Select Your Language

Notifications

webdunia
webdunia
webdunia
webdunia

ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಜಾತ್ಯಾತೀತ ಪಕ್ಷಗಳು ಒಂದಾಗಲೇಬೇಕು: ನಿತೀಶ್

ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಜಾತ್ಯಾತೀತ ಪಕ್ಷಗಳು ಒಂದಾಗಲೇಬೇಕು: ನಿತೀಶ್
ನವದೆಹಲಿ , ಗುರುವಾರ, 31 ಅಕ್ಟೋಬರ್ 2013 (12:51 IST)
PTI
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಪರಸ್ಪರ ವಾಗ್ದಾಳಿ ಮುಂದುವರಿದಿದೆ. ಕೆಲ ವ್ಯಕ್ತಿಗಳು ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಅವಸರದಲ್ಲಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ಸೇತರ ಎಡಪಕ್ಷಗಳ ಸಭೆಯಲ್ಲಿ ಮಾತನಾಡಿದ ಅವರು, ಕೆಂಪುಕೋಟೆಯಲ್ಲಿ ದ್ವಜ ಹಾರಿಸುವ ಕನಸನ್ನು ಹಲವಾರು ವ್ಯಕ್ತಿಗಳು ಕಾಣುತ್ತಿದ್ದಾರೆ. ಕನಸು ಕನಸುಗಳಾಗಿಯೇ ಉಳಿಯುತ್ತವೆ. ವಾಸ್ತವವಲ್ಲ ಎನ್ನುವುದು ಮೋದಿ ಅರಿಯಬೇಕಾಗಿದೆ ಎಂದು ಆರೋಪಿಸಿದ್ದಾರೆ.

ಮುಂಬರುವ ವರ್ಷದಲ್ಲಿ ಲೋಕಸಭೆಗೆ ಚುನಾವಣೆಗಳು ನಡೆಯಲಿರುವುದರಿಂದ ತೃತಿಯ ರಂಗ ರಚನೆಗೆ ಅಗತ್ಯವಾಗಿದೆ. ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಎಲ್ಲಾ ಜಾತ್ಯಾತೀತ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗುವ ಸಮಯ ಬಂದಿದೆ ಎಂದು ಕರೆ ನೀಡಿದ್ದಾರೆ.

ಏತನ್ಮಧ್ಯೆ, ಸಿಪಿಐ(ಎಂ) ಮುಖಂಡ ಸೀತಾರಾಮ್ ಯಚೂರಿ ಮಾತನಾಡಿ, ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡುವುದೇ ಸಭೆಯ ಪ್ರಮುಖ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.

Share this Story:

Follow Webdunia kannada