Select Your Language

Notifications

webdunia
webdunia
webdunia
webdunia

ಕೋರ್ಟಿಗೆ ಬರೋದಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡಿ : ಜಡ್ಜ್‌ಗೆ ಅಸ್ರಮ್‌ ಅವಾಜ್‌.

ಕೋರ್ಟಿಗೆ ಬರೋದಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡಿ : ಜಡ್ಜ್‌ಗೆ ಅಸ್ರಮ್‌ ಅವಾಜ್‌.
ಜೈಪುರ್‌ , ಸೋಮವಾರ, 30 ಸೆಪ್ಟಂಬರ್ 2013 (16:08 IST)
PTI
PTI
ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಬಂಧಿತನಾಗಿರುವ ಸ್ವಯಂಘೋಷಿತ ದೇವಮಾನವ ಅಸ್ರಮ್‌ ಬಾಪು ಮತ್ತೆ ಕ್ಯಾತೆ ತೆಗೆದಿದ್ದಾನೆ. "ನಾನು ಕೋರ್ಟಿಗೆ ಬರೋದಿಲ್ಲ. ನಿಮಗೆ ಬೇಕಿದ್ರೆ ವೀಡಿಯೋ ಕಾನ್ಫರೆನ್ಸ್ ಮೂಲಕ ನನ್ನ ವಿಚಾರಣೆ ಮಾಡಿ ಎಂದು ಜಡ್ಜ್‌ಗೆ ಅವಾಜ್‌ ಹಾಕಿದ್ದಾನೆ.

ಬಾಲಕಿಯ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಅಸ್ರಮ್‌ ಬಾಪುವನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಿತ್ತು. ಆದ್ರೆ ಇಂದು ನ್ಯಾಯಾಲಯಕ್ಕೆ ಕರೆತರಲು ಪೋಲೀಸರು ಯತ್ನಿಸಿದಾಗ ಅಸ್ರಮ್‌ ನಿರಾಕರಿಸಿದ್ದಾನೆ.

ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...

webdunia
PTI
PTI

ನಾನು ಕೋರ್ಟಿಗೆ ಬರುವುದಿಲ್ಲ. ಬೇಕಿದ್ದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ನನ್ನನ್ನು ವಿಚಾರಣೆ ಮಾಡಿ. ನಾನು ಹೇಳುವ ಹೇಳಿಕೆಯನ್ನು ರೆಕಾರ್ಡ ಮಾಡಿಕೊಳ್ಳಿ. ಅದರ ಮೇಲೆ ನ್ಯಾಯ ತೀರ್ಮಾನ ಮಾಡಿ. ಆದ್ರೆ ಏನೇ ಆದ್ರೂ ನಾನು ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ ಎಂದು ಖಡಕ್ಕಾಗಿ ಅವಾಜ್‌ ಹಾಕಿದ್ದಾನೆ.

ಮೊನ್ನೆಯಷ್ಟೇ ಕರ್ನಾಟಕದಲ್ಲಿಯೂ ಕೂಡ ಇಂಥದ್ದೇ ಘಟನೆಯೊಂದು ನಡೆದಿತ್ತು. ರೆಡ್ಡಿಯ ಆಪ್ತ ಅಲಿಖಾನ್‌ " ನಾನು ಕೋರ್ಟಿಗೆ ಬರಬೇಕೆಂದರೆ, ಹೆಲಿಕಾಪ್ಟರ್‌ಬೇಕು, ಇನೋವಾ ಕಾರ್‌ ಬೇಕು ಎಂದು ಕೇಳಿದ್ದ. ಇದರಿಂದ ನ್ಯಾಯಮೂರ್ತಿಗಳ ಪಿತ್ತ ನೇತ್ತಿಗೇರಿ "ಅವನನ್ನು ಬಿಎಂಟಿಸಿ ಬಸ್ಸಿಗೆ ಕಟ್ಟಿ ಎಳೆದು ತನ್ನಿ" ಎಂದು ಆದೇಶಿಸಿದರು. ಇದೀಗ ಅಸ್ರಮ್‌ ಬಾಪು "ನಾನು ಕೋರ್ಟಿಗೆ ಬರೋದಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡಿ" ಎಂದು ಕ್ಯಾತೆ ತೆಗೆದಿದ್ದಾನೆ. ನ್ಯಾಯಾಧೀಶರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೋ? ಅಸ್ರಮ್ ಗೆ ಹೇಗೆ ತಕ್ಕ ಉತ್ತರ ನೀಡ್ತಾರೋ ಅನ್ನೋದು ಸದ್ಯದ ಕುತೂಹಲ.

Share this Story:

Follow Webdunia kannada