Select Your Language

Notifications

webdunia
webdunia
webdunia
webdunia

ಗಂಡ ರೇಪ್‌ ಮಾಡಿದ ಎಂದು ಪೋಲೀಸರಿಗೆ ದೂರು ಕೊಟ್ಟ ಹೆಂಡತಿ.

ಗಂಡ ರೇಪ್‌ ಮಾಡಿದ ಎಂದು ಪೋಲೀಸರಿಗೆ ದೂರು ಕೊಟ್ಟ ಹೆಂಡತಿ.
ಅಹಮದಾಬಾದ್ , ಸೋಮವಾರ, 31 ಮಾರ್ಚ್ 2014 (18:50 IST)
"ನನ್ನ ಗಂಡ ನನ್ನನ್ನು ಅತ್ಯಾಚಾರ ಮಾಡಿದ್ದಾನೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ" ಎಂದು 32 ವರ್ಷದ ಮಹಿಳೆಯೊಬ್ಬಳು ಗಂಡನ ಮೇಲೆ ದೂರು ನೀಡಿದ ಘಟನೆ ಅಹಮದಾಬಾದ್‌ ನಗರದ ಕಗ್ಡಪೀಟ್ ಪೋಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅರೆ ಇದೇನಪ್ಪಾ? ಹೀಗೂ ಆಗುತ್ತಾ ಅಂತ ಪೋಲೀಸರು ಆರಂಭದಲ್ಲಿ ಅಚ್ಚರಿ ಪಟ್ಟುಕೊಂಡು ತನಿಖೆಗೆ ಇಳಿಸಿದ್ದಾರೆ. ಮನೆಗೆ ಹೋಗಿ ತನಿಖೆ ನಡೆಸಿದಾಗ ಇನ್ನೊಂದು ಅಚ್ಚರಿ ವಿಷಯ ಹೊರಗೆ ಬಿದ್ದಿದೆ. ಗಂಡ ಹೆಂಡತಿ ಇಬ್ಬರೂ ಕೂಡ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಆದ್ರೆ ಬೇರೆ ಬೇರೆ ಮಹಡಿಯಲ್ಲಿ ಇಬ್ಬರೂ ವಾಸವಾಗಿದ್ದರು.

ಚಾಂದಿನಿ ಎಂಬ ಮಹಿಳೆಯು ತನ್ನ ಗಂಡನ ಮೇಲೆ ರೇಪ್ ಕೇಸ್‌ ದಾಖಲಿಸಿದ ಮಹಿಳೆಯಾಗಿದ್ದಾಳೆ. ತನ್ನ ಗಂಡ ಯಾವಾಗಲೂ ದೈಹಿಕ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಾನೆ. ಜೊತೆಗೆ ಗಂಡನ ಕುಟುಂಬದವರೂ ನನಗೆ ಮಾನಸಿಕವಾಗಿ ಚಿತ್ರಹಿಂಸೆಯನ್ನು ನೀಡುತ್ತಿದ್ದಾರೆ. ಇದರ ನಡುವೆ ಆಗಾಗ ನನ್ನ ಗಂಡ ನನ್ನ ಮೇಲೆ ಅತ್ಯಾಚಾರ ಕೂಡ ಎಸಗಿದ್ದಾನೆ ಎಂದು ಚಾಂದಿನಿ ಪೋಲೀಸರಲ್ಲಿ ದೂರು ನೀಡಿದ್ದಾಳೆ.

ಗಂಡ ಹೆಂಡತಿಯ ನಡುವಿನ ಸೆಕ್ಸ್ ಅನ್ನು ರೇಪ್ ಎಂದು ಪರಿಗಣಿಸಲು ಸಾಧ್ಯವೇ? ಮುಂದಿನ ಪುಟದಲ್ಲಿದೆ ಇನ್ನಷ್ಟು ಮಾಹಿತಿ....

PTI
PTI
ಇಬ್ಬರು ಮಕ್ಕಳಿರುವ ಚಾಂದಿನಿಯನ್ನು ಇದೀಗ ಮೆಡಿಕಲ್ ಚೆಕಪ್‌ಗೆ ಒಳಪಡಿಸಲಾಗಿದೆ. ವೈದ್ಯಕೀಯ ತಪಾಸಣೆಯಲ್ಲಿ ಏನಾದರೂ ಗಂಡ ಅತ್ಯಾಚಾರ ನಡೆಸಿರುವುದು ಖಚಿತವಾದರೆ, ಗಂಡನ ಮೇಲೆ ರೇಪ್‌ಕೇಸ್ ಬುಕ್ ಆಗುವ ಸಾಧ್ಯತೆಗಳಿವೆ ಎಂದು ಪೋಲೀಸರು ಹೇಳಿದ್ದಾರೆ.

ಚಾಂದಿನಿ ಮತ್ತು ಆಕೆಯ ಗಂಡ ಇಬ್ಬರದ್ದು ಉತ್ತಮ ಸಂಸಾರವಾಗಿತ್ತು. ಅವರಿಬ್ಬರ ಸಂಸಾರದಿಂದ 2 ಮಕ್ಕಳು ಕೂಡ ಹುಟ್ಟಿದರು. ಆದ್ರೆ ಅವರಿಬ್ಬರ ನಡುವೆ ವೈಮನಸ್ಸು ಹೆಚ್ಚಾಗಿದ್ದರಿಂದ ವಿಚ್ಚೇಧನ ತೆಗೆದುಕೊಳ್ಳದೇ, ಒಂದೇ ಮನೆಯಲ್ಲಿ ಬೇರೆ ಬೇರೆ ಮಹಡಿಯಲ್ಲಿ ವಾಸಿಸುತ್ತಿದ್ದರು. ಈ ವೇಳೆ ಹೆಂಡತಿಯ ಅನುಮತಿ ಇಲ್ಲದೇ ಗಂಡ ಆಕೆಯೊಂದಿಗೆ ಬಲವಂತದ ಸಂಭೋಗ ನಡೆಸಿದ್ದಾನೆ. ಹೀಗಾಗಿ ಅಸಮ್ಮತ ಸಂಭೋಗವನ್ನು ರೇಪ್ ಎಂದು ಪರಿಗಣಿಸಲಾಗುತ್ತದೆ. ಅಕಸ್ಮಾತ್ ರೇಪ್ ನಡೆಸಿದ್ದು ನಿಜವಾದರೆ ಹೆಂಡತಿಯನ್ನು ರೇಪ್ ಮಾಡಿದ್ದಕ್ಕೆ ಗಂಡ ಅಂದರ‍್ ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

Share this Story:

Follow Webdunia kannada