Webdunia - Bharat's app for daily news and videos

Install App

ಗುಜರಾತ್‌ ಮೇಲೆ ಐಟಿ ಕೆಂಗಣ್ಣು; ಕಾಂಗ್ರೆಸ್ ಕುತಂತ್ರ ಆರೋಪ

Webdunia
ಬುಧವಾರ, 16 ಮಾರ್ಚ್ 2011 (09:49 IST)
ಕೇಂದ್ರ ಸರಕಾರವು ತನ್ನ ತನಿಖಾ ಸಂಸ್ಥೆಗಳನ್ನು ರಾಜಕೀಯ ಎದುರಾಳಿಗಳ ವಿರುದ್ಧ ಬಳಸುತ್ತಿದೆ ಎಂಬ ಆರೋಪಗಳು ಬರುತ್ತಿರುವ ನಡುವೆಯೇ ಗುಜರಾತ್ ಮೇಲೆ ಆದಾಯ ತೆರಿಗೆ ಇಲಾಖೆ ಕೆಂಗಣ್ಣು ಬೀರಿದೆ. ಹಲವು ದಾಖಲೆಗಳನ್ನು ಐಟಿ ಕೇಳಿದೆ. ಇದು ಕಾಂಗ್ರೆಸ್ ಕುತಂತ್ರ ಎಂದು ನರೇಂದ್ರ ಮೋದಿ ನೇತೃತ್ವದ ಸರಕಾರವು ನೇರವಾಗಿ ವಾಗ್ದಾಳಿ ನಡೆಸಿದೆ.

ಮುಖ್ಯಮಂತ್ರಿ ನರೇಂದ್ರ ಮೋದಿ ಬಂಡವಾಳಿಗರನ್ನು ರಾಜ್ಯಕ್ಕೆ ಸೆಳೆಯುವ ಸಲುವಾಗಿ ಮಹತ್ವಾಕಾಂಕ್ಷೆಯಿಂದ ಹಮ್ಮಿಕೊಂಡು ಯಶಸ್ವಿಯಾಗಿದ್ದ ಉದ್ಯಮ ಸಮ್ಮೇಳನದ ಕುರಿತು ದಾಖಲೆಗಳನ್ನು ಒದಗಿಸುವಂತೆ ಆದಾಯ ತೆರಿಗೆ ಇಲಾಖೆ ಕೇಳಿದೆ ಎಂದು ಗುಜರಾತ್ ವಿಧಾನಸಭೆಯಲ್ಲಿ ರಾಜ್ಯ ಕೈಗಾರಿಕಾ ಸಚಿವ ಸೌರಭ್ ಪಟೇಲ್ ತಿಳಿಸಿದರು.

ಇತ್ತೀಚೆಗಷ್ಟೇ ನಡೆದಿದ್ದ 'ವೈಬ್ರಂತ್ ಗುಜರಾತ್ ಶೃಂಗ-2011' ಮತ್ತು 'ವೈಬ್ರಂತ್ ಗುಜರಾತ್ ಶೃಂಗ-2009'ದಲ್ಲಿನ ಬಂಡವಾಳ ಹೂಡಿಕೆಗೆ ಸಂಬಂಧಪಟ್ಟಂತೆ ಮಾಡಿಕೊಳ್ಳಲಾಗಿರುವ ಎಲ್ಲಾ ಒಪ್ಪಂದಗಳ ವಿವರಗಳನ್ನು ನೀಡುವಂತೆ ಐಟಿ ಕೇಳಿ ಪತ್ರ ಬರೆದಿದೆ ಎಂದಿರುವ ಸಚಿವರು, ಇದರ ಹಿಂದೆ ಕಾಂಗ್ರೆಸ್ ಇದೆ ಎಂದು ಆರೋಪಿಸಿದರು.

ಗುಜರಾತ್ ಪ್ರಗತಿಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ, ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂಬ ಬಗ್ಗೆ ಪುರಾವೆಗಳಿವೆ ಎಂದೂ ಸಚಿವ ಪಟೇಲ್ ಆಪಾದಿಸಿದರು.

' ವೈಬ್ರಂತ್ ಗುಜರಾತ್ ಶೃಂಗ-2011'ರ ಕುರಿತ ತನಿಖೆ ಬಾಕಿ ಉಳಿದಿದೆ ಮತ್ತು ಗುಜರಾತ್ ಸರಕಾರದ ಜತೆ ಹಲವು ಕಾರ್ಪೊರೇಟ್ ಸಂಸ್ಥೆಗಳು ಮಾಡಿಕೊಂಡಿರುವ ಒಪ್ಪಂದಗಳ ವಿವರಗಳ ಕುರಿತು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಆದಾಯ ತೆರಿಗೆ ಇಲಾಖೆಯು ತನ್ನ ಪತ್ರದಲ್ಲಿ ನಮೂದಿಸಿದೆ.

ಫೆಬ್ರವರಿ 17ರಂದು ಆದಾಯ ತೆರಿಗೆ ಇಲಾಖೆಯ ಉಪ ನಿರ್ದೇಶಕ (ತನಿಖೆಗಳು) ಅನುರಾಗ್ ಶರ್ಮಾ ಬರೆದಿರುವ ಪತ್ರದಲ್ಲಿ, ಗುಜರಾತ್ ಸರಕಾರದ ಉದ್ಯಮ ಒಪ್ಪಂದಗಳ ಕುರಿತು ಆದಾಯ ತೆರಿಗೆ ಇಲಾಖೆ ಕಾಯ್ದೆ 131(1ಎ) ಅಡಿಯಲ್ಲಿ ತನಿಖೆ ನಡೆಸಲಾಗುತ್ತದೆ ಎಂದೂ ಹೇಳಿದ್ದಾರೆ.

ಗುಜರಾತ್ ಜನತೆಗೆ ಮಾಡಿದ ಅನ್ಯಾಯ...
ಪ್ರತಿಪಕ್ಷದ (ಕಾಂಗ್ರೆಸ್) ನಾಯಕ ಶಕ್ತಿಸಿನ್ಹ ಗೋಹಿಲ್ ಅವರ ಧೋರಣೆ ಮತ್ತು ಅವರು ಕೇಂದ್ರ ಸರಕಾರಕ್ಕೆ ನಿರಂತರವಾಗಿ ದೂರುಗಳನ್ನು ನೀಡಿದ ಕಾರಣದಿಂದ ನಮಗೆ ಆದಾಯ ತೆರಿಗೆ ಇಲಾಖೆಯು ನೊಟೀಸ್ ರವಾನಿಸಿದೆ. ವೈಬ್ರಂಟ್ ಗುಜರಾತ್ ಶೃಂಗವನ್ನು ಇಡೀ ದೇಶ ಮತ್ತು ವಿಶ್ವವೇ ಮೆಚ್ಚಿದೆ. ಇದರ ಕುರಿತು ತನಿಖೆ ನಡೆಸಲು ಆದಾಯ ತೆರಿಗೆ ಇಲಾಖೆ ಹೊರಟಿರುವುದು ದುರದೃಷ್ಟಕರ ಎಂದು ಸಚಿವ ಪಟೇಲ್ ವಿಧಾನಸಭೆಯ ಹೊರಗಡೆ ಅಭಿಪ್ರಾಯಪಟ್ಟರು.

ಇದು ಗುಜರಾತಿಗೆ ಮತ್ತು ರಾಜ್ಯದ ಜನತೆಗೆ ಎಸಗಲಾಗುತ್ತಿರುವ ಅನ್ಯಾಯ. ಈ ರೀತಿಯಾಗಿ ಹೂಡಿಕೆ ಪ್ರಸ್ತಾವನೆಗಳ ಕುರಿತು ತನಿಖೆ ನಡೆಸಲು ಗುಜರಾತನ್ನು ವಿಶೇಷ ಎಂದು ಪರಿಗಣಿಸಲಾಗಿದೆಯೇ ಅಥವಾ ಎಲ್ಲಾ ರಾಜ್ಯಗಳಿಗೂ ಪತ್ರ ಕಳುಹಿಸಲಾಗಿದೆಯೇ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಲು ಬಯಸುತ್ತಿದ್ದೇನೆ ಎಂದರು.

ಇದೇ ವರ್ಷದ ಜನವರಿ 12-13ರಂದು ಗುಜರಾತಿನಲ್ಲಿ ನಡೆದಿದ್ದ ಈ ಬಂಡವಾಳ ಸಮ್ಮೇಳನದಲ್ಲಿ 20.83 ಲಕ್ಷ ಕೋಟಿ ರೂಪಾಯಿ ಮೊತ್ತದ 7,0936 ಒಡಂಬಡಿಕೆಗಳಿಗೆ ನೂರಾರು ಕಂಪನಿಗಳು ಸಹಿ ಹಾಕಿದ್ದವು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತೆಲಂಗಾಣ: ಫ್ರಿಡ್ಜ್‌ನಲ್ಲಿಟ್ಟ ಮಾಂಸ ಸೇವಿಸಿ 7 ಮಂದಿ ಅಸ್ವಸ್ಥ, ಓರ್ವ ಸಾವು

ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಜಪಾನ್‌ಗೆ ವಿಮಾನದಲ್ಲಿ ಹಾರಲಿವೆ ನಾಲ್ಕು ಆನೆ

ಆರ್‌ಸಿಬಿ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ದಿವ್ಯಾಂಶಿ ತಾಯಿ ದಿಢೀರ್‌ ಠಾಣೆ ಮೆಟ್ಟಿಲೇರಿದ್ದೇಕೆ

ಸ್ಮಾರ್ಟ್ ಮೀಟರ್ ಹಗರಣದಲ್ಲಿರುವ ಸಚಿವ ಕೆಜೆ ಜಾರ್ಜ್ ವಜಾ ಮಾಡಿ: ಡಾ ಸಿಎನ್ ಅಶ್ವತ್ಥನಾರಾಯಣ

ಯೆಸ್ ಬ್ಯಾಂಕ್‌ಗೆ ₹3,000 ಕೋಟಿ ಸಾಲ ವಂಚನೆ: ಅನಿಲ್‌ ಅಂಬಾನಿಗೆ ಜಾರಿ ನಿರ್ದೇಶನಾಲಯ ಶಾಕ್‌

Show comments