Webdunia - Bharat's app for daily news and videos

Install App

'ಕ್ಯಾಟ'ನ್ನೇ ನುಂಗಿದ 'ಮೌಸ್': ಸುಷ್ಮಾ ವ್ಯಂಗ್ಯ

Webdunia
ಬುಧವಾರ, 2 ಡಿಸೆಂಬರ್ 2009 (09:33 IST)
ಸರ್ವರ್ ದೋಷದಿಂದಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ(ಕ್ಯಾಟ್) ಪರೀಕ್ಷೆಗಾಗಿ ಆಗಮಿಸಿದ ಸಾವಿರಾರು ವಿದ್ಯಾರ್ಥಿಗಳು ದೇಶಾದ್ಯಂತ ತೊಂದರೆ ಅನುಭವಿಸಿದ ವಿಚಾರ ಲೋಕಸಭೆಯಲ್ಲಿ ಪ್ರಸ್ತಾಪಗೊಂಡಿದ್ದು, ವಿಪಕ್ಷ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಲೋಕಸಭೆಯಲ್ಲಿ ವಿಪಕ್ಷ ಉಪನಾಯಕಿ ಸುಶ್ಮಾ ಸ್ವರಾಜ್ ಅವರು ಕ್ಯಾಟ್ ಮೌಸ್‌ಗೆ ಬಲಿಯಾಯಿತು ಎಂದು ವ್ಯಂಗ್ಯವಾಡಿದರು.

ಸುಷ್ಮಾ ಅವರು ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು, ಈ ಬೆಳವಣಿಗೆ ಪರೀಕ್ಷೆ ಬರೆಯಲು ತಯಾರಾಗಿ ಬಂದಿದ್ದ ಹಲವು ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಆಘಾತ ಉಂಟು ಮಾಡಿದೆ ಎಂದು ಹೇಳಿದರು. ಸರ್ವರ್ ಸಂಪರ್ಕ ಪಡೆಯವಲ್ಲಿನ ವೈಫಲ್ಯ ಅಥವಾ ಪ್ರಶ್ನೆ ಪತ್ರಿಕೆಯಲ್ಲಿನ ನಾಲ್ಕು ಆಯ್ಕೆಗಳಲ್ಲಿ ಎರಡನ್ನು ನೋಡಲು ಆಗದೇ ಇರುವುದು ವಿದ್ಯಾರ್ಥಿಗಳಿಗೆ ಆಘಾತ ಉಂಟುಮಾಡಿದೆ ಎಂದು ಹೇಳಿದರು.

ಈ ಮಧ್ಯೆ, ಕ್ಯಾಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗಾದ ತೊಂದರೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಸರ್ಕಾರ, ಇಂತಹ ಸಮಸ್ಯೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದೆ.

" ಸರ್ವರ್ ದೋಷದ ಕಾರಣ 45,367 ವಿದ್ಯಾರ್ಥಿಗಳ ಪೈಕಿ 8,297 ಮಂದಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಸಮಸ್ಯೆ ಕಂಡುಬಂದಿರುವ ಪ್ರದೇಶಗಳಲ್ಲಿ ಮರುಪರೀಕ್ಷೆ ನಡೆಸುವ ನಿರ್ಧಾರವನ್ನು ಐಐಎಂಗಳಿಗೆ ಬಿಡಲಾಗಿದೆ" ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಈ ಸಂದರ್ಭದಲ್ಲಿ ನುಡಿದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಅತೃಪ್ತ ಶಾಸಕರ ಭೇಟಿ ಬಳಿಕ ಸುರ್ಜೇವಾಲಾ ಹೀಗಂದ್ರು

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

Show comments