Select Your Language

Notifications

webdunia
webdunia
webdunia
webdunia

ಗಂಡನಿಗೆ ಶಾಲಾ ಬಾಲಕಿಯರನ್ನು ಸಪ್ಲೈ ಮಾಡುತ್ತಿದ್ದ ಲೇಡಿ ಪ್ರಿನ್ಸಿಪಲ್.!??

ಗಂಡನಿಗೆ ಶಾಲಾ ಬಾಲಕಿಯರನ್ನು ಸಪ್ಲೈ ಮಾಡುತ್ತಿದ್ದ ಲೇಡಿ ಪ್ರಿನ್ಸಿಪಲ್.!??
ದೆಹಲಿ‘ , ಶುಕ್ರವಾರ, 25 ಅಕ್ಟೋಬರ್ 2013 (16:21 IST)
ನವದೆಹಲಿ : ಟ್ಯೂಷನ್ವ ಫೀಸ್‌ ಕಟ್ಟದಿರುವ ಹುಡುಗಿಯನ್ನು ಲೇಡಿ ಪ್ರಿನ್ಸಿಪಲ್‌ ಒಬ್ಬರು ಆಕೆಯ ಗಂಡನ ಬಳಿಗೆ ಕಳಿಸಿದ್ದಾಳೆ. ಅಲ್ಲಿ ಕಾಮಿ ಗಂಡ ಆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದೊಂದೆ ಪ್ರಕರಣವಲ್ಲ.. ಟ್ಯೂಷನ್‌ ಫೀಸು ಕಟ್ಟದ ಬಾಲಕಿಯರನ್ನು ಲೇಡಿ ಪ್ರಾಂಶುಪಾಲರು ತನ್ನ ಮಂಚಕ್ಕೆ ಈ ಹಿಂದೆಯೂ ಕಳಿಸುತ್ತಿದ್ದರು ಎಂದು ಕೆಲವು ಅನಧಿಕೃತ ಮೂಲಗಳು ಹೇಳಿವೆ. 13 ವರ್ಷದ ವಿದ್ಯಾರ್ಥಿಯನ್ನು ಇಂಥದ್ದೇ ವಿಕೃತ ಕೆಲಸದಲ್ಲಿ ಬಳಸಿಕೊಳ್ಳಲು ಯತ್ನಿಸಿದಾಗ ಶಾಲೆ ಪ್ರಾಂಶುಪಾಲರ ಹಳೆ ಬಯೋಡೆಟಾ ಹೊರಗೆ ಬಿದ್ದಿದೆ.

ದೆಹಲಿಯ ವಾಯುವ್ಯ ಭಾಗದಲ್ಲಿರುವ ಗೋಕುಲ್‌ಪುರಿ ಎಂಬ ಸ್ಥಳದಲ್ಲಿ ವಾಸಿಸುತ್ತಿರುವ ಶಿಕ್ಷಕಿ ಮತ್ತು ಆಕೆಯ ಗಂಡನ ಮೇಲೆ ಅದೇ ಶಾಲೆಯ ವಿದ್ಯಾರ್ಥಿನಿ ಮತ್ತು ಅವರ ಪೋಷಕರು ದೂರು ದಾಖಲಿಸಿದ್ದಾರೆ.

ಗಂಡನಿಗೆ ಶಾಲಾ ಹುಡುಗಿಯರನ್ನು ಸಪ್ಲೈ ಮಾಡುತ್ತಿದ್ದಳೇ ಈ ಲೇಡಿ ಪ್ರಾಂಶುಪಾಲೆ? ಮುಂದಿನ ಪುಟದಲ್ಲಿದೆ ಇನ್ನಷ್ಟು ಮಾಹಿತಿ..

PTI
PTI
"ಹೋಮ್‌ ವರ್ಕ್‌ ಮಾಡಿಕೊಂಡು ಬಾರದೇ ಇದ್ದ ಸಮಯದಲ್ಲಿ ಶಾಲಾ ಪ್ರಾಂಶುಪಾಲರು 13 ವರ್ಷದ ಆ ಬಾಲಕಿಯನ್ನು ತನ್ನ ಗಂಡನ ಬಳಿ ಹೋಗುವಂತೆ ಹಿಂಸಿಸುತ್ತಿದ್ದರಂತೆ. ಕಳೆದ ಹತ್ತು ದಿನಗಳಿಂದಲೂ ಪ್ರಾಂಶುಪಾಲರು ಮತ್ತು ಆಕೆಯ ಗಂಡ ನನ್ನ ಮೇಲೆ ಈ ರೀತಿಯಾಗಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ.

ರಮ್ಯಾ ಎಂಬ ಹುಡುಗಿಯು ಚಂದ್‌ ಭಾಗ್‌ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದಳು. ಆದ್ರೆ ಶಾಲೆಯ ಪ್ರಾಂಶುಪಾಲರು ತಮ್ಮ ಶಾಲೆಯ ಹುಡುಗಿಯರನ್ನು ತನ್ನ ಗಂಡನ ಬಳಿಗೆ ಟ್ಯೂಷನ್ ಹೋಗುವಂತೆ ಒತ್ತಾಯ ಪಡಿಸುತ್ತಿದ್ದರು. 13 ವರ್ಷದ ರಮ್ಯಾ ಕೂಡ ಪ್ರಾಂಶುಪಾಲರ ಬಳಿಗೆ ಟ್ಯೂಶನ್‌ಗೆ ಹೋಗುತ್ತಿದ್ದಳು. ಆದ್ರೆ ಕೆಲವು ದಿನಗಳಿಂದ ಟ್ಯೂಷನ್ ಫೀಸು ಕೊಡಲು ರಮ್ಯಾಗೆ ಆಗಿರಲಿಲ್ಲ. ಹೀಗಾಗಿ ಪ್ರಾಂಶುಪಾಲರು ತನ್ನ ಗಂಡನ ಬಳಿಗೆ ಕಳಿಸಿದ್ದಾಳಂತೆ.. ಅಲ್ಲಿ ಆಕೆಯ ಗಂಡ ಆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ


ಪೋಲೀಸರು ಈ ಬಗ್ಗೆ ಕೇಸು ದಾಖಲಿಸಿಕೊಂಡಿದ್ದು, ಲೇಡಿ ಪ್ರಾಂಶುಪಾಲರ ಪತಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada