ವೇಳೆ ನಾನು ಪ್ರಧಾನಮಂತ್ರಿಯಾದಲ್ಲಿ ವಿದೇಶಿ ಬ್ಯಾಂಕ್‌ಗಳಲ್ಲಿರುವ ದೇಶದ ಕಪ್ಪು ಹಣವನ್ನು ಖಚಿತವಾಗಿ ಮರಳಿ ತರುವುದಾಗಿ ಜನತೆಗೆ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

Share this Story:

Follow Webdunia kannada