Select Your Language

Notifications

webdunia
webdunia
webdunia
webdunia

ಕೋಟಿ ರೂ. ಲಂಚ: ರಮಣ್ ಸಿಂಗ್ ವಿರುದ್ಧ ಆರೋಪ

ಕೋಟಿ ರೂ. ಲಂಚ: ರಮಣ್ ಸಿಂಗ್ ವಿರುದ್ಧ ಆರೋಪ
ರಾಂಚಿ , ಸೋಮವಾರ, 22 ಜುಲೈ 2013 (09:09 IST)
PR
PR
ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಮತ್ತು ಅವರ ಇಬ್ಬರು ಸಚಿವರು ಏಳುವರ್ಷಗಳ ಕಾಲಾವಧಿಯ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಕೋಟ್ಯಂತರ ರೂ. ಲಂಚಗಳನ್ನು ಸ್ವೀಕರಿಸಿದ್ದಾರೆಂದು ಪ್ರತಿಪಕ್ಷ ಕಾಂಗ್ರೆಸ್ ಭಾನುವಾರ ಆರೋಪಿಸಿದೆ. ಕಾಂಗ್ರೆಸ್ ಈ ಕುರಿತು ಸಿಡಿಯನ್ನು ಮತ್ತು ಆರೋಪಿಯೊಬ್ಬನ ಮಂಪರು ಪರೀಕ್ಷೆಯ ವರದಿಯನ್ನು ಬಹಿರಂಗಪಡಿಸಿದೆ. ಮಂಪರು ಪರೀಕ್ಷೆಗೆ ಒಳಪಟ್ಟ ಆರೋಪಿಯು ಮುಖ್ಯಮಂತ್ರಿ, ಇಬ್ಬರು ಕ್ಯಾಬಿನೆಟ್ ಸಚಿವರು ಮತ್ತು ಆಗಿನ ಪೊಲೀಸ್ ಪ್ರಧಾನ ನಿರ್ದೇಶಕ ಮತ್ತಿತರರಿಗೆ ತಲಾ ಒಂದು ಕೋಟಿ ರೂ.ಗಳನ್ನು ಬ್ಯಾಂಕ್ ಅಧಿಕಾರಿಗಳು ನೀಡಿದ್ದಾರೆಂದು ತಿಳಿಸಿರುವುದಾಗಿ ಕಾಂಗ್ರೆಸ್ ಆರೋಪಿಸಿದೆ.

2006ರ ಆಗಸ್ಟ್‌ನಲ್ಲಿ ರಾಯ್ಪುರ ಮೂಲದ ಇಂದಿರಾ ಪ್ರಿಯದರ್ಶಿನಿ ಮಹಿಳಾ ನಾಗರಿಕ ಸಹಕಾರಿ ಬ್ಯಾಂಕ್‌ನ ನಿರ್ದೇಶಕರ ಮಂಡಳಿ ನಕಲಿ ನಿಖರ ಠೇವಣಿ ರಸೀದಿಗಳು, ಡಿಮ್ಯಾಂಡ್ ಡ್ರಾಫ್ಟ್‌ಗಳು, ಪೇ ಆರ್ಡರ್‌ಗಳು, ನಕಲಿ ದಾಖಲೆಗಳ ಆಧಾರದ ಮೇಲೆ ಅನರ್ಹ ವ್ಯಕ್ತಿಗಳಿಗೆ ಸಾಲಗಳ ವಿತರಣೆ ಮಾಡಿದ ಆರೋಪ ಹೊರಿಸಲಾಯಿತು. ರಿಸರ್ವ್ ಬ್ಯಾಂಕ್ 2007ರ ಸೆಪ್ಟೆಂಬರ್‌ನಲ್ಲಿ ಬ್ಯಾಂಕ್ ಪರವಾನಗಿಯನ್ನು ರದ್ದುಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಮ್ಯಾನೇಜರ್ ಉಮೇಶ್ ಸಿನ್ಹಾ ಮತ್ತು ನಿರ್ದೇಶಕರನ್ನು ಬಂಧಿಸಲಾಗಿದೆ. ಉಮೇಶ್ ಸಿನ್ಹಾ ಅವರ ಮಂಪರು ಪರೀಕ್ಷೆ ವರದಿಯನ್ನು ಶನಿವಾರ ಬಿಡುಗಡೆ ಮಾಡಲಾಯಿತು.

Share this Story:

Follow Webdunia kannada