Select Your Language

Notifications

webdunia
webdunia
webdunia
webdunia

ಗುಜರಾತ್ : ಕೇಜ್ರಿವಾಲ್ ಪಕ್ಷಕ್ಕೆ 5 ಲಕ್ಷ ಜನ ಸೇರ್ಪಡೆ

ಗುಜರಾತ್ : ಕೇಜ್ರಿವಾಲ್ ಪಕ್ಷಕ್ಕೆ 5 ಲಕ್ಷ ಜನ ಸೇರ್ಪಡೆ
ಅಹ್ಮದಾಬಾದ್ , ಭಾನುವಾರ, 19 ಜನವರಿ 2014 (11:23 IST)
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಡಳಿತವಿರುವ ಗುಜರಾತ್‌ನಲ್ಲಿ 5 ಲಕ್ಷಕ್ಕೂ ಹೆಚ್ಚು ಸದಸ್ಯರಿಗೆ ಸದಸ್ಯತ್ವ ನೀಡಲಾಗಿದೆ, ಇದರಲ್ಲಿ ಆನ್‌ಲೈನ್ ಅಥವಾ ಎಸ್‌ಎಂಎಸ್ ಮೂಲಕ ನೀಡಲಾದ ಸದಸ್ಯತ್ವವನ್ನು ಸೇರಿಸಿಲ್ಲ ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ.

ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ಎರಡು ದಿನಗಳ ಭೇಟಿಗೆ ಗುಜರಾತ್‌ನ ಅಮರೈವಾಡಿಗೆ ಭೇಟಿ ನೀಡಿ, ಮುಂಬರುವ ದಿನಗಳಲ್ಲಿ ಮತ್ತಷ್ಟು ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ವಿದ್ಯುತ್ ಕಡಿತ, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಮತ್ತು ಗೌಚಾರ್ ಭೂ ಅಕ್ರಮದಂತಹ ವಿಷಯಗಳನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆ.

ಗುಜರಾತ್‌‌ನಲ್ಲಿ ಅಧಿಕಾರರೂಢವಾಗಿರುವ ಬಿಜೆಪಿ ಪಕ್ಷದ ಮುಖಂಡರು ಸರಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಭಿಲೋಡಾ ನಗರದ ಸಬರ್‌ಕಂಠ ಪಟ್ಟಣದ ನಿವಾಸಿಯಾದ ಪೇರ್ವೆದ್ ಬೇಗಂ ಪಠಾಣ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರಿಂದ ಪೊಲೀಸ್ ಅಧಿಕಾರಿಯೊಬ್ಬ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.

ಗುಜರಾತ್ ರಾಜ್ಯದಲ್ಲಿರುವ 26 ಲೋಕಸಭೆ ಕ್ಷೇತ್ರಗಳಲ್ಲಿ ವೀಕ್ಷಕರನ್ನು ನೇಮಿಸಲಾಗುವುದು. ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸಲಾಗುವುದು. ಒಂದು ವೇಳೆ ಚುನಾವಣೆಗೂ ಮುನ್ನ ಆಮ್ ಆದ್ಮಿ ಅಭ್ಯರ್ಥಿಯ ಬಗ್ಗೆ ದೂರುಗಳು ಬಂದಲ್ಲಿ ಅಭ್ಯರ್ಥಿಯ ನಾಮಪತ್ರವನ್ನು ರದ್ದುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ದೇಶಾದ್ಯಂತ ಆಮ್ ಆದ್ಮಿ ಪಕ್ಷಕ್ಕೆ ಕೆಟ್ಟ ಹೆಸರು ತರುವ ಷಡ್ಯಂತ್ರಗಳು ನಡೆಯುತ್ತಿವೆ. ಅದರಂತೆ, ಗುಜರಾತ್ ರಾಜ್ಯದಲ್ಲಿ ಕೂಡಾ ಪಕ್ಷಕ್ಕೆ ಕೆಟ್ಟ ಹೆಸರು ತರುವ ಪ್ರರ್ಯತ್ನ ನಡೆಯುತ್ತಿವೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ಕಿಡಿಕಾರಿದ್ದಾರೆ.

Share this Story:

Follow Webdunia kannada